ರಾಮಾಯಣ ಸಿನಿಮಾಕ್ಕೆ ವೀಕ್ಷಕರಿಂದ ಸಿಕ್ತು 3.5 ರೇಟಿಂಗ್;‌ ರಣಬೀರ್‌ ಆಕ್ಟಿಂಗ್‌ ಬೋರಿಂಗ್‌, ಯಶ್‌ ನಟನೆ ಅದ್ಭುತ ಎಂದ ಸಿನಿ ಪ್ರೇಮಿಗಳು

  • ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ’ ಸಿನಿಮಾ ಪ್ರೀಮಿಯರ್‌ ಶೋ.
  • ನಿತೀಶ್‌ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾಗೆ ಎಕ್ಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ.
  • ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್‌ ಕೊಂಡಾಡಿದ ನೆಟ್ಟಿಗರು.
Ramayana X Review: 4 ಸಾವಿರ ಕೋಟಿಯ ಬೃಹತ್‌ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಸಿನಿಮಾ ನಾಳೆಯಿಂದ ದೇಶ-ವಿದೇಶದಲ್ಲಿ ರಿಲೀಸ್‌ ಆಗಲು ಸಜ್ಜಾಗಿದೆ. ಅದಕ್ಕೂ ಮುನ್ನ ಇಂದು ಪ್ರೀಮಿಯರ್‌ ಶೋ ಯುಎಸ್ ಹಾಗೂ ಭಾರತದಲ್ಲಿ ಇತ್ತು. ಸಿನಿಮಾ ನೋಡಿದ ವೀಕ್ಷಕರು ಪರ-ವಿರೋಧ ಚರ್ಚಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ರಾಮಾಯಣ

ರಾಮಾಯಣ ಪ್ರೀಮಿಯರ್‌ ಶೋ ವೀಕ್ಷಿಸಿದ ನೆಟ್ಟಿಗರು ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲವರು ‘ಗ್ರಾಫಿಕ್ಸ್‌ ಕೃತಕವಾಗಿ ನಿರ್ಮಿಸಿದ್ದಾರೆ ಎನಿಸುತ್ತದೆ’ ಎಂದರೆ, ಇನ್ನೂ ಕೆಲವರು ‘ಯಶ್‌ ಅವರ  ನಟನೆ ಅದ್ಭುತವಾಗಿದೆ’. ‘ರಾಮನ ಪಾತ್ರಕ್ಕೆ ರಣಬೀರ್‌ ನ್ಯಾಯ ಒದಗಿಸಿಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ಹಾಡಿದ್ದೇ ಹಳೆ ರಾಗ ಎನ್ನುವಂತೆ ‘ಸಾಯಿಪಲ್ಲವಿ ಅವರು ಸೀತಾ ಪಾತ್ರಕ್ಕೆ ಸೂಟ್‌ ಆಗೋದಿಲ್ಲ’ ಎನ್ನುವ ಟೀಕೆಗಳನ್ನು ಮುಂದುವರೆಸಿದ್ದಾರೆ.

ಬಾಕ್ಸ್‌ ಆಫೀಸ್‌ ಹಿಟ್?

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರ ರಾಮಾಯಣ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ನವೆಂಬರ್ 5 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

3.5 ರೇಟಿಂಗ್‌ ಕೊಟ್ಟ ವೀಕ್ಷಕರು
ರಾಮಾಯಣ ಸಿನಿಮಾದ ಪ್ರಚಾರದ ಸಮಯದಲ್ಲಿ ಯಶ್‌ ಅವರು, ‘ಸಿನಿಮಾದ ಗ್ರಾಫಿಕ್ಸ್‌ನಲ್ಲಿ ಕಂಡು ಬರುವ ಸಣ್ಣ ತಪ್ಪು ಹುಡುಕಬೇಡಿ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಜೊತೆಗೆ ಸೀತಾ ಪಾತ್ರದ ಕುರಿತು ವಿವಾದವು ಭುಗಿಲೆದ್ದಿತ್ತು. ಸದ್ಯ ಪ್ರೀಮಿಯರ್‌ ಶೋ ನೋಡಿದ ಸಿನಿ ಪ್ರೇಮಿಗಳು ಸಂಪೂರ್ಣ ಸಿನಿಮಾಕ್ಕೆ 3.5 ರೇಟಿಂಗ್ ಕೊಟ್ಟಿದ್ದರೆ, ಇನ್ನೂ ಕೆಲವರು ಕೇವಲ 2 ಕೊಟ್ಟಿದ್ದಾರೆ. ಮತ್ತೊಬ್ಬ ವೀಕ್ಷಕರು ಚಿತ್ರಕ್ಕೆ 2 ಸ್ಟಾರ್ ನೀಡಿ, ‘3 ಗಂಟೆಗಳ ಅವಧಿಯಲ್ಲಿ ಕೇವಲ 30 ನಿಮಿಷಗಳು ಮಾತ್ರ ಆಕರ್ಷಕವಾಗಿತ್ತು’ ಎಂದು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: “ವಿಭಜನೆ ಮತ್ತು ವಲಸಿಗರ ತ್ರಿವಳಿ” : ಋತ್ವಿಕ್ ಘಟಕ್ ಜನ್ಮ ಶತಮಾನೋತ್ಸವ ಉಪನ್ಯಾಸ – 4

ಏನಂತಿದ್ದಾರೆ ಸಿನಿ ಪ್ರೇಮಿಗಳು?

‘4,000 ಕೋಟಿ ರೂ. ಬಜೆಟ್‌ಗೆ ತಕ್ಕಂತೆ ಸಿಜಿಐ  ಇಲ್ಲ. ಕೃತಕವಾಗಿ ಕಾಣುತ್ತದೆ  ಎಂದು ಟೀಕಿಸಿದ್ದಾರೆ. ರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಅವರ ಡೈಲಾಗ್ ಡೆಲಿವರಿ ಮಾಡುವಾಗ   ಭಾವನಾತ್ಮಕತೆಯೇ ಕಾಣೋದಿಲ್ಲ’ ಎಂದು ನೆಟ್ಟಿಗರು ಪೋಸ್ಟ್‌ ಹಂಚಿಕೊಂಡಿದ್ದಾರೆ. ಇನ್ನೂ ರಾವಣನ ಪಾತ್ರ ಮೆಚ್ಚಿಕೊಂಡ ಸಿನಿ ಪ್ರೇಮಿಗಳು ಯಶ್‌ ನಟನೆ ಬಗ್ಗೆ ಕೊಂಡಾಡಿದ್ದಾರೆ.  ‘ರಾವಣನ ಪಾತ್ರ ಮತ್ತು ಯಶ್‌ ಇಡೀ ಸಿನಿಮಾದ ಕೇಂದ್ರಬಿಂದುವಾಗಿದ್ದಾರೆ’ ಎಂದು ಪ್ರಶಂಸಿಸಲಾಗಿದೆ.

ಹಲವರಿಂದ ಮೆಚ್ಚುಗೆ
ಮತ್ತೊಂದೆಡೆ, ಚಿತ್ರವನ್ನು 5ಕ್ಕೆ 5 ರೇಟಿಂಗ್ ನೀಡಿರುವ ಕೆಲವರು, ಇದು ಭಾರತದ ಪೌರಾಣಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ‘ಶತಮಾನದ ಅದ್ಭುತ ಸಿನಿಮಾ’ ಎಂದು ಕೊಂಡಾಡಿದ್ದಾರೆ. ಅಂತಾರಾಷ್ಟ್ರೀಯ ವೀಕ್ಷಕರೊಬ್ಬರು ರಾಮಾಯಣ ಸಿನಿಮಾವನ್ನು ಮೆಚ್ಚಿಕೊಂಡಿದ್ದು ಹೀಗೆ, ಸಿನಿಮಾದಲ್ಲಿ ಮೈ ಜುಮ್ಮೆನಿಸುವ ಆಕ್ಷನ್ ದೃಶ್ಯಗಳು,  ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ಹೈಲೆಟ್ಸ್‌ ಎಂದು ಬರೆದುಕೊಂಡಿದ್ದಾರೆ.  ರಣಬೀರ್ ಕಪೂರ್ ಅವರ ಮುಖದಲ್ಲಿ ದೈವಿಕ ಕಳೆ ಇದೆ. ಸಾಯಿ ಪಲ್ಲವಿ ಅವರ ಸೀತೆಯ ಪಾತ್ರಕ್ಕೆ ತಕ್ಕನಾಗಿ ನಟಿಸಿದ್ದಾರೆ.  ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ವಿಶೇಷ ಗಮನ ಸೆಳೆಯುತ್ತಾರೆ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ: ಋತ್ವಿಕ್ ಘಟಕ್ ಉಪನ್ಯಾಸ -5 | ಮೇಘೆ ಡಾಕಾ ತಾರಾ – ಮುರಳಿ ಕೃಷ್ಣ ಎಂ.ಎಸ್

Donate Janashakthi Media

Leave a Reply

Your email address will not be published. Required fields are marked *