ವಿಶ್ವಸಂಸ್ಥೆ@75 : ಏಕಪಕ್ಷೀಯತೆ ಹಿಮ್ಮೆಟ್ಟಿಬೇಕು, ಬಹುಪಕ್ಷೀಯತೆ ಕೊರತೆ ನೀಗಿಸಬೇಕು

ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವ ಉದ್ದೇಶದಿಂದ ಎರಡನೇ ಮಹಾ ವಿಶ್ವಯುದ್ಧದ ನಂತರ, ವಿಶ್ವ ಸಂಸ್ಥೆ (ಯು.ಎನ್) ಯನ್ನು 75 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಆದರೆ ಈಗ ಯು.ಎನ್ ಪರಿಣಾಮಕಾರಿಯಲ್ಲದ ಇನ್ನೊಂದು (ಮೊದಲ ವಿಶ್ವಯುದ್ಧದ ನಂತರ ಇನ್ನೊದು ವಿಶ್ವಯುದ್ಧ ಆಗದಂತೆ ತಡೆಟ್ಟುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ) ಲೀಗ್ ‌ಆಫ್ ನೇಷನ್‌ ಆಗಿದೆ ಎಂದು ಹೇಳಲು ವಿಷಾದವಾಗುತ್ತದೆ. ವಿಶ್ವಸಂಸ್ಥೆಯ ಈ ರೀತಿಯ ಸ್ಥಿತಿಗೆ ಮೂಲ ಕಾರಣ ಯು.ಎಸ್‌ ಎಂದು ಹೇಳಲು ಯಾವ ದೇಶಕ್ಕೂ ಮುಜುಗರ ಇರಲಾರದು.

– ನಾಗರಾಜ ನಂಜುಂಡಯ್ಯ

ಸೆಪ್ಟೆಂಬರ್ 21, ವಿಶ್ವಸಂಸ್ಥೆಯ (ಯು.ಎನ್) 75ನೇ ವಾರ್ಷಿಕೋತ್ಸವ ಇತ್ತು. ಪ್ರಪಂಚವು ಬಹುಪಕ್ಷೀಯ ಸವಾಲುಗಳನ್ನು ಹೆಚ್ಚೆಚ್ಚಾಗಿ ಎದುರಿಸಬೇಕಾಗಿದೆ. ಏಕಪಕ್ಷೀಯ ಹೇರಿಕೆ ಹೆಚ್ಚಾಗಿ ಪ್ರಾಧಾನ್ಯ ಹೊಂದಿದೆ. ಆದರೆ, ಬಹುಪಕ್ಷೀಯವಾಗಿ ಸಾಕಷ್ಟು ಉತ್ತರಗಳು ಸಿಗುತ್ತಿಲ್ಲ. ಈ ಕೊರತೆ ನೀಗಲು ಸದಸ್ಯ ದೇಶಗಳ ಸಹಕಾರ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ-75 ಭಾಗವಾಗಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅದರ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹೇಳಿದ್ದಾರೆ. ಏಕಪಕ್ಷೀಯತೆಯನ್ನುಹಿಮ್ಮೆಟ್ಟಿಸಬೇಕು ಎಂದು ಯು.ಎಸ್ ಹೆಸರನ್ನು ಹೇಳದೆ ಪರೋಕ್ಷವಾಗಿತಿಳಿಸಿದರು.
ಆಧುನಿಕ ಇತಿಹಾಸದಲ್ಲಿ ನಾವು ಪ್ರಮುಖ ಶಕ್ತಿ ರಾಷ್ಟ್ರಗಳ ನಡುವೆ ಮಿಲಿಟರಿ ಮುಖಾಮುಖಿಯಾಗದೇ 75 ವರ್ಷಗಳನ್ನು ಕಳೆದಿದ್ದೇವೆ. ಇದು ಸದಸ್ಯ ರಾಷ್ಟಗಳು ಹೆಮ್ಮೆ ಪಡುವಂತಹ ದೊಡ್ಡ ಸಾಧನೆಯಾಗಿದೆ. ಇದನ್ನು ಕಾಪಾಡಿಕೊಂಡು ಹೋಗಲು ಪ್ರಯತ್ನ ಪಡಬೇಕಾಗಿದೆ ಎಂದು ಗುಟೆರಸ್ ಹೇಳಿದರು.
ಆದಾಗ್ಯೂ, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಲಿಂಗ ಮತ್ತು ಜನಾಂಗೀಯ ಅಸಮಾನತೆಯನ್ನು ಜಾಗತಿಕವಾಗಿ ಮಾನವ ಹಕ್ಕುಗಳ ರಕ್ಷಣೆಯ ಮಹಾದೊಡ್ಡ ಸವಾಲುಗಳಲ್ಲಿ ಮೊದಲನೆಯದು ಎಂದು ಗುರುತಿಸಬೇಕಾಗಿದೆ ಎಂದು ಇತ್ತೀಚೆಗೆ ಯು.ಎಸ್ ನಲ್ಲಿ ನಡೆದ ಜಾರ್ಜ್ ಪ್ಲೋಯಿಡ್ ಹತ್ಯೆಯ ನಂತರ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸದೆ ಸೂಚ್ಯ ವಾಗಿ ತಿಳಿಸಿದರು. ಇರಾಕ್‌ ಯುದ್ಧದ ಹಿಂದಿರುವ ಯು.ಎಸ್ ನ ಸಂಚುಗಳನ್ನು ಮತ್ತು ಅದು ಮಾಡಿದ ಅಂತರಾಷ್ಟ್ರೀಯ ಒಪ್ಪಂದಗಳನ್ನು ನೆನಪಿಸುತ್ತಾ, ಪ್ಯಾಲೆಸ್ಟೈನ್ ಭೂ ಪ್ರದೇಶದಲ್ಲಿ ಯು.ಎಸ್ ಬೆಂಬಲದಿಂದ ಇಸ್ರೇಲ್ ನ ಆಕ್ರಮಣಶೀಲ ಭೂ ಸ್ವಾಧೀನ  ಇದರಿಂದಆ ಪ್ರದೇಶದಲ್ಲಿ ಉಂಟಾಗಿರುವ ರಾಜಕೀಯ ಉದ್ವಿಗ್ನತೆ, ದ್ವೇಷ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯು ಹೆಚ್ಚಿರುವುದು.–ಗುಟೆರಸ್ ಪಟ್ಟಿ ಮಾಡಿದ ಸವಾಲುಗಳಲ್ಲಿ ಸೇರಿಕೊಂಡಿವೆ.
ಕೋವಿಡ್-19 ಸಾಂಕ್ರಾಮಿಕವು ವಿಶ್ವದ ಆರೋಗ್ಯ ಸಂರಕ್ಷಣಾ ದುರ್ಬಲತೆಗಳನ್ನು ಎತ್ತಿ ತೋರಿಸಿದೆ. ನಾವೆಲ್ಲಾ ಒಂದಾಗಿ ಈ ಸಾಂಕ್ರಾಮಿಕ ರೋಗಕ್ಕೆ ಪರಿಹಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮಲ್ಲಿ ಬಹುಪಕ್ಷೀಯ ಪರಿಹಾರಗಳ ಕೊರತೆ ಇದೆ ಎಂದು ಗುಟೆರೆಸ್ ಗುರುತಿಸಿದರು.
ಅವರು ಸಾಂಕೇತಿಕವಾಗಿ ಕೆಲವು ಕೊರತೆಗಳನ್ನು ಗುರುತಿಸಿದರೂ ಸಹಾ, ವಿಶ್ವಸಂಸ್ಥೆಯ ನಿಜವಾದ ಉದ್ದೇಶಗಳನ್ನು ಜಾರಿಗೊಳಿಸಲು, ಅಡ್ಡಿಯಾಗಿರುವ ಯು.ಎಸ್ ನ ಉಲ್ಲಂಘನೆಗಳ ಬಗ್ಗೆ ನೇರವಾಗಿ ಏನನ್ನು ಹೇಳಲಿಲ್ಲ.

ಎಪ್ಪತೈದನೇಯ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಅವಲೋಕನ ಮಾಡಬೇಕಾದ ಪ್ರಮುಖ ವಿಚಾರಗಳಲ್ಲಿ, ಯುಎಸ್ ಮಾಡಿರುವ ಒಪ್ಪಂದಗಳ ಸರ್ಜರಿಗಳನ್ನು ಜಗತ್ತಿಗೆ ತಿಳಿಸಬೇಕಾಗಿದೆ. ಅದರಲ್ಲೂ ಕಳೆದ ಮೂರು-ನಾಲ್ಕು ವರ್ಷಗಳಿಂದೀಚೆಗೆ, ಅಧ್ಕಕ್ಷ ಟ್ರಂಪ್‌ರು ಸಾಕಷ್ಟು ಒಪ್ಪಂದಗಳನ್ನುಉಲ್ಲಂಘನೆ ಮಾಡಿದ್ದಾರೆ. ಅದು ಹವಾಮಾನ ಬದಲಾವಣೆಯ ಪ್ಯಾರಿಸ್ ‌ಒಪ್ಪಂದದಿಂದ ಮೊದಲುಗೊಂಡು, ಇತ್ತೀಚಿನ ಇರಾನ್‌ ಕುರಿತಾದ ಪರಮಾಣು ಒಪ್ಪಂದದ ಉಲ್ಲಂಘನೆ ಮತ್ತು ಕೋವಿಡ್-19 ರ ಮಹಾಮಾರಿ ಜಗತ್ತಿಗೆ ತಂದೊಡ್ಡಿರುವ ಅಪಾಯಕಾರಿ ಸನ್ನಿವೇಶದಲ್ಲಿ ವಿಶ್ವಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ದೇಣಿಗೆ ವಾಪಸ್ ಪಡೆದಿದ್ದು, ಹೀಗೆ ಯುಎಸ್ ಮಾಡಿರುವ ಉಲ್ಲಂಘನೆಗಳ ಬಗ್ಗೆ ಯುಎನ್ ಸುಮ್ಮನೆ ಕುಳಿತಿರುವುದು ಏಕೆ ? ಇದರಿಂದ ವಿಶ್ವ ಸಂಸ್ಥೆ ಕೇವಲ ಯುಎಸ್ ನ ಕೈಗೊಂಬೆಯಾಗಿತನ್ನ ನಿಜವಾದ ಉದ್ದೇಶಗಳನ್ನು ಗಾಳಿಗೆ ತೂರಿದಂತಾಗಲಿಲ್ಲವೇ?

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ ಇವುಗಳಿಗೆ ಉತ್ತರ ನೀಡುವಂತಾಗಬೇಕು. ಕಳೆದು ಹೋಗುತ್ತಿರುವ ತನ್ನ ಸಾಮ್ರಾಜ್ಯಶಾಹಿ ಮಿಲಿಟರಿ ಸಾಮರ್ಥ್ಯವನ್ನು ಮರು ಸ್ಥಾಪಿಸಲು ವ್ಯೂಹ ರಚಿಸುತ್ತಿರುವ ಯುಎಸ್ ಗೆ ಈ ಸಂದರ್ಭದಲ್ಲಿ ಬಹುಪಕ್ಷೀಯ ನಿಲುವುಗಳನ್ನು ರೂಪಿಸುವ ಮೂಲಕ ಎಚ್ಚರಿಕೆಯನ್ನು ನೀಡಿಬೇಕಾಗಿದೆ. ಆ ನಿಟ್ಟಿನಲ್ಲಿ 75 ನೇ ವಾರ್ಷಿಕೋತ್ಸವ ನಾಂದಿ ಹಾಡಬೇಕಿತ್ತು.

ವಿಶ್ವಶಾಂತಿಯನ್ನುಕಾಪಾಡುವ ಧ್ಯೇಯವು ಆರಂಭಿಕ ದಶಕಗಳಲ್ಲಿ ಯು.ಎಸ್ ಮತ್ತು ಸೋವಿಯತ್‌ ಒಕ್ಕೂಟ ಮತ್ತು ಅವುಗಳ ಮಿತ್ರ ರಾಷ್ಟ್ರಗಳ ನಡುವೆ ಶೀತಲ ಸಮರದಿಂದ ಜಟಿಲವಾಗಿತ್ತು. ವಿಶ್ವಸಂಸ್ಥೆಯ ಕಾರ್ಯಾಚರಣೆಗಳು ಮೊದಲು ನಿರಾಯುಧವಾಗಿದ್ದವು. ಮುಖ್ಯವಾಗಿ ಮೇಲ್ವಿಚಾರಣೆ, ವರದಿ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವ ಪಾತ್ರವನ್ನು ನಿರ್ವಹಣೆ ಮಾಡುತ್ತಿತ್ತು. 1960 ರದಶಕದ ನಂತರ,

ವಸಾಹತುಗಳ ವಿಮೋಚನೆ, ಸಮನ್ವಯ ಒಪ್ಪಂದಗಳು ಇAತಹ ನೀತಿ-ನಿರೂಪಣೆಯಿಂದಾಗಿ, ಯುಎನ್ ಸದಸ್ಯತ್ವಗಮನಾರ್ಹವಾಗಿ ಬೆಳೆಯಿತು. ಆದರೀಗ, ಯುಎನ್‌ಯುಎಸ್ ನ ಅಡಿಯಾಳಾಗಿ ಸೊರಗಿ ಹೋಗುತ್ತಿದೆಎಂದರೆಅತಿಶಯೋಕ್ತಿಯಾಗಲಾರದು.
ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವಉದ್ದೇಶದಿಂದಎರಡನೇ ಮಹಾ ವಿಶ್ವಯುದ್ಧದ ನಂತರ, ವಿಶ್ವ ಸಂಸ್ಥೆ (ಯು.ಎನ್) ಯನ್ನು75ನೇ ವರ್ಷಗಳ ಹಿಂದೆಸ್ಥಾಪಿಸಲಾಯಿತು. ಆದರೆ ಈಗಯು.ಎನ್ ಪರಿಣಾಮಕಾರಿಯಲ್ಲದಇನ್ನೊಂದು(ಮೊದಲ ವಿಶ್ವಯುದ್ಧದ ನಂತರ ಇನ್ನೊಂದು ವಿಶ್ವಯುದ್ಧಆಗದಂತೆತಡೆUಟ್ಟುವಉದ್ದೇದಿಂದ ಸ್ಥಾಪಿಸಲಾಗಿದ್ದ) ಲೀಗ್‌ಆಫ್ ನೇಷನ್‌ಆಗಿದೆಎಂದು ಹೇಳಲು ವಿಷಾದವಾಗುತ್ತದೆ. ವಿಶ್ವಸಂಸ್ಥೆಯ ಈ ರೀತಿಯ ಸ್ಥಿತಿಗೆ ಮೂಲ ಕಾರಣ ಯು.ಎಸ್‌ಎಂದು ಹೇಳಲು ಯಾವ ದೇಶಕ್ಕೂ ಮುಜುಗರ ಇರಲಾರದು.
ಏಪ್ರಿಲ್ 25, 1945 ರಲ್ಲಿ ಸುಮಾರು 50 ಸರ್ಕಾರಗಳು ‘ಸ್ಯಾನ್ ಫ್ರಾನ್ಸಿಸ್ಕೋ’ ದ ಸಮ್ಮೇಳನದಲ್ಲಿ ಭೇಟಿಯಾಗಿ ಯು.ಎನ್ ಗೆ ಒಂದು ಪರಿಣಾಮಕಾರಿ ಚಾರ್ಟರ್‌ ಅನ್ನುರೂಪಿಸಲು ಆರಂಭಿಸಿದವು. ಇದನ್ನು 25 ಜೂನ್ 1945 ರಲ್ಲಿ ಅಂಗೀಕರಿಸಲಾಯಿತು. ಅದಾದ ನಂತರ ವಿಶ್ವಸಂಸ್ಥೆ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.

ಅಂಗೀಕೃತ ಚಾರ್ಟರ್ ಗೆ ಅನುಗುಣವಾಗಿ, ಸಂಸ್ಥೆಯ ಉದ್ದೇಶಗಳು ಸ್ಪಷ್ಟತೆ ಹೊಂದಿದ್ದವು. ಆ ಉದ್ದೇಶಗಳಲ್ಲಿ ಪ್ರಮುಖವಾದವುಗಳೆಂದರೆ, ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನುಕಾಪಾಡುವುದು, ಮಾನವ ಹಕ್ಕುಗಳನ್ನು ರಕ್ಷಿಸುವುದು, ಮಾನವೀಯ ನೆರವು ನೀಡುವುದು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದಗಳನ್ನು ಎತ್ತಿಹಿಡಿಯುವುದು ಹೀಗೆ ಹತ್ತು ಹಲವು ಉದ್ದೇಶಗಳ ಬಗ್ಗೆ ಸ್ಪಷ್ಟ ಮತ್ತು ಪಕ್ವತೆಯನ್ನು ಹೊಂದಿ, ವಿಶ್ವಸಂಸ್ಥೆ ತನ್ನಕಾರ್ಯಾಚರಣೆ ಆರಂಭಿಸಿತು.
ಇದು ಸ್ಥಾಪನೆಗೊಂಡಾಗ, 51 ಸದಸ್ಯ ರಾಷ್ಟ್ರಗಳನ್ನು ಯು.ಎನ್ ಹೊಂದಿತ್ತು. 2011 ರಲ್ಲಿ ದಕ್ಷಿಣ ಸುಡಾನ್ ಸೇರ್ಪಡೆಯೊಂದಿಗೆ, ಸದಸ್ಯತ್ವವು ಪ್ರಸ್ತುತ 193 ಆಗಿದೆ. ಈಗ ವಿಶ್ವಸಂಸ್ಥೆಯು ಪ್ರಪಂಚದ ಎಲ್ಲಾ ಸಾರ್ವಭೌಮ ರಾಜ್ಯಗಳನ್ನು ಪ್ರತಿನಿಧಿಸುತ್ತದೆ. ಯುಎನ್ ಪ್ರಮುಖವಾಗಿ, ಆರು ಅಂಗಗಳನ್ನು ಹೊಂದಿದೆ. ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ಇಕೋಸಾಕ್), ಟ್ರಸ್ಟೀಶಿಪ್ ಕೌನ್ಸಿಲ್,  ಅಂತರಾಷ್ಟ್ರೀಯ ನ್ಯಾಯಾಲಯ, ಮತ್ತು ಯುಎನ್ ಸೆಕ್ರೆಟರಿಯೇಟ್. ಯು.ಎನ್ ವ್ಯವಸ್ಥೆಯು ವಿಶ್ವ ಬ್ಯಾಂಕ್  ಗುಂಪು, ವಿಶ್ವಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ), ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯೂಎಫ್ ಪಿ), ಯುನೆಸ್ಕೊ ಮತ್ತು ಯುನಿಸೆಫ್ ನಂತಹ ವಿಶೇಷ ಏಜೆನ್ಸಿ ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಯು.ಎನ್ ನ ಕೆಲಸಕಾರ್ಯಗಳಲ್ಲಿ ಭಾಗವಹಿಸಲು ಸರ್ಕಾರೇತರ ಸಂಸ್ಥೆಗಳು ಇಕೋಸೊಕ್ ಮತ್ತು ಏಜೆನ್ಸಿಗಳಲ್ಲಿ ಸಮಾಲೋಚನಾ ಸ್ಥಾನವನ್ನು ಹೊಂದಿದೆ.
ಯು.ಎನ್ ನ ಮುಖ್ಯ ಆಡಳಿತಾಧಿಕಾರಿ ಸೆಕ್ರೆಟರಿ ಜನರಲ್ ಪ್ರಸ್ತುತ ಪೋರ್ಚುಗೀಸ್‍ ‌ರಾಜಕಾರಣಿ ಮತ್ತು ರಾಜತಾಂತ್ರಿಕ ಅಂಟೋನಿಯೋ ಗು ಟೆರೆಸ್‌ ಅವರು ತಮ್ಮ 5 ವರ್ಷಗಳ ಅವಧಿಯನ್ನು 1 ಜನವರಿ 2017:ರಂದು ಪ್ರಾರಂಭಿಸಿದರು. ಸಂಸ್ಥೆಯು ಅದರ ಸದಸ್ಯ ರಾಷ್ಟ್ರಗಳಿಂದ ಮೌಲ್ಯಮಾಪನ ಮತ್ತು ಸ್ವಯಂ ಪ್ರೇರಿತ ಕೊಡುಗೆಗಳಿಂದ ಹಣಕಾಸು ಒದಗಿಸುತ್ತದೆ.
ಯು.ಎನ್ ನ ಅಧಿಕಾರಿಗಳು ಮತ್ತು ಏಜೆನ್ಸಿಗಳು ಅನೇಕ ನೊಬೆಲ್ ಶಾಂತಿ ಬಹುಮಾನಗಳನ್ನು ಗೆದ್ದಿವೆ. ಆದರೂ, ಕೆಲವು ವ್ಯಾಖ್ಯಾನಕಾರರು ಸಂಸ್ಥೆ ಶಾಂತಿ ಮತ್ತು ಮಾನವಅಭಿವೃದ್ಧಿ ಗೆ ಒಂದು ಪ್ರಮುಖ ಶಕ್ತಿ ಎಂದು ನಂಬಿದರೆ, ಇನ್ನೂ ಕೆಲವರುಅದನ್ನು ನಿಷ್ಪರಿಣಾಮಕಾರಿ, ಪಕ್ಷಪಾತಅಥವಾ ಭ್ರಷ್ಟಎಂದುಕರೆಯುತ್ತಾರೆ.

Donate Janashakthi Media

Leave a Reply

Your email address will not be published. Required fields are marked *