ಬೆಂಗಳೂರು: ಎಸ್‌ಐಆರ್ (Special Intensive Revision) ಪ್ರಕ್ರಿಯೆಯು ಸಾರ್ವಜನಿಕರಿಗೆ ಮಾತ್ರವಲ್ಲ, ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೇಲೂ ತೀವ್ರ ಸಂಕಷ್ಟವನ್ನು ಉಂಟುಮಾಡಿದೆ. ರಾಜ್ಯದ ವಿವಿಧ ಭಾಗಗಳಿಂದ ಅವರ ಸಂಕಷ್ಟದ ಕುರಿತು ನಿರಂತರವಾಗಿ ಮಾಹಿತಿ ಮತ್ತು ಬೂತ್ ಮಟ್ಟದ ವರದಿಗಳು ನಾಗರಿಕ ಮತಕಾವಲು ಸಮಿತಿಗೆ ಲಭ್ಯವಾಗುತ್ತಿವೆ ಎಂದು ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್ ತಿಳಿಸಿದ್ದಾರೆ.ಬೆಂಗಳೂರು
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ನಮಗೆ ಈಗಾಗಲೇ ಸಿಕ್ಕಿರುವ ಮಾಹಿತಿಯ ಪ್ರಕಾರ ನಾಲ್ಕಕ್ಕು ಹೆಚ್ಚು ಬಿಎಲ್ಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬಹುತೇಕ ಬಿಎಲ್ಒಗಳು ತೀವ್ರ ಮಾನಸಿಕ ಒತ್ತಡದ ನಡುವೆಯೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಸ್‌ಐಆರ್ ಅತ್ಯಂತ ವ್ಯಾಪಕವಾದ ಪ್ರಕ್ರಿಯೆಯಾಗಿದ್ದು, ಅಗತ್ಯ ಪೂರ್ವಸಿದ್ಧತೆ, ಸಮರ್ಪಕ ತರಬೇತಿ ಹಾಗೂ ಸೂಕ್ತ ಯೋಜನೆಯಿಲ್ಲದೆ ಆರಂಭಿಸಿರುವ ಪರಿಣಾಮ ಬಿಎಲ್ಒಗಳ ಮೇಲೆ ಅತಿಯಾದ ಒತ್ತಡ ಉಂಟಾಗಿದೆ. ಅಲ್ಲದೆ, ಸಾರ್ವಜನಿಕರು ಮತ್ತು ಬಿಎಲ್ಒಗಳ ನಡುವೆ ಅನಗತ್ಯ ವಾದ-ವಿವಾದ ಹಾಗೂ ಸಂಘರ್ಷಗಳಿಗೂ ಕಾರಣವಾಗುತ್ತಿದೆ ಎಂದಿದ್ದಾರೆ.ಬೆಂಗಳೂರು
ಇದನ್ನೂ ಓದಿ: ಪೋಕ್ಸೋ ಸಂತ್ರಸ್ತೆ ಸೇರಿ 6 ಜನರ ಹತ್ಯೆಗೈದ ಜಾಮೀನಿನಲ್ಲಿ ಹೊರಬಂದ ಆರೋಪಿ
ಈ ಎಲ್ಲ ಒತ್ತಡಗಳು ಹಾಗೂ ಸಂಭವಿಸಿರುವ ಸಾವುಗಳಿಗೆ ಅವೈಜ್ಞಾನಿಕ ಪ್ರಕ್ರಿಯೆಯೆ ಕಾರಣ. ಈ ದುರಂತಕ್ಕೆ ಚುನಾವಣಾ ಆಯೋಗ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು.
ದೇಶಾದ್ಯಂತ ಎಸ್‌ಐಆರ್ ಪ್ರಕ್ರಿಯೆಯನ್ನು ಈ ರೀತಿಯಲ್ಲಿ ಜಾರಿಗೊಳಿಸಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೂ, ಚುನಾವಣಾ ಆಯೋಗ ಅದನ್ನು ಏಕಪಕ್ಷೀಯವಾಗಿ ಮುಂದುವರಿಸುತ್ತಿರುವುದು ವಿಷಾದನೀಯ. ಆದ್ದರಿಂದ, ಈಗಲಾದರೂ ಬಿಎಲ್ಒಗಳ ಸಂಕಷ್ಟವನ್ನು ನಿವಾರಿಸುವ ಉದ್ದೇಶದಿಂದ ಎಸ್‌ಐಆರ್ ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಬೇಕು.
ಪ್ರಸ್ತುತ ನೀಡಲಾಗುತ್ತಿರುವ ವಾರ್ಷಿಕ 12,000 ರೂ. ಸಾಮಾನ್ಯ ಭತ್ಯೆಯು, ಈ ಹೆಚ್ಚುವರಿ ಜವಾಬ್ದಾರಿಗೆ ಯಾವುದೇ ರೀತಿಯಲ್ಲೂ ಸಮರ್ಪಕವಾಗಿಲ್ಲ. ಎಸ್‌ಐಆರ್ ವಿಶೇಷ ಕಾರ್ಯದಲ್ಲಿ ತೊಡಗಿರುವ ಎಲ್ಲ ಬಿಎಲ್ಒಗಳಿಗೆ ವಿಶೇಷ ಭತ್ಯೆಯನ್ನು ಮಂಜೂರು ಮಾಡಬೇಕು.
ಅದೇ ಸಂದರ್ಭದಲ್ಲಿ, ಸಾರ್ವಜನಿಕರು ಬಿಎಲ್ಒಗಳೊಂದಿಗೆ ಸಂಯಮದಿಂದ ವರ್ತಿಸಿ, ಅವರು ಎದುರಿಸುತ್ತಿರುವ ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಮಿತಿಯ ಮುಖಂಡರಾದ ಜೆ.ಎಂ.ವೀರಸಂಗಯ್ಯ, ಅಮ್ಜದ್ ಪಾಷಾ, ನಾಗೇಶ್ ಅರಳಕುಪ್ಪೆ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.
ಇದನ್ನೂ ನೋಡಿ: ಡಿ.ಕೆ.ಶಿ. ಆಡಳಿತ: ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ಇಲಾಖೆ ಸಚಿವರಿಲ್ಲ… Janashakthi Media
