ಬೆಂಗಳೂರು| ಸಚಿವ ಡಿ ಸುಧಾಕರ್ ನಿಧನ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ ಸುಧಾಕರ್ (66 ವರ್ಷ) ಮೇ 10 ರಂದು ಬೆಳಗ್ಗಿನ ಜಾವ 3-15 ಕ್ಕೆ ನಿಧನರಾಗಿದ್ದಾರೆಂದು ಕೃಷ್ಣ ಇನ್ಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸಸ್ ಆಸ್ಪತ್ರೆ ಅಧಿಕೃತವಾಗಿ ಪ್ರಕಟಿಸಿದೆ. ಬೆಂಗಳೂರು

ಬೆಂಗಳೂರಿಂದ ಪಾರ್ಥೀವ ಶರೀರವನ್ನು ರವಾನಿಸಿ ಹಿರಿಯೂರಿನ ನೆಹರೂ ಮೈದಾನದಲ್ಲಿ, ಚಿತ್ರದುರ್ಗದ ಡಿಸಿಸಿ ಬ್ಯಾಂಕ್ ಬಳಿ, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ., ಮಧ್ಯಾಹ್ನ 2 ಗಂಟೆ ವೇಳೆಗೆ ಹುಟ್ಟೂರು ಚಳ್ಳಕೆರೆಯ “ಸುಧಾಕರ್ ಸ್ಟೇಡಿಯಂ” ಜಾಗಕ್ಕೆ ಮೃತದೇಹ ರವಾನಿಸಿ , ಜೈನ ಸಮುದಾಯದ ಅಗ್ನಿ ಸಂಸ್ಕಾರದ ಮೂಲದ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೂ ಮೊದಲು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಒಳಗಾಗಿದ್ದ ಡಿ.ಸುಧಾಕರ್‌ ಅವರಲ್ಲಿ ದಿಢೀರನೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ದೇಹಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಯಶವಂತಪುರದ ಮಣಿಪಾಲ ಆಸ್ಪತ್ರೆಯಿಂದ ಎಲೆಕ್ಟ್ರಾನಿಕ್‌ ಸಿಟಿಯ ಕೃಷ್ಣ ಆರೋಗ್ಯ ವಿಜ್ಞಾನಗಳ ಸಂಸ್ಥೆಗೆ ಸ್ಥಳಾಂತರಿಸಿ, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ 1 ತಿಂಗಳ ಆಸ್ಪತ್ರೆ ಚಿಕಿತ್ಸೆ ಬಳಿಕ ಆರೋಗ್ಯ ಸುಧಾರಿಸದೇ ಮೃತಪಟ್ಟಿದ್ದಾರೆ. ಶ್ವಾಸಕೋಶ‌ ಕಸಿ ಮಾಡಲು ಪ್ರಜ್ಞೆ ಬರುವುದನ್ನೇ ಕಾಯಲಾಗಿತ್ತು. ಆದರೆ ಸ್ಪಂದಿಸದೆ ಇರುವ ಹಿನ್ನೆಲೆ ಇಂದು ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ. ಬೆಂಗಳೂರು

ಇದನ್ನೂ ಓದಿ: ರಾಜ್ಯದಲ್ಲಿ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ | 6 ಸಾವಿರಕ್ಕೂ ಅಧಿಕ ಗ್ರಾಪಂಗಳಿಗೆ ಮತದಾನ ಸಾಧ್ಯತೆ

ಜನಾನುರಾಗಿಯಾಗಿದ್ದ ಡಿ ಸುಧಾಕರ್

ಹಲವು ಜನರ ವೈದ್ಯಕೀಯ ಖರ್ಚುಗಳನ್ನು, ಬಡ ಮಕ್ಕಳ ಶಿಕ್ಷಣಕ್ಕಾಗಿ ನೆರವಾಗಿದ್ದರು. ಜಸಣ್ಣ ಪುಟ್ಟ ಸಮಾಜಗಳ ಕೈಹಿಡಿದು ಬೆಳೆಸಿದ್ದರು. ಯಾರೇ ಬಂದರು ಸ್ಪಂದಿಸಿ ಕೈಲಾದಷ್ಟು ಸಹಕರಿಸುತ್ತಿದ್ದ ಜನಾನುರಾಗಿ, ಬಹಳಷ್ಟು ಜನಕ್ಕೆ ಸಹಾಯ ಮಾಡಿದ್ದರು ಎಂದು ಅಭಿಮಾನಿಗಳು ಕಣ್ಣೀರಾಗಿದ್ದಾರೆ. ಎಂದಿಗೂ ಆರೋಗ್ಯಕರವಾಗಿದ್ದ ಸುಧಾಕರ್ ಅವರು, ದಿಡೀರ್ ಹೀಗಾಗಿದ್ದಾರೆ. ಬೆಂಗಳೂರು

ಚಿತ್ರದುರ್ಗ ಉಸ್ತುವಾರಿ ಸಚಿವ, ಸಾಂಖ್ಯಿಕ ಹಾಗೂ ಯೋಜನೆಯ ಇಲಾಖೆಯ ಸಚಿವರೂ ಆಗಿದ್ದರು. ಚಳ್ಳಕೆರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದ ಸುಧಾಕರ್ ಅವರು, ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ, ಶಿವಮೊಗ್ಗದ ನ್ಯಾಷನಲ್ ಕಾಲೇಜಲ್ಲಿ ಬಿಕಾಂ ಪದವಿ ಪಡೆದಿದ್ದರು. ಕುಟುಂಬದಲ್ಲಿ ಅವರ ಚಿಕ್ಕಪ್ಪ ಜಯಣ್ಣ ಅವರು ರಾಜಕಾರಣದಲ್ಲಿದ್ದಿದ್ದರಿಂದ ರಾಜಕೀಯದ ಒಡನಾಟ ಇತ್ತು. ತಂದೆಯಿಂದ ಲಿಕ್ಕರ್ ಉದ್ಯಮ ಬಳುವಳಿಯಾಗಿತ್ತು.

ರಾಜಕೀಯ ಹೆಜ್ಜೆಗಳು

1978-89 ರ ಅವಧಿಯಲ್ಲಿ ಸುಧಾಕರ್ ಅವರ ಚಿಕ್ಕಪ್ಪ ಎನ್ ಜಯಣ್ಣ ಅವರು ಚಳ್ಳಕೆರೆಯ ಶಾಸಕರಾಗಿದ್ದರು. ಅವರ ರಾಜಕೀಯ ಒಡನಾಟದಿಂದ ಡಿ ಸುಧಾಕರ್ ರಾಜಕೀಯ ಪ್ರವೇಶ ಮಾಡಿದರು.

2004-2008: ಕಾಂಗ್ರೆಸ್ ನಿಂದ ಶಾಸಕರಾಗಿ ಮೊದಲು ಆಯ್ಕೆಯಾಗಿದ್ದರು. ನಂತರ ಚಳ್ಳಕೆರೆ ಎಸ್ ಟಿ ಮೀಸಲು ಕ್ಷೇತ್ರವಾದ ಬಳಿಕ 2008 ರಲ್ಲಿ ಹಿರಿಯೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. ಬಿಎಸ್ ವೈ ಸಂಪುಟದಲ್ಲಿ ಸಮಾಜ ಕಲ್ಯಾಣ, ಮುಜರಾಯಿ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಬಂಧಿಖಾನೆ, ಯುವಜನಸೇವೆಯ ಸಚಿವರಾಗಿದ್ದರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

2013 ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾದರು.

2018 ರಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಮೊದಲ ಸೋಲು

2023 ರಲ್ಲಿ ಮತ್ತೆ ಹಿರಿಯೂರಲ್ಲಿ ಶಾಸಕರಾಗಿ, ಈಗ ಸಚಿವರಾಗಿ ಚಿತ್ರದುರ್ಗ ಉಸ್ತುವಾರಿಯಾಗಿದ್ದರು.
ಸಂಪುಟ ಸಹೋದ್ಯೋಗಿಗಳ ಪ್ರಕಾರ, ಅವರು ಯಾರೊಂದಿಗೂ ಜಗಳವಾಡಿದವರಲ್ಲ. ನಗುಮುಖದ ಸಚಿವರಾಗಿದ್ದರು. ಸಾಕಷ್ಟು ಜನರಿಗೆ ನೆರವಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಕಂಬನಿ ಮಿಡಿದ ಡಿಕೆ ಶಿವಕುಮಾರ್

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದಿದ್ದು ಅತೀವ ದುಃಖವನ್ನುಂಟು ಮಾಡಿದೆ.

ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಉತ್ತಮ ರೀತಿಯಲ್ಲಿ ಜನಪರ ಸೇವೆ ಮಾಡಿದ್ದರು.

ಸುಧಾಕರ್ ಅವರು ಇಂದು ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರನ್ನು ಅಗಲಿದ್ದು ವಿಷಾದದ ಸಂಗತಿ. ಭಗವಂತ ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

ಇದನ್ನೂ ನೋಡಿ: ಗ್ರಾಮ ಪಂಚಾಯತಿಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ: ಮೇ 30ಕ್ಕೆ ಬೃಹತ್ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *