ಅಪಾಯಕಾರಿ ಗುಂಡಿಯನ್ನೇ ಮುಚ್ಚದ ಪುರಸಭೆ, ಊರಿನ ಸಮಸ್ಯೆ ಹೇಗೆ ಬಗೆಹರಿಸಲಿದೆ? – ಕರವೇ ಪ್ರಶ್ನೆ

ಕುಶಾಲನಗರ: ಸುಮಾರು ₹7.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಕಳೆದ ವರ್ಷ ಲೋಕಾರ್ಪಣೆಗೊಂಡಿರುವ ಕುಶಾಲನಗರ ಪುರಸಭೆಯ ನೂತನ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣದ ಆವರಣದಲ್ಲೇ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು, ಸ್ವಂತ ಕಚೇರಿ ಆವರಣದ ಸಮಸ್ಯೆಯನ್ನೇ ಸರಿಪಡಿಸದ ಪುರಸಭೆ ಅಧಿಕಾರಿಗಳು ಊರಿನ ಸಾರ್ವಜನಿಕ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಪ್ರಶ್ನಿಸಿದೆ. ಅಪಾಯಕಾರಿ 

ಜುಲೈ 13ರಂದು ಪುರಸಭೆ ಕಚೇರಿ ಆವರಣಕ್ಕೆ ಭೇಟಿ ನೀಡಿದ ಕರವೇ ಸ್ವಾಭಿಮಾನಿ ಬಣದ ಮುಖಂಡರು, ಮುಖ್ಯ ದ್ವಾರ ಹಾಗೂ ಅಧಿಕಾರಿಗಳು ಬೈಕ್ ನಿಲ್ಲಿಸುವ ಮಾರ್ಗದಲ್ಲಿರುವ ಮಳೆನೀರು ಹರಿಯುವ ಚರಂಡಿಯ ಕಬ್ಬಿಣದ ಗ್ರೀಲ್ಸ್ ಮುರಿದು ಬಿದ್ದಿರುವುದರಿಂದ ಸಾರ್ವಜನಿಕರಿಗೆ ಜೀವಾಪಾಯ ಎದುರಾಗಿದೆ ಎಂದು ಆರೋಪಿಸಿದರು.

ಕರವೇ ಮುಖಂಡರ ಪ್ರಕಾರ, 2025ರ ಜೂನ್ 11ರಂದು ಅದ್ದೂರಿಯಾಗಿ ಉದ್ಘಾಟನೆಯಾದ ಕಟ್ಟಡಕ್ಕೆ ಒಂದೂವರೆ ವರ್ಷವೂ ಪೂರ್ಣಗೊಳ್ಳುವ ಮುನ್ನವೇ ಚರಂಡಿಯ ಕಬ್ಬಿಣದ ಗ್ರೀಲ್ಸ್ ತುಕ್ಕು ಹಿಡಿದು ಮುರಿದು ಹೋಗಿರುವುದು ಕಳಪೆ ಕಾಮಗಾರಿ ಹಾಗೂ ಗುಣಮಟ್ಟದ ಕೊರತೆಯನ್ನು ತೋರಿಸುತ್ತದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಕಟ್ಟಡ ಇಷ್ಟು ಬೇಗ ಹಾಳಾಗಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ಶಿಮ್ಲಾ| ಮಳೆ ಅಬ್ಬರ: ಭೂಸ್ಖಲನದಿಂದ ಪ್ರಮುಖ ರಸ್ತೆ ಬಂದ್; ಭೂಕುಸಿತ ಭೀತಿ ಹೆಚ್ಚಳ

ಪುರಸಭೆ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಪ್ರತಿನಿತ್ಯ ನೂರಾರು ಸಾರ್ವಜನಿಕರು ಆಗಮಿಸುತ್ತಿದ್ದು, ತೆರೆದಿರುವ ಚರಂಡಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದರು. ಅಲ್ಲದೆ ಅಧಿಕಾರಿಗಳು ತಮ್ಮ ವಾಹನಗಳನ್ನು ಇದೇ ಮಾರ್ಗದಲ್ಲಿ ನಿಲ್ಲಿಸುತ್ತಿದ್ದರೂ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಚರಂಡಿಗೆ ದನ-ಕರುಗಳು ಅಥವಾ ವಾಹನಗಳು ಬಿದ್ದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ. ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ಪುರಸಭೆಯ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಕರವೇ ಸ್ವಾಭಿಮಾನಿ ಬಣ ಎಚ್ಚರಿಕೆ ನೀಡಿದೆ.

ತಕ್ಷಣವೇ ಗಟ್ಟಿಮುಟ್ಟಾದ ಕಬ್ಬಿಣದ ಗ್ರೀಲ್ಸ್ ಅಳವಡಿಸಿ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಕರವೇ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ತಾಲೂಕು ಸಂಚಾಲಕ ವಿ.ಪಿ. ಚಂದ್ರಣ್ಣ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷೆ ಭವ್ಯ, ಜಿಲ್ಲಾ ಸಂಚಾಲಕ ಸತೀಶ್ ಹಾಗೂ ಪದಾಧಿಕಾರಿಗಳಾದ ವಿಲ್ಸನ್, ನಂಜಪ್ಪ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: SIR ಕರ್ನಾಟಕ | ಕೆಲಸದ ಒತ್ತಡ, ಅಪಪ್ರಚಾರ: ಎಸ್‌ಐಆರ್‌ ಕೆಲಸದ ನೋವು ಬಿಚ್ಚಿಟ್ಟ ಬಿಎಲ್‌ಒ Janashakthi Media

Donate Janashakthi Media

Leave a Reply

Your email address will not be published. Required fields are marked *