ಚಂಡೀಗಢ: ಚಂಡೀಗಢ ಮೂಲದ ಫಾರ್ಮಾ ಕಂಪನಿಯ ಉದ್ಯಮಿಯೊಬ್ಬರು, ದೀಪಾವಳಿಯ ವೇಳೆ ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದರು. ಇದೀಗ, ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೂ ಮೊದಲು ತಮ್ಮ ತಂಡಕ್ಕೆ ಮತ್ತೆ ಆರು ಹೆಚ್ಚುವರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ‘ಡಬಲ್ ಗಿಫ್ಟ್’ ಕೊಟ್ಟಿದ್ದಾರೆ.
ಕೆಲವೇ ತಿಂಗಳುಗಳ ಅಂತರದಲ್ಲಿ ತಮ್ಮ ಸಿಬ್ಬಂದಿಗೆ ಡಬಲ್ ಉಡುಗೊರೆ ನೀಡಿದ ಮಾಲೀಕನಿಗಿರುವ ಉದ್ಯೋಗಿಗಳ ಮೇಲಿನ ಪ್ರೀತಿ ಮತ್ತು ಹೃದಯಸ್ಪರ್ಶಿ ಕ್ರಮ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹೃದಯವೈಶಾಲ್ಯತೆ ಮೆರೆದ ಉದ್ಯಮಿಯ ಹೆಸರು ಎಂ.ಕೆ. ಭಾಟಿಯಾ. ಇವರು ಚಂಡೀಗಢದಲ್ಲಿ ಫಾರ್ಮಾ ಕಂಪನಿ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನವದೆಹಲಿ | ಗೋದಾವರಿ–ಕಾವೇರಿ ನದಿ ಜೋಡಣೆ :ಹೆಚ್ಚುವರಿ 5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ

ತಂಡವು ಶೋರೂಮ್ನಿಂದ ಮಾಲೀಕನ ಮನೆಯವರೆಗೆ ಕಾರ್ ಗಿಫ್ಟ್ ರ್ಯಾಲಿ ಆಯೋಜಿಸಿದ ನಂತರ ಈ ಕಾರ್ಯವು ಪಟ್ಟಣದಾದ್ಯಂತ ಚರ್ಚೆಗೆ ಕಾರಣವಾಗಿದೆ. ದೀಪಾವಳಿಯ ಸಮಯದಲ್ಲಿ, ಭಾಟಿಯಾ ಅವರು 51 ಉದ್ಯೋಗಿಗಳಿಗೆ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಧುರಂಧರ್ (ತಜ್ಞರು ಅಥವಾ ಚಾಂಪಿಯನ್ಗಳು) ಆಗಬೇಕೆಂದು ಕರೆ ನೀಡಿದರು. ಉಡುಗೊರೆ ವಿತರಣೆ ವೇಳೆ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿರುವ ಭಾಟಿಯಾ ಅವರು ಸ್ಪೂರ್ತಿದಾಯಕ ಸಂದೇಶ ಹಂಚಿಕೊಂಡರು.

ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು. ತಮ್ಮ ವೃತ್ತಿಯಲ್ಲಿ ಹಿಡಿತ ಸಾಧಿಸಬೇಕು” “ಪ್ರತಿಯೊಬ್ಬ ಯುವಕರು, ಮಹಿಳೆಯರು ಮತ್ತು ಇತರರು ನಿರಂತರ ಕಲಿಕೆ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಮೂಲಕ ಶ್ರೇಷ್ಠತೆ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಶ್ರಮಿಸಬೇಕು. ಯಶಸ್ಸು ಅರ್ಹ ವ್ಯಕ್ತಿಗಳನ್ನು ಅನುಸರಿಸುತ್ತದೆ ಎಂದು ಅವರು ಸಲಹೆ ನೀಡಿದರು.
ಕ್ರಿಸ್ಮಸ್ ಉಡುಗೊರೆ ಪಡೆದ ನಂತರ ಮಾತನಾಡಿರುವ ಅಲ್ಲಿನ ಉದ್ಯೋಗಿಗಳು ತಮ್ಮ ಮಾಲೀಕನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದಾರ ಮತ್ತು ಚಿಂತನಶೀಲ ನಡೆ ಎಂದು ಅವರು ಬಣ್ಣಿಸಿದ್ದಾರೆ.

“ಮಾಲೀಕರ ಇಂತಹ ಕಾರ್ಯಗಳು ಸಿಬ್ಬಂದಿಗೆ ಆರ್ಥಿಕ ಬೆಂಬಲ ಒದಗಿಸುವುದಲ್ಲದೆ, ನೈತಿಕತೆ ಮತ್ತು ಪ್ರೇರಣೆಯನ್ನು ಹೆಚ್ಚಿಸುತ್ತವೆ. ಇಂತಹ ನಡೆ ನಾವು ಇನ್ನಷ್ಟು ಶ್ರಮವಹಿಸಿ ದುಡಿಯಲು ಪ್ರೇರಣೆ ನೀಡುತ್ತದೆ. ಸಂಸ್ಥೆಯ ಬೆಳವಣಿಗೆಗೆ ಸಕ್ರಿಯವಾಗಿ ಕೊಡುಗೆ ನೀಡಲು ನಮಗೆ ಸ್ಫೂರ್ತಿ” ಎಂದು ಉದ್ಯೋಗಿಗಳು ತಿಳಿಸಿದರು.
“ಮುಂಬರುವ ವರ್ಷವು ಹೊಸ ಸಾಧನೆಗಳು, ನಾವೀನ್ಯತೆ ಮತ್ತು ಸಾಮೂಹಿಕ ಯಶಸ್ಸನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಕಾರ್ಯಕ್ರಮದ ಕೊನೆಯಲ್ಲಿ ಮಾಲೀಕ ಭಾಟಿಯಾ ಅವರು ಎಲ್ಲರಿಗೂ ಹೃತ್ಪೂರ್ವಕ ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ವ್ಯವಹಾರದ ಬೆಳವಣಿಗೆ ಮುಖ್ಯವಾದರೂ, ಸಕಾರಾತ್ಮಕ ಭಾವನೆ ಹೊಂದುವುದೂ ಸಂಸ್ಥೆಯ ಪ್ರಮುಖ ಗುರಿ” ಎಂದು ಭಾಟಿಯಾ ಹೇಳಿದರು.
ಇದನ್ನೂ ನೋಡಿ : ಹಿಜಾಬ್ ಗೆ ಕೈ ಹಾಕಿನಿತೀಶ್ ಕುಮಾರ್ ಮಾಡಿದ ಎಡವಟ್ಟು, ಕ್ಷಮಾಯಾಚನೆಗೆ ಪಟ್ಟು Janashakthi Media
