ಧರ್ಮ ಮತ್ತು ಸಂವಿಧಾನ ಒಂದೇ: ಪವನ್ ಕಲ್ಯಾಣ್ ಹೇಳಿಕೆಗೆ ಕಾಂಗ್ರಸ್ ನಾಯಕರು ಟೀಕೆ

ವದೆಹಲಿ: ಡಿಸೆಂಬರ್ 7ರಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ನೀಡಿದ ಹೇಳಿಕೆಯೊಂದು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಒಂದೇ

ಉಡುಪಿಯ ಪುತ್ತಿಗೆ ಮಠದ ಗೀತೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪವನ್ ಕಲ್ಯಾಣ್, “ಧರ್ಮ ಮತ್ತು ಸಂವಿಧಾನ ಒಂದೇ” ಎಂದು ಪ್ರತಿಪಾದಿಸಿದರು.

ಅಲ್ಲದೆ ಭಗವದ್ಗೀತೆಯನ್ನು ಅವರು “ಮೂಲ ಕೈಬರಹದ ಸಂವಿಧಾನ” ಎಂದು ಬಣ್ಣಿಸಿದರು. ಭಾರತದ ಮೂಲ ಸಂವಿಧಾನದ ಚಿತ್ರಣದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಚಿತ್ರವನ್ನು ನಿರ್ದೇಶಕ ತತ್ವಗಳ ಮೇಲಿಟ್ಟಿದ್ದು, ಇದು ಭಾರತದ ನೈತಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಧು ಬಂಗಾರಪ್ಪ ಅವರೇ ಸುಳ್ಳು ಹೇಳುವ ಸಚಿವರಾಗಬೇಡಿ

“ಧರ್ಮ ಮತ್ತು ಸಂವಿಧಾನ ಬೇರೆ ಬೇರೆ ಲೋಕಕ್ಕೆ ಸೇರಿದೆ ಎಂದು ಕೆಲವರು ಭಾವಿಸುತ್ತಾರೆ, ಆದರೆ ಹಾಗಲ್ಲ. ಧರ್ಮವು ನೈತಿಕ ದಿಕ್ಸೂಚಿ ಮತ್ತು ಸಂವಿಧಾನವು ಕಾನೂನು ದಿಕ್ಸೂಚಿ ಯಾಗಿದ್ದು ಎರಡರ ಗುರಿಯೂ ನ್ಯಾಯಯುತ, ಶಾಂತಿಯುತ ಮತ್ತು ಸಹಾನುಭೂತಿಯ ಸಮಾಜವಾಗಿದೆ” ಎಂದು ಹೇಳಿದರು.

ಪವನ್ ಕಲ್ಯಾಣ್ ಹೇಳಿಕೆಗೆ ಕಾಂಗ್ರೆಸ್ ಟೀಕೆ:

ಧರ್ಮ ಮತ್ತು ಸಂವಿಧಾನದ ಕುರಿತು ಪವನ್ ಕಲ್ಯಾಣ್ ಉಡುಪಿಯಲ್ಲಿ ನೀಡಿರುವ ಹೇಳಿಕೆಗೆ ಕಾಂಗ್ರಸ್ ನಾಯಕರು ಟೀಕೆ ವ್ಯಕ್ತಪಡಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಸಂವಿಧಾನದ ಬಗ್ಗೆ ಅರ್ಥಮಾಡಿಕೊಳ್ಳದ ಸೆಲೆಬ್ರಿಟಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಾರೆ “ಸಂವಿಧಾನವು ಜಾತ್ಯತೀತವಾಗಿದೆ; ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು ಪವನ್ ಕಲ್ಯಾಣ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಕೂಡ ಟೀಕಿಸಿದ್ದು, ಅವರಿಗೆ ಕಾನೂನು ಮತ್ತು ಧರ್ಮ ಎರಡರ ಬಗ್ಗೆಯೂ ಅರಿವಿಲ್ಲ “ಸಂವಿಧಾನ ಮತ್ತು ಧರ್ಮ ಒಂದೇ ಆಗಲು ಸಾಧ್ಯವಿಲ್ಲ” ಎಂದು ಖರ್ಗೆ ಹೇಳಿದರು.

ಇದನ್ನೂ ನೋಡಿ: ಕಾರ್ಮಿಕರ ಕತ್ತು ಹಿಸುಕಲು ಹೊರಟ ಕೇಂದ್ರ ಸರಕಾರ – ಕೆ.ಎನ್. ಉಮೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *