ಲಾಸ್ ಏಂಜಲೀಸ್| ಕಾಡ್ಗಿಚ್ಚಿನಿಂದ 22,600 ಎಕರೆ ಪ್ರದೇಶ ಆಹುತಿ; ಅಧಿಕ ಕಟ್ಟಡಗಳು ಹಾನಿ

ಲಾಸ್ ಏಂಜಲೀಸ್: ಮುಂದಿನ ದಿನಗಳಲ್ಲಿ ಮೆರಿಕ ಇತಿಹಾಸದಲ್ಲೇ ಕಂಡು ಕೇಳರಿಯದ ಲಾಸ್ ಏಂಜಲೀಸ್ ಕಾಡ್ಗಿಚ್ಚು ಇನ್ನಷ್ಟು ಅಪಾಯಕಾರಿ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಕಾಡ್ಗಿಚ್ಚಿ

ಕಳೆದ ಒಂದು ವಾರದಿಂದ ಲಾಸ್ ಏಂಜಲೀಸ್ ನಲ್ಲಿ ವ್ಯಾಪಿಸುತ್ತಿರುವ ಕಾಡ್ಗಿಚ್ಚಿನಿಂದ 22,600 ಎಕರೆ ಪ್ರದೇಶ ಆಹುತಿ ಪಡೆದಿದ್ದು, 12 ಸಾವಿರಕ್ಕೂ ಅಧಿಕ ಕಟ್ಟಡಗಳು ಹಾನಿ ಅಥವಾ ಸಂಪೂರ್ಣ ಧ್ವಂಸಗೊಂಡಿವೆ.

ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಇದುವರೆಗೂ ಆಗಿರುವ ಅನಾಹುತ ಕೇವಲ ಶೇ.11ರಷ್ಟು ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ: ಎಂ ಬಿ ಪಾಟೀಲ

ಗಾಳಿ 120 ಕಿ.ಮೀ. ವೇಗದಲ್ಲಿ ಬೀಸುತ್ತಿರುವುದರಿಂದ ಕಾಡ್ಗಿಚ್ಚು ನಿಯಂತ್ರಿಸಲು ಆಗುತ್ತಿಲ್ಲ. ಬದಲಾಗಿ ಮತ್ತಷ್ಟು ವೇಗವಾಗಿ ಹರಡುತ್ತಿದೆ. ಇದರಿಂದ ಶೀಘ್ರದಲ್ಲೇ ಶೇ.15ರಷ್ಟು ಹೆಚ್ಚಿನ ಪ್ರದೇಶವನ್ನು ಆವರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಡ್ಗಿಚ್ಚಿನಿಂದ ಲಾಸ್ ಏಂಜಲೀಸ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬಿಡೈನ್ ಹೇಳಿದ್ದಾರೆ. ಅಲ್ಲದೇ ದುರಂತದ ನಡುವೆಯೂ ಲಾಭ ಪಡೆಯಲು ದರೋಡೆಗಳು ನಡೆಯುತ್ತಿದ್ದು, ಇದು ದೊಡ್ಡ ತಲೆನೋವಾಗಿದೆ. ಈ ಸಂಬಂಧ ಇದುವರೆಗೆ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಲಾಸ್ ಏಂಜಲೀಸ್ ನಂತರ ಇತರೆ ರಾಜ್ಯಗಳಿಗೂ ಕಾಡ್ಗಿಚ್ಚು ಹಬ್ಬುವ ಭೀತಿ ಇದ್ದು, ಕ್ಯಾಲಿಫೋರ್ನಿಯಾದ ಗವರ್ನರ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದು, ನಾಗರಿಕರು ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಕರೆ ನೀಡಿದ್ದಾರೆ.

ಇದನ್ನೂ ನೋಡಿ: ಹಾಲನ್ನು ಡೈರಿಗೆ ಹಾಕಬೇಡಿ ಅಂತಾರೆ : ನಮ್ಮ ಬದುಕು ಬೀದಿಗೆ ಬಿದ್ದಿದೆ – ರಶ್ಮೀ ಚಂದ್ರ

Donate Janashakthi Media

Leave a Reply

Your email address will not be published. Required fields are marked *