ಈ ತಿಂಗಳ ಆರಂಭದಲ್ಲಿ ಪೋರ್ಬ್ಸ್ ನ ಭಾರತೀಯ ಸೂಪರ್ ಶ್ರೀಮಂತರ 2020ರ ಪಟ್ಟಿ ಪ್ರಕಟವಾಗಿತ್ತು. ಅದರ ಪ್ರಕಾರ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ ಅಂಬಾನಿಯ ಸಂಪತ್ತಿನ ಪ್ರಮಾಣದಲ್ಲಿ 73ಶೇ. ಏರಿಕೆಯಾಗಿ 89 ಬಿಲಿಯ ಡಾಲರ್(ಅಂದರೆ ಸುಮಾರು 6.5 ಲಕ್ಷ ಕೋಟಿರೂ.) ಆಗಿದೆ.
ಈ ವಾರ ಯುಬಿಎಸ್ ಮತ್ತು ಪಿಡಬ್ಲ್ಯುಸಿ ಪ್ರಕಟಿಸಿದ ‘ಬಿಲಿಯನೇರ್ಸ್ ಇನ್ ಸೈಟ್ಸ್ ರಿಪೋರ್ಟ್ 2020’ ರ ಪ್ರಕಾರ ಭಾರತದ ಭಾರತದ ಡಾಲರ್ ಬಿಲಿಯಾಧಿಪತಿಗಳ ಸಂಪತ್ತಿನಲ್ಲಿ ಕೊವಿಡ್ ಕಾಲದ ಎಪ್ರಿಲ್ ಮತ್ತು ಜುಲೈ ನಡುವೆ 35ಶೇ. ಏರಿಕೆಯಾಗಿ ಅವರ ಒಟ್ಟು ಸಂಪತ್ತು 42 ಬಿಲಿಯ ಡಾಲರ್ ಗೇರಿದೆ.
ಅದರ ಮರುದಿನವೇ ಜಾಗತಿಕ ಹಸಿವಿನ ಸೂಚ್ಯಂಕ 2020 ಕೂಡ ಪ್ರಕಟವಾಗಿದೆ.ಅದರ ಪ್ರಕಾರ ಭಾರತದ ಸ್ಥಾನ 107 ದೇಶಗಳಲ್ಲಿ 94ನೇಯದು. ಅದಿನ್ನೂ ‘ತೀವ್ರ ಹಸಿವಿನ ವಿಧದಲ್ಲೇ ಇದೆ.
ವ್ಯಂಗ್ಯಚಿತ್ರ: ಸುಭಾನಿ, ಡೆಕ್ಕನ್ ಕ್ರಾನಿಕಲ್
ಬಹುಶಃ ಈ ವ್ಯಂಗ್ಯಚಿತ್ರಕಾರರು ಬೇಕೆಂದೇ ಬಡವನನ್ನು ಶ್ರೀಮಂತನ ಭೋಜನ ಟೇಬಲ್ ಬಳಿ ಕೂರಿಸಿದ್ದಾರೆ.
ಅದು ಹೇಗೋ ಬಡವರ ಗೇಣುದ್ದ ಹೊಟ್ಟೆಗೂ ಪತ್ರಿಕೆಗಳಲ್ಲಿ ಜಾಗ ಸಿಕ್ಕಿದೆಯಲ್ಲಾ
ಎಂದು ಈ ವ್ಯಂಗ್ಯಚಿತ್ರಕಾರರಿಗೆ ಸಹಜ ಆಶ್ಚರ್ಯ
ಪಿ.ಮಹಮ್ಮದ್, ಆಂದೋಲನ
ಈ ಅಧ್ಯಯನದ ಪ್ರಕಾರ ದೇಶದ 14ಶೇ. ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.
76ಶೇ.ಗ್ರಾಮೀಣ ಭಾರತೀಯರಿಗೆ ಪೌಷ್ಟಿಕ ಊಟ ಪಡೆಯಲಾಗುತ್ತಿಲ್ಲ ಎಂದು ಇನ್ನೊಂದು ‘ಫುಡ್ ಪಾಲಿಸಿ ಪತ್ರಿಕೆಯ ವರದಿ ಹೇಳುತ್ತದೆ(ದಿ ಹಿಂದು ಅಕ್ಟೊಬರ್18)
‘ತಿನ್ನಲು ಬಿಡುವುದಿಲ್ಲ‘!
ಬೇಟೀ ಬಚಾವೋ ನಂತರ ಈಗ ‘ತಿನ್ನಲು ಬಿಡುವುದಿಲ್ಲ‘ ಎಂಬ ‘ಎಚ್ಚರಿಕೆ’ ಯೂ ನಿಜವಾಗುವಂತೆ ಕಾಣುತ್ತದೆ!
ವ್ಯಂಗ್ಯಚಿತ್ರ: ಶೇಖರ್ ಗುರೇರ/ ಫೇಸ್ ಬುಕ್
ದಕ್ಷಿಣ ಏಷ್ಯಾದ ಎಲ್ಲ ನೆರೆ ದೇಶಗಳಿಗಿಂತ ಕೆಳಗೆ!
ಅಫಘಾನಿಸ್ತಾನ ಬಿಟ್ಟು ಬೇರೆಲ್ಲ ದಕ್ಷಿಣ ಏಷ್ಯಾದ ನಮ್ಮ ನೆರೆದೇಶಗಳ ಹಸಿವಿನ ಸೂಚ್ಯಂಕ ನಮಗಿಂತ ಉತ್ತಮವಾಗಿದೆ. ಶ್ರೀಲಂಕಾ (64); ನೇಪಾಳ(73); ಬಾಂಗ್ಲಾದೇಶ(75); ಮ್ಯಾನ್ಮರ್(78); ಪಾಕಿಸ್ತಾನ(88); ಅಫಘಾನಿಸ್ತಾನ(99)
ಬಾಂಗ್ಲಾದೇಶ ಭಾರತವನ್ನು ತಲಾ ಜಿಡಿಪಿಯಲ್ಲಿ ಹಿಂದೆ ಹಾಕಿರುವಾಗ, ನಾವೂ (ಹಸಿವಿನ ಸೂಚ್ಯಂಕದಲ್ಲಿ) ಭಾರತವನ್ನು ಹಿಂದಕ್ಕೆ ಹಾಕಬಲ್ಲೆವು ಎಂಬ ಆಶಾಭಾವನೆ ಅಫಘಾನಿಸ್ತಾನದ ಜನರಲ್ಲೂ ಮೂಡಿರಬಹುದು ಎನ್ನುತ್ತಾರೆ ಈ ವ್ಯಗ್ಯಚಿತ್ರಕಾರ;
ನಾವೂ ಮಾಡಬಲ್ಲೆವು
ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ
‘ಮೋದೀಜಿ ಹೈ ತೊ ಮುಮ್ಕಿನ್ ಹೈ‘ ಎಂದು ನಮ್ಮಲ್ಲಿಯೂ ಕೆಲವರು ಹೇಳಬಹುದು.
ಬೇಕಾಗಿದೆ..ಹೊಸ ಘೋಷಣೆ!
ಹಸಿವಿನ ಸೂಚ್ಯಂಕಕ್ಕಿಂತ ಸ್ವಲ್ಪವೇ ಮೊದಲು ಪ್ರಕಟವಾಗಿದ್ದ ಬಾಗ್ಲಾದೇಶದ ತಲಾ ಜಿಡಿಪಿಯ ಸುದ್ದಿ ವ್ಯಂಗ್ಯಚಿತ್ರಕಾರರನ್ನು ಸೆಳೆದಿತ್ತು.ಆಗ ಮೋದಿ ಸರಕಾರ ಹಣದುಬ್ಬರವನ್ನು ಗಣನೆಗೆ ತಗೊಂಡರೆ ಭಾರತದ ತಲಾ ಜಿಡಿಪಿ ಈಗಲೂ ಬಾಂಗ್ಲಾದೇಶಕ್ಕಿಂತ ಹೆಚ್ಚಿದೆ ಎಂದು ಸಮಜಾಯಿಷಿ ಕೊಡುವ ಮಟ್ಟಕ್ಕೆ ಇಳಿಯಬೇಕಾಗಿ ಬಂತು.
ಆದರೆ ಹಸಿವಿನ ಸೂಚ್ಯಂಕದ ವಿಷಯದಲ್ಲಿ ಅಂತಹ ಸಮಜಾಯಿಷಿಯೂ ಸಿಗುತ್ತಿಲ್ಲ.ಅದೇ ಬಾಂಗ್ಲಾದೇಶ ನಮಗಿಂತ 19 ಸ್ಥಾನ ಮೇಲಿದೆ. ಭಾರತ ಕಳೆದ ವರ್ಷ 117 ದೇಶಗಳಲ್ಲಿ 102ನೇ ಸ್ಥಾನದಲ್ಲಿತ್ತು. ಅಂದರೆ ನಮ್ಮ ಕೆಳಗೆ 15 ದೇಶಗಳಿದ್ದವು; ಈ ಬಾರಿ ನಮ್ಮ ಕೆಳಗಿರುವ ದೇಶಗಳು 13.
ಆದ್ದರಿಂದ 102 ರಿಂದ 94ಕ್ಕೇರಿದೆಯಲ್ಲಾ ಎಂಬ ಸಮಜಾಯಿಷಿ ಕೊಡುವ ಬದಲು ಏನಾದರೂ ಮಾಡಲೇಬೇಕಲ್ಲ ಎಂದು ಸರಕಾರಕ್ಕೂ ಅನಿಸಿಬಹುದೇ? ಏನು ಮಾಡುವುದು? ..ಹೊಸದೊಂದು ಘೋಷಣೆ..!
ನಮಗೀಗ ಬೇಕೇ ಬೇಕಾಗಿದೆ…. ಹೊಸದೊಂದು ಘೋಷಣೆ!
ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ/ಫೇಸ್‍ಬುಕ್