- ವಿಶ್ವದಾದ್ಯಂತ 17.60 ಕೋಟಿ ಜನರು ಬಡತನಕ್ಕೆ ಸಿಲುಕುವ ಸಾಧ್ಯತೆ
ಕೋವಿಡ್ ಸಾಂಕ್ರಾಮಿಕ ವೈರಾಣುವುನಿಂದಾಗಿ ಅನೇಕ ಸಂಕಷ್ಟಗಳು ಹೆಚ್ಚಾಗಿದ್ದು ಇದರಿಂದಾಗಿ ವಿಶ್ವದಾದ್ಯಂತ 17 ಕೋಟಿ 60 ಲಕ್ಷ ಜನರು ಬಡತನಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಬಡತನ ಮತ್ತು ಮಾನವ ಹಕ್ಕುಗಳ ತಜ್ಞ ಒಲಿವಿಯರ್ ಡೆ ಷುಟರ್ ಎಚ್ಚರಿಸಿದ್ದಾರೆ. ಇದನ್ನು ತಡೆಯಲು ಸುಧಾರಿತ ಸಾಮಾಜಿಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಗೆ ಒತ್ತಾಯಿಸಿದ್ದಾರೆ.
ಈ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಕುಸಿತ ಊಹಿಸಿಕೊಳ್ಳಲೂ ಕಷ್ಟವಾಗಿದೆ, 17 ಕೋಟಿ 60 ಲಕ್ಷ ಜನರು ದಿನಕ್ಕೆ 3.20 ಡಾಲರ್ ಖರ್ಚು ಮಾಡಲೂ ಸಾಧ್ಯವಾಗದೆ ಬಡತನಕ್ಕೆ ಸಿಲುಕಬಹುದು ಎಂದು ಹೇಳಿದ್ದಾರೆ.
ಅನೇಕ ಹಿಂದುಳಿದ ರಾಷ್ಟ್ರಗಳು ಸಾಮಾಜಿಕ ಸುರಕ್ಷತಾ ಯೋಜನೆಗಳಿಂದ ಹೊರುಗುಳಿದಿರುವುದರಿಂದ 113 ದೇಶಗಳಲ್ಲಿ ಸಾಮಾಜಿಕ ರಕ್ಷಣೆಗಾಗಿ ವಿಶ್ವಬ್ಯಾಂಕ್ನ 589 ಶತಕೋಟಿ ಡಾಲರ್ ನೆರವಿನ ಯೋಜನೆ ವಿಫಲವಾಗಲಿದೆ ಎಂದು ಡಿ ಷುಟ್ಟರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
‘ಸಾಮಾಜಿಕ ಸುರಕ್ಷತಾ ಯೋಜನೆ ಜಾಲಗಳು ಸಾಮಾನ್ಯವಾಗಿ ಅಲ್ಪಾವಧಿಯಾಗಿದ್ದು, ಮತ್ತು ಆರ್ಥಿಕ ನೆರವು ಅದರಲ್ಲಿ ಸಾಕಷ್ಟಿಲ್ಲ. ಈ ಯೋಜನೆ ನೂನ್ಯತೆಗಳಿಂದ ಕೂಡಿವೆ. ಇದರಿಂದಾಗಿ ಅಪಾರ ಜನರು ಅನಿವಾರ್ಯವಾಗಿ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಅವರು ಹೇಳಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾನವ ಹಕ್ಕುಗಳ ತತ್ವಗಳ ತಳಹದಿಯ ಮೇಲೆ ಬಡತನವನ್ನು ನಿರ್ಮೂಲನೆ ಮಾಡಲು ದೃಢ ಸಾಮಾಜಿಕ ರಕ್ಷಣಾ ಕ್ರಮಗಳನ್ನು ಮಾರ್ಗದರ್ಶಿಸಲ್ಪಡಬೇಕು ಎಂದು ಪುನರುಚ್ಚರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಹೇಳುವಂತೆ , ಈವರೆಗೆ ವಿಶ್ವದಾದ್ಯಂತ 27.9 ದಶಲಕ್ಷ ಜನರು ಕರೋನವೈರಸ್ ವೈರಾಣುವಿಗೆ ಬಲಿಯಾಗಿದ್ದಾರೆ. 9, 05,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಗೆ ದೊಡ್ಡ ಅಡ್ಡಿ ಉಂಟುಮಾಡಿ, ಲಕ್ಷಾಂತರ ಜನರನ್ನು ಬಡತನಕ್ಕೆ ದೂಡಿದೆ ಎಂದು ಅವರು ಹೇಳಿದ್ದಾರೆ.