ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಕುಟುಂಬಕ್ಕೆ ರಕ್ಷಣೆ ನೀಡಲು ಪ್ರತಿಭಟನಕಾರರ ಮನವಿ
ಬಳ್ಳಾರಿ : ಮಹಿಳೆ ಮೇಲೆ ದೌರ್ಜನ್ಯಗಳು ನಿರಂರವಾಗಿ ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟುವಿಕೆಯಲ್ಲಿ ಸರ್ಕಾರ ಸರಿಯಾದ ಕ್ರಮಗಳನ್ನು ಅನುಸರಿಸುತ್ತಿಲ್ಲದಿರುವುದು. ಹೀಗಾಗಿಯೇ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಮತ್ತೊಂದು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ.
ರೈತ ಮಹಿಳೆ, ರೈತಪರ ಹೋರಾಟಗಾರ್ತಿ ಜ್ಯೋತಿ ಕನಕಮ್ಮನವರ್ ಮೇಲೆ ಕ್ಷುಲ್ಲಕ ಕಾರಣಕ್ಕೆ ದೌರ್ಜನ್ಯ ಮಾಡಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟು, ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲಾ ಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ನಡೆದಿದೆ.
ಈ ದುಷ್ಕರ್ಮಿಗಳ ಮೇಲೆ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು. ಈ ಘಟನೆಯನ್ನುಉನ್ನತ ತನಿಖೆ ನಡೆಸಿ ಶಿಕ್ಷಗೊಳಪಡಿಸಲು ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳಾ ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹಿಸಿ ಶುಕ್ರವಾರ ದಲಿತ ಮಹಿಳಾ ಹಕ್ಕುಗಳ ಸಮಿತಿ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಜಿಲ್ಲಾಧಿಕಾರಿಗಳಿಗೆ ತಹಸಿಲ್ದಾರ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂರ್ದಭದಲ್ಲಿ ದಲಿದ ಹಕ್ಕುಗಳ ಸಮಿತಿ ಸಂಚಾಲಕರಾದ ಬಿ.ಮಾಳಮ್ಮ ದೇ.ಮ.ವಿ.ಸಂಘದ ಅಧ್ಯಕ್ಷರಾದ ಬಿ.ಮೈಲಮ್ಮ, ಕಾರ್ಯದರ್ಶಿಯಾದ ಪಿ.ಚಾಂದಬಿ, ಸಿಐಟಿಯುನ ಕಾರ್ಯದರ್ಶಿ ಎಸ್. ಜಗನ್ನಾಥ, ರಾ.ರೈ.ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ.ಗೋಣಿಬಸಪ್ಪ, ಅಧ್ಯಕ್ಷರಾದ ಬಿ.ಸಿದ್ದನಗೌಡ ಭಾಗಿಯಾಗಿದ್ದರು.