ಬೆಂಗಳೂರು: ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಯ ವೇಳೆ ನಡೆದಿದ್ದ ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಮಂಗಳವಾರ 23 ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಐಪಿಎಲ್
ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೇಂದ್ರ ಅಪರಾಧ ವಿಭಾಗದ (CCB) ವಿಶೇಷ ತನಿಖಾ ದಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತು.
ಇದನ್ನೂ ಓದಿ: ಲೀಟರ್‌ಗೆ ₹110 ಪೆಟ್ರೋಲ್ ಶಾಕ್ | ಬೆಂಗಳೂರಿನ ಡೆಲಿವರಿ ಕಾರ್ಮಿಕರಿಗೆ ದಿನಕ್ಕೆ ₹500 ಕೂಡ ಉಳಿಯುತ್ತಿಲ್ಲ
ಈ ಕಾರ್ಯಾಚರಣೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ 17 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, 23 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಸುಮಾರು ₹1.10 ಲಕ್ಷ ಮೌಲ್ಯದ ಏಳು ಮೊಬೈಲ್ ಫೋನ್‌ಗಳು, ₹1,06,433 ನಗದು ಹಾಗೂ ಸುಮಾರು ₹13.37 ಕೋಟಿ ಮೌಲ್ಯದ ಬೆಟ್ಟಿಂಗ್ ಚಿಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಒಟ್ಟು ಮೌಲ್ಯವು ಸುಮಾರು ₹13.39 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಧರ್ಮದ ಮುಸುಕಿನಲ್ಲಿ ಅಧರ್ಮ – ನಟ ಕಿಶೋರ್ ಜೊತೆ ಬಾತ್ ಚೀತ್ Janashakthi Media
