ಕೊಪ್ಪಳದಲ್ಲಿ ‘ಸಂಬಳಿಗೋಲು’ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ

ಕೊಪ್ಪಳ: ಪತ್ರಕರ್ತ ಗುರುರಾಜ ದೇಸಾಯಿ ಅವರ ಕಾದಂಬರಿ ‘ಸಂಬಳಿಗೋಲು’ ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಫೆಬ್ರವರಿ 16, 2026 ರಂದು ಬೆಳಗ್ಗೆ 10.30ಕ್ಕೆ ಕೊಪ್ಪಳ ನಗರದ ಕೃಷಿ ವಿಸ್ತರಣಾ ಕೇಂದ್ರ(ತಾಲ್ಲೂಕ ಪಂಚಾಯತ ಆವರಣ) ನಡೆಯಲಿದೆ. ಸಂಬಳಿಗೋಲು

ಪುಸ್ತಕವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ, ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿ ಮಾತನಾಡಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕನಿಗೆ ರಾಜ್ಯ ಸಚಿವರ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಜಿ (ನಿರ್ದೇಶಕರು, ಕ್ರಿಯಾ ಮಾಧ್ಯಮ), ರುದ್ರಪ್ಪ ಭಂಡಾರಿ (ಅಧ್ಯಕ್ಷರು, ಚುಸಾಪ ಜಿಲ್ಲಾ ಘಟಕ, ಕೊಪ್ಪಳ), ಪುಷ್ಪಲತಾ ಏಳುಬಾವಿ (ಹಿರಿಯ ಸಾಹಿತಿಗಳು), ಸಾವಿತ್ರಿ ಮುಜಮದಾರ (ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು) ರಮ್ಯಕೃಷ್ಣ (ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರು) ಭಾಗವಹಿಸಲಿದ್ದಾರೆ. ಕೃತಿಯ ಲೇಖಕ ಗುರುರಾಜ ದೇಸಾಯಿ ಉಪಸ್ಥಿತರಿರಲಿದ್ದಾರೆ.

ಈ ಕಾರ್ಯಕ್ರಮವನ್ನು ಕ್ರಿಯಾ ಮಾಧ್ಯಮ ಆಯೋಜಿಸಿದ್ದು, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕೊಪ್ಪಳ, ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ (ರಿ), ಕೊಪ್ಪಳ ಜಿಲ್ಲೆ ಹಾಗೂ ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆಯು ಸಹಕಾರ ನೀಡಿದೆ ಎಂದು ಕ್ರಿಯಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ನೋಡಿ: “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *