ಅರ್ಲಿಂಗ್ಟನ್ (ಟೆಕ್ಸಾಸ್) : ಯುರೋಪಿಯನ್ ಚಾಂಪಿಯನ್ ಸ್ಪೇನ್, ಬಲಿಷ್ಠ ಫ್ರಾನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಫಿಫಾ ವಿಶ್ವಕಪ್ 2026ರ ಫೈನಲ್ಗೆ ಭರ್ಜರಿ ಪ್ರವೇಶ ಪಡೆದಿದೆ. ಆರಂಭದಿಂದ ಅಂತ್ಯದವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸ್ಪೇನ್, ಕಿಲಿಯನ್ ಎಂಬಾಪ್ಪೆ ನೇತೃತ್ವದ ಫ್ರಾನ್ಸ್ನ ತಾರಾ ದಾಳಿಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿತು. ಫಿಫಾ
ಪಂದ್ಯದ 22ನೇ ನಿಮಿಷದಲ್ಲಿ ಲಮೀನ್ ಯಮಾಲ್ ಮೇಲೆ ನಡೆದ ಫೌಲ್ಗೆ ಸ್ಪೇನ್ಗೆ ಪೆನಾಲ್ಟಿ ಲಭಿಸಿತು. ಅದನ್ನು ಮಿಕೆಲ್ ಓಯಾರ್ಜಬಲ್ ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇಾರ್ಧದ 58ನೇ ನಿಮಿಷದಲ್ಲಿ ಡ್ಯಾನಿ ಒಲ್ಮೊ ಅವರ ಚತುರ ಪಾಸ್ನಿಂದ ಪೆಡ್ರೊ ಪೊರೊ ಮತ್ತೊಂದು ಗೋಲು ದಾಖಲಿಸಿ ಸ್ಪೇನ್ನ ಮುನ್ನಡೆಯನ್ನು 2-0ಕ್ಕೆ ವಿಸ್ತರಿಸಿದರು.
ಇದನ್ನೂ ಓದಿ : ಟ್ರಂಪ್ ಕರೆ ಬಳಿಕ ತೀರ್ಪು ಬದಲಿಸಿದ ಫೀಫಾ: ಅಮೆರಿಕ ಆಟಗಾರನಿಗೆ ಶಿಕ್ಷೆ ರದ್ದು
ಲಮೀನ್ ಯಮಾಲ್, ಡ್ಯಾನಿ ಒಲ್ಮೊ ಮತ್ತು ರೊಡ್ರಿ ನೇತೃತ್ವದ ಸ್ಪೇನ್ ಮಧ್ಯಭಾಗದ ಆಟ ಫ್ರಾನ್ಸ್ಗೆ ಯಾವುದೇ ಅವಕಾಶ ನೀಡಲಿಲ್ಲ. ಎಂಬಾಪ್ಪೆ, ಉಸ್ಮಾನ್ ಡೆಂಬೆಲೆ ಹಾಗೂ ಮೈಕೆಲ್ ಒಲೀಸ್ ಅವರಂತಹ ಆಕ್ರಮಣಕಾರಿ ಆಟಗಾರರನ್ನು ಸ್ಪೇನ್ನ ರಕ್ಷಣಾ ವಿಭಾಗ ಸಂಪೂರ್ಣವಾಗಿ ನಿಯಂತ್ರಿಸಿತು. ಫ್ರಾನ್ಸ್ ಇಡೀ ಪಂದ್ಯದಲ್ಲಿ ಗಮನಾರ್ಹ ಗೋಲು ಅವಕಾಶಗಳನ್ನು ಸೃಷ್ಟಿಸಲು ವಿಫಲವಾಯಿತು.
ಪಂದ್ಯದ ಬಳಿಕ ಮಾತನಾಡಿದ ಫ್ರಾನ್ಸ್ ಕೋಚ್ ದಿದಿಯೆ ದೆಶಾಂ, “ನಾವು ಎರಡನೇ ಅತ್ಯುತ್ತಮ ತಂಡವಾಗಿದ್ದೆವು. ಸ್ಪೇನ್ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು,” ಎಂದು ಸೋಲನ್ನು ಒಪ್ಪಿಕೊಂಡರು.
ಈ ಗೆಲುವಿನೊಂದಿಗೆ 2010ರ ಬಳಿಕ ಮೊದಲ ಬಾರಿಗೆ ವಿಶ್ವಕಪ್ ಫೈನಲ್ಗೆ ಸ್ಪೇನ್ ಪ್ರವೇಶಿಸಿದೆ. ಜುಲೈ 19ರಂದು ನಡೆಯಲಿರುವ ಫೈನಲ್ನಲ್ಲಿ ಸ್ಪೇನ್, ಇಂಗ್ಲೆಂಡ್ ಮತ್ತು ಅರ್ಜೆಂಟಿನಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಸೋತ ಫ್ರಾನ್ಸ್ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಇದನ್ನೂ ನೋಡಿ : ಪಂಚಮ – ಪತ್ರಿಕೆಯ ಸಂಪುಟಗಳ ಬಿಡುಗಡೆ
