ಕಲಬುರಗಿ: ದೇಶದ ವಿವಿಧ ರಾಜ್ಯಗಳ ರಾಜ್ಯಪಾಲರ ಕಚೇರಿಗಳು ಸಂವಿಧಾನಬದ್ಧ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವ ಬದಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಚೇರಿಗಳಂತಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ವಿಚಾರದಲ್ಲಿ ಕೆಲವು ರಾಜ್ಯಪಾಲರು ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿನ ಆಧಾರದ ಮೇಲೆ ಸರ್ಕಾರ ರಚನೆಗೆ ಅವಕಾಶ ನೀಡಬೇಕಾದರೂ, ಕೆಲವೆಡೆ ರಾಜಕೀಯ ಉದ್ದೇಶಗಳಿಂದ ವಿಳಂಬ ಮತ್ತು ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.ಲೋಕಭವನಗಳು
ಇದನ್ನೂ ಓದಿ : ಸೂರ್ಯಕಾಂತಿ ಬೆಳೆ ಖರೀದಿಗೆ ಬೆಂಬಲ ಬೆಲೆ ಜಾರಿ | ರಾಜ್ಯದ 11 ಜಿಲ್ಲೆಗಳ ರೈತರಿಗೆ ನೆರವು
ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಅತಿದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚಿಸಲು ತಕ್ಷಣ ಅವಕಾಶ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. ರಾಜ್ಯಪಾಲರ ಹುದ್ದೆ ಸಂವಿಧಾನದ ಗೌರವ ಉಳಿಸುವ ಸ್ಥಾನವಾಗಿದ್ದು, ಅದು ಯಾವುದೇ ಒಂದು ಪಕ್ಷದ ರಾಜಕೀಯ ಸಾಧನವಾಗಬಾರದು ಎಂದು ಹೇಳಿದರು. ಲೋಕಭವನಗಳು
ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಈ ಹಿಂದೆ ಕೂಡ ತೀವ್ರ ಟೀಕೆಗಳನ್ನು ಮಾಡಿದ್ದರು. ಇದೀಗ ಮತ್ತೆ ರಾಜ್ಯಪಾಲರ ಪಾತ್ರದ ಬಗ್ಗೆ ಪ್ರಶ್ನೆ ಎತ್ತಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಲೋಕಭವನಗಳು
ಇದನ್ನೂ ನೋಡಿ : ಗ್ರಾಮ ಪಂಚಾಯತಿಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ: ಮೇ 30ಕ್ಕೆ ಬೃಹತ್ ಹೋರಾಟ Janashakthi Media
