ಗುಜರಾತ್: ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆ ಮಾಡುತ್ತಿದ್ದ ಭಾರತೀಯ ಟ್ಯಾಂಕರ್ ಜೂನ್ 19ರಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ದಹೇಜ್ ಬಂದರಿಗೆ ತಲುಪಿದೆ.
ಭರೂಚ್ ಪೋರ್ಟ್ ಪ್ರಾಧಿಕಾರದ ಪ್ರಕಾರ, ಹಡಗು ಬೆಳಗ್ಗೆ ದಹೇಜ್ ಬಂದರಿಗೆ ತಲುಪಿದ್ದು, ಪೆಟ್ರೋನೆಟ್ ಎಲ್ಎನ್ಜಿ ಜೆಟ್ಟಿಯಲ್ಲಿ ನಿಲುಗಡೆಗೊಂಡಿದೆ.
ಮಾಲ್ಟಾ ಧ್ವಜ ಹೊಂದಿರುವ ಈ ಹಡಗು, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟದಿಂದ ನಿರ್ವಹಿಸಲ್ಪಡುತ್ತಿದ್ದು, 62,370 ಮೆಟ್ರಿಕ್ ಟನ್ ಎಲ್ಎನ್ಜಿ ಸಾಗಣೆ ಮಾಡುತ್ತಿತ್ತು.
ಇದನ್ನೂ ಓದಿ: ಕಡತಿನಿ ಭೂ ಸಂತ್ರಸ್ತರ ಆಕ್ರೋಶ: ಬಳ್ಳಾರಿ ಬಂದ್ಗೆ ಭಾರೀ ಬೆಂಬಲ
ಅಮೆರಿಕಾ–ಇರಾನ್ ನಡುವೆ 14 ಅಂಶಗಳ ಒಪ್ಪಂದದ ಬಳಿಕ ಮರುತೆರೆದ ಹಾರ್ಮುಜ್ ಜಲಸಂಧಿಯನ್ನು ದಾಟಿದ ಮೊದಲ ಭಾರತೀಯ ಹಡಗು ಎಂಬ ಹೆಗ್ಗಳಿಕೆಯನ್ನು LNGC ದಿಶಾ ಪಡೆದುಕೊಂಡಿದೆ.
ಪೋರ್ಟ್, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಪ್ರಕಾರ, ಡಿಜಿ ಶಿಪ್ಪಿಂಗ್ ವಿದೇಶಾಂಗ ಸಚಿವಾಲಯ, ಭಾರತೀಯ ಮಿಷನ್ಗಳು ಮತ್ತು ಶಿಪ್ಪಿಂಗ್ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಕಳೆದ 96 ಗಂಟೆಗಳಲ್ಲಿ ನಿಯಂತ್ರಣ ಕೊಠಡಿಗೆ 406 ಕರೆಗಳು ಮತ್ತು 784 ಇಮೇಲ್ಗಳು ಬಂದಿವೆ. ಒಟ್ಟು 12,737 ಕರೆಗಳು ಮತ್ತು 28,299 ಇಮೇಲ್ಗಳನ್ನು ಇದುವರೆಗೆ ನಿರ್ವಹಿಸಲಾಗಿದೆ. ಗಲ್ಫ್ ಪ್ರದೇಶದಿಂದ 3,587ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ವಾಪಸ್ ತರಲಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ದೇಶದಲ್ಲಿ ಎಲ್ಪಿಜಿ, ಪಿಎನ್ಜಿ ಮತ್ತು ಸಿಎನ್ಜಿ ಸರಬರಾಜು ವ್ಯತ್ಯಯವಿಲ್ಲದೆ ಮುಂದುವರಿಯುತ್ತಿದೆ.
ವಾಣಿಜ್ಯ ಎಲ್ಪಿಜಿ ಸರಬರಾಜು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಮುಖ ಕೈಗಾರಿಕೆಗಳಿಗೆ ಆದ್ಯತೆಯಾಗಿ ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಎಲ್ಪಿಜಿ ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿದೆ.
ಇದನ್ನೂ ನೋಡಿ: ಹೋರ್ಮುಜ್ ಜಲಸಂಧಿ | 107 ದಿನಗಳಿಂದ ಸಮುದ್ರದಲ್ಲೇ ಸಿಲುಕಿರುವ 562 ಭಾರತೀಯ ನಾವಿಕರು Janashakthi Media
