ಫಿಫಾ ವಿಶ್ವಕಪ್ ರೌಂಡ್ ಆಫ್ 16 ಮೊದಲ ದಿನವೇ ಸಹ – ಆತಿಥೇಯ ಕೆನಡಾ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿ ಹೊರಹೊಮ್ಮಿತು. ಮೊರಾಕೊ ತಂಡ ಕ್ಲಿನಿಕಲ್ ಪ್ರದರ್ಶನ ನೀಡಿ 3-0 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಫಿಫಾ
ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ತಂಡ ಕಠಿಣ ಹೋರಾಟದ ಬಳಿಕ ಪರಾಗ್ವೇ ವಿರುದ್ಧ 1-0 ಅಂತರದಲ್ಲಿ ಗೆಲುವು ಸಾಧಿಸಿತು. ಎರಡನೇಾರ್ಧದಲ್ಲಿ ಕೈಲಿಯನ್ ಎಂಬಾಪೆ ಗಳಿಸಿದ ಪೆನಾಲ್ಟಿ ಗೋಲ್ ಫ್ರಾನ್ಸ್‌ಗೆ ಜಯ ತಂದುಕೊಟ್ಟಿತು. ಈ ಗೆಲುವಿನಿಂದ ಫ್ರಾನ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕೊ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ: ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ ದುರ್ಬಲ: US ನ್ಯಾಯ ಇಲಾಖೆ
ಇದೀಗ ಡೇ 25ನಲ್ಲಿ ಇನ್ನೂ ಎರಡು ರೋಚಕ ರೌಂಡ್ ಆಫ್ 16 ಪಂದ್ಯಗಳು ಎದುರಾಗುತ್ತಿವೆ. ಐದು ಬಾರಿ ವಿಶ್ವ ಚಾಂಪಿಯನ್ ಬ್ರೆಜಿಲ್, ನಾರ್ವೆ ವಿರುದ್ಧ ಕಣಕ್ಕಿಳಿಯಲಿದ್ದು, ಮತ್ತೊಂದು ಪಂದ್ಯದಲ್ಲಿ ಸಹ-ಆತಿಥೇಯ ಮೆಕ್ಸಿಕೋ, ಇಂಗ್ಲೆಂಡ್ ವಿರುದ್ಧ ಮುಖಾಮುಖಿಯಾಗಲಿದೆ.
ಡೇ 25 ಪಂದ್ಯಗಳ ವೇಳಾಪಟ್ಟಿ (IST):
ಬ್ರೆಜಿಲ್ vs ನಾರ್ವೆ — ರಾತ್ರಿ 1:30
ಮೆಕ್ಸಿಕೋ vs ಇಂಗ್ಲೆಂಡ್ — ಬೆಳಗ್ಗೆ 5:30
ಇದನ್ನೂ ನೋಡಿ: ಆರ್‌ಎಸ್‌ಎಸ್ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?
