ಎಚ್‌ಎಲ್‌ಸಿ ಕಾಲುವೆ ಪಕ್ಕದ ನಿವಾಸಿಗಳಿಗೆ ವಸತಿ ಒದಗಿಸಲು ಸಿಪಿಎಂ ಒತ್ತಾಯ

ಸಂಡೂರು: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮುಖಂಡರು, ತಾಲ್ಲೂಕಿನ ತೋರಣಗಲ್ಲು ಗ್ರಾಮದ ಎಚ್.ಎಲ್.ಸಿ ಕಾಲುವೆ ಪಕ್ಕದಲ್ಲಿ ಹಲವು ವರ್ಷಗಳಿಂದ ವಾಸವಿರುವ ನಿವಾಸಿಗಳಿಗೆ ವಸತಿ, ನಿವೇಶನ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತೋರಣಗಲ್ಲು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ನಾಗರಾಜ ಅವರಿಗೆ ಮೇ 11ರಂದು ಮನವಿ ಸಲ್ಲಿಸಿದರು.

ಸಿಪಿಎಂ ಪಕ್ಷದ ಸಂಡೂರು ತಾಲ್ಲೂಕು ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ‘ಎಚ್‌ಎಲ್‌ಸಿ ಕಾಲುವೆ ಜಾಗದಲ್ಲಿ ವಾಸವಿರುವ ಬಡಜನರು ಮೂರು ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸುತ್ತಮುತ್ತ ಕೈಗಾರಿಕಾ ಪ್ರದೇಶವಾಗಿರುವುದರಿಂದ ಜನರು ನಿವೇಶನ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ ಸರ್ಕಾರ ಜನರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಬಿಬಿಎಂಪಿ ಅವಧಿಯಲ್ಲಿ ಸುಲಭ್‌ ಶೌಚಾಲಯ ಹಣ ದುರುಪಯೋಗ: ತನಿಖೆಗೆ ಆಗ್ರಹ

ಸಿಪಿಎಂ ಪಕ್ಷದ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ಎಚ್.ಸ್ವಾಮಿ, ಎಸ್. ಕಾಲುಬಾ, ಶಿವಾರೆಡ್ಡಿ ಎನ್. ಶಂಕಣ್ಣ ನಾಗಭೂಷಣ, ವೇಬಾಕುಮಾರಿ, ಹುಸೇನಮ್ಮ, ಗಂಗಮ್ಮ ಲಕ್ಷ್ಮಿ, ದುರುಗಮ್ಮ, ಮರಿಯಮ್ಮ, ಸಂಸದ್ ಬೇಗಂ, ಮಂಜಮ್ಮ, ತಿಪ್ಪಮ್ಮ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ಮಾಗಿ ಇದ್ದರು.

ಇದನ್ನೂ ನೋಡಿ: ಬಿಡದಿ ಉಪನಗರ ಯೋಜನೆಗೆ ವಿರೋಧ – ದಿನವಿಡೀ ರಸ್ತೆ ಬಂದ್‌ ಮಾಡಿದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *