ಸದಾ೯ರ ಅಹಮದ್ ಖುರೇಷಿ ನಿಧನ

ಬೆಂಗಳೂರು : ಟಿಪ್ಪು ಸುಲ್ತಾನ ಸಂಯುಕ್ತ ರಂಗದ  ಅಧ್ಯಕ್ಷ ಹಾಗೂ ಹಿರಿಯ ಮುಸ್ಲಿಂ ನಾಯಕ ಸರ್ದಾರ ಮಹಮದ್ದ ಖುರೇಶಿ ನಿಧನ ಹೊಂದಿದ್ದಾರೆ.  ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಒಂದು ವಾರದಿಂದ  ವೈಟ್ ಫೀಲ್ಡ್  ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದುರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.  ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಟಿಪ್ಪು ಸುಲ್ತಾನ  ಹೆಸರಿನಲ್ಲಿ ಸಂಘಟನೆಯನ್ನು ಬಲಪಡಿಸಿದ್ದ ಖುರೇಷಿಯವರು ಪ್ರಗತಿಪರ ಚಳುವಳಿಯ ಜೊತೆ ಗುರುತಿಸಕೊಂಡಿದ್ದವರು. ಕನ್ನಡಪರ – ದಲಿತಪರ ಹೋರಾಟದಲ್ಲಿ  ಮುಂಚೂಣಿ ಪಾತ್ರ  ವಹಿಸುವ ಮೂಲಕ ಸಮಾಜದ ಎಲ್ಲ ವರ್ಗದವರ ಪ್ರಿತಿಗೆ ಪಾತ್ರರಾಗಿದ್ದರು. ಖುರೇಷಿಯರು ಸದಾಕಾಲ ಜೀವಪರವಾಗಿ ಅಲೋಚನೆ ಮಾಡುತ್ತಿದ್ದರು,  ದೇಶದ ಸೌಹಾರ್ಧತೆ ರಕ್ಷಿಸಲು ಸಾಕಷ್ಟು ಶ್ರಮ ಹಾಕಿದ್ದರು ಎಂದು  ಸೌಹಾರ್ಧ ಕರ್ನಾಟಕದ ಎಸ್.ವೈ ಗುರುಶಾಂತ್ ಖುರೇಷಿಯವರ ಹೋರಾಟಗಳನ್ನು ಮೆಲಕು ಹಾಕಿದ್ದಾರೆ.

 

ಖುರೇಶಿಯವರು ಟೀಪು ಜಯಂತಿ, ಗುಜರಾತ್ ಹತ್ಯಾಕಾಂಡ ವಿರುದ್ಧ ಹೋರಾಟ, ಸಾಚಾರ್ ಸಮಿತಿ ಶಿಫಾರಸ್ಸು ಜಾರಿಗಾಗಿ ಹೋರಾಟ, ಸೌಹಾರ್ದತೆಗಾಗಿ ಕನಾ೯ಟಕ ಚಳುವಳಿ, ಗಾಂಧೀಜಿ ಹುತಾತ್ಮ ದಿನದ ಸ್ಮರಣೆ, ಸಕಾ೯ರಿ ಭೂಮಿ ಹರಾಜು ವಿರುದ್ಧ ಹೋರಾಟ, ಜನತೆಯ ಸ್ವತಂತ್ರೋತ್ಸವದ ಆಗಸ್ಟ್ 14 ರ ಕಾಯ೯ಕ್ರಮ, ಹೀಗೆ ಹಲವಾರು ಜಂಟಿ ಚಳುವಳಿ ಭಾಗವಾಗಿ ಕೆಲಸವನ್ನು ಮಾಡಿದವರು ಎಂದು ಕಾರ್ಮಿಕ ಮುಖಂಡ ಕೆ.ಎನ್. ಉಮೇಶ್  ಖುರೇಶಿಯವರ ಒಡನಾಟದ  ಘಟನೆಗಳನ್ನು ಮೆಲಕು ಹಾಕಿದರು.

ಖುರೇಷಿಯವರು ಪ್ರತಿ ವರ್ಷ ಟಿಪ್ಪು ಸುಲ್ತಾನ ಪ್ರಶಸ್ತಿಯನ್ನು ನೀಡುತ್ತಿದ್ದರು. ಅದು 1 ಲಕ್ಷ ರೂ  ನಗದನ್ನು ಒಳಗೊಂಡಿರುತ್ತಿತ್ತು. ಖುರೇಷಿಯವರ ನಿಧನ ತುಂಬಲಾರದ ನಷ್ಟ ಎಂದು ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *