ಟವರ್ ನಿರ್ಮಿಸುವುದಾಗಿ ಸುಳ್ಳು ಹೇಳಿ ನಕಲಿ ಆಫರ್‌: BSNL ಎಚ್ಚರಿಕೆ

ವದೆಹಲಿ : ದೇಶೀಯ ಕಂಪನಿಯಾದ BSNL, ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ಯೋಜನೆಗಳು, ಪ್ಲಾನ್‌ಗಳಿಂದ ತತ್ತರಿಸಿದ್ದ ದೇಶದ ಜನರಿಗೆ ಕೈಗೆಟುವ ಬೆಲೆಯಲ್ಲಿ ಪ್ಲಾನ್ ನೀಡಲು ಹಾಗೂ ದೇಶವ್ಯಾಪಿ ಉತ್ತಮ ಇಂಟರ್‌ನೆಟ್ ಸೇವೆ ಒದಗಿಸುವಲ್ಲಿ ಕಾರ್ಯ ನಿರತವಾಗಿದೆ. ಇದಕ್ಕಾಗಿ ಸಾವಿರಾರು ಟವರ್ ನಿರ್ಮಾಣ ಮಾಡುವ ಕೆಲಸ ಪ್ರಗತಿಯಲ್ಲಿದೆ.

ಈ ಸನ್ನಿವೇಶದ ದುರಪಯೋಗ ಮಾಡಿಕೊಳ್ಳುತ್ತಿರುವ ವಂಚಕರ ಜಾಲವೊಂದು, ʼನಿಮ್ಮ ಆಸ್ತಿಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸುವುದಾಗಿ ಸುಳ್ಳು ಹೇಳಿ ನಕಲಿ ಆಫರ್ ನೀಡುತ್ತಿದ್ದಾರೆ, ಇದನ್ನು ನಂಬಬೇಡಿʼ ಎಂದು ಸ್ವತಃ BSNL ಎಚ್ಚರಿಕೆ ನೀಡಿದೆ.

ಭಾರತದ ಸರ್ಕಾರಿ ವ್ಯಾಪ್ತಿಯ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ BSNL (ಭಾರತ್ ಸಂಚಾರ್ ನಿಗಮ್ ಲಿ.) ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಸುಳ್ಳು, ವಂಚಕರ ಮಾತು ಕೇಳಿ, ಟವರ್‌ನಿಂದ ಹಣ ಗಳಿಸಬಹುದೆಂಬ ಆಸೆಗೆ ಬಿದ್ದು ತೊಂದರೆಗೆ ಸಿಲುಕದಂತೆ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿಕೊಂಡಿದೆ.

ಬಿಎಸ್‌ಎನ್‌ಎಲ್ ಹೆಸರಿನಲ್ಲಿ ಮೊಬೈಲ್ ಟವರ್ ಸ್ಥಾಪನೆ ಮಾಡುವ ಬಗ್ಗೆ ನಕಲಿ ಆಫರ್ ನೀಡಲಾಗುತ್ತಿದೆ. ಜನರಿಗೆ ನಿಮ್ಮ ಆಸ್ತಿಯಲ್ಲಿ (ಮನೆ, ವಾಣಿಜ್ಯ ಕಟ್ಟಡ, ಖಾಲಿ ಜಾಗ, ಜಮೀನು ಇತ್ಯಾದಿ) ಟವರ್ ಸ್ಥಾಪಿಸುತ್ತೇವೆ ಎಂದು ಆಫರ್ ನೀಡುತ್ತಿದ್ದಾರೆ. ಇದಕ್ಕಾಗಿ ನಕಲಿ ವೆಬ್‌ಸೈಟ್ ವೊಂದನ್ನು ರಚಿಸಿಕೊಂಡಿದ್ದಾರೆ.

‘ಟವರ್ ಸ್ಥಾಪನೆ ಮಾಡಿ ಮಾಸಿಕ ಇಂತಿಷ್ಟು ಹಣ ಗಳಿಸಿ ಎಂದು ನಕಲಿ ವೆಬ್‌ಸೈಟ್ https://bsnltowersite.in/ ಇದೇ ಹೆಸರಿನ ವೆಬ್‌ಸೈಟ್ ಮೂಲಕ ನಿಮಗೆ ಸಂದೇಶ, ಕರೆ, ಮೇಲ್ ಬರಬಹುದು. BSNL ಪ್ರತಿನಿಧಿ ಎಂದು ಕರೆಯೂ ಬರಬಹುದು.

ಇದನ್ನೂ ಓದಿ : ಲಖನೌ| ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು

ದೇಶದ ಗ್ರಾಮೀಣ ಭಾಗಗಳು, ಅರೆ-ನಗರ ಮತ್ತು ನಗರ ಪ್ರದೇಶಗಳಲ್ಲಿರುವ ಮನೆ ಖಾಲಿ ಮೇಲ್ಛಾವಣಿಗಳ ಮೇಲೆ ಟವರ್‌ ಸ್ಥಾಪಿಸಲು ರೂ. 25,000 ರಿಂದ ರೂ 50,000 ವರೆಗಿನ ಮಾಸಿಕವಾಗಿ ಹಣ ಗಳಿಸಬಹುದೆಂದು ಈ ವೆಬ್‌ಸೈಟ್‌ನಲ್ಲಿ ಭರವಸೆ ನೀಡಲಾಗಿದೆ.

ಸದರಿ ನೀಡಲಾದ ಲಿಂಕ್ ತೆರೆದರೆ ನಿಮಗೆ ನಕಲಿ ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಇದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಜತೆ ಸಂಯೋಜನೆಗೊಂಡಿಲ್ಲ ಎಂದು ಸ್ವತಃ ಬಿಎಸ್‌ಎನ್‌ಎಲ್ ಸ್ಪಷ್ಟಪಡಿಸಿದೆ. ಟವರ್ ಸ್ಥಾಪಿಸಿ ಹಣ ಗಳಿಕೆಯ ಆಸೆ ಹೊಂದಿರುವವರ ಖಾಸಗಿ ಮಾಹಿತಿ ಖದಿಯಬಹುದು. ಹಣ ಕೇಳಬಹುದು, ಇಲ್ಲದೇ ಕಂಪನಿ ಹೆಸರಿನಲ್ಲಿ ವಂಚನೆ ಮಾಡಬಹುದು. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಜಾಲ ವಿಸ್ತರಣೆಗೊಳ್ಳುತ್ತಿರುವ ಬಿಎಸ್‌ಎನ್‌ಎಲ್ ಹೆಸರಿನಲ್ಲಿ ಸಂಭವಿಸುವ ಮಹಾವಂಚನೆಗೆ ಬ್ರೇಕ್ ಹಾಕಲು ಮುಂದಾಗಿದೆ. ಇಂತಹ ಸುಳ್ಳು ವೆಬ್‌ಸೈಟ್, ಟವರ್ ಸ್ಥಾಪನೆಯ ಭರವಸೆ ನೀಡಿ ಜನರ ದಾರಿ ತಪ್ಪಿಸಲಾಗುತ್ತಿದೆ. ಇಂತಹ ಸಂದೇಶ, ಭರವಸೆ ನಿರ್ಲಕ್ಷ್ಯ ಮಾಡುವಂತೆ ಬಿಎಸ್‌ಎನ್‌ಎಲ್‌ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಈ ಕುರಿತ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ BSNL ಹಂಚಿಕೊಂಡಿದೆ.

ಖಾಸಗಿ ಟೆಲಿಕಾಂ ಕಂಪನಿಗಳು ಟವರ್‌ ಸ್ಥಾಪನೆ ವೇಳೆ ಆಯಾ ಆಸ್ತಿ ಮಾಲೀಕರನ್ನು ಸಂಪರ್ಕಿಸುತ್ತಾರೆ. ಆದರೆ ಸರ್ಕಾರಿ ಸ್ವಾಮ್ಯದ BSNL ಇಂತಹ ವೆಬ್‌ಸೈಟ್‌ ಮೂಲಕ ಕಾರ್ಯ ನಿರ್ವಹಿಸುವುದಿಲ್ಲ. ಇಂತಹ ಸಂದೇಶ, ಭರವಸೆ ನೀಡುವುದಿಲ್ಲ ಎಂದು ಕಂಪನಿ ದೃಢಪಡಿಸಿದೆ. ಒಂದು ವೇಳೆ ಇಂತಹ ಭರವಸೆ ಬಂದಲ್ಲಿ ನೀವು ನೇರವಾಗಿ ಕಂಪನಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಬಿಎಸ್‌ಎನ್‌ಎಲ್ ಹೆಸರಿನಲ್ಲಿ ಟವರ್ ಸ್ಥಾಪ ಸಂದೇಶ, ಭರವಸೆ, ಹಣ ಗಳಿಕೆ ಆಫರ್ ಬಂದಲ್ಲಿ ಕೂಡಲೇ ಸೂಕ್ಷ್ಮವಾಗಿ ಗಮನಿಸಿ. ಅದು ನಕಲಿ ಎಂದು ಗೊತ್ತಾದರೆ ತಕ್ಷಣವೇ ಪರಿಶೀಲಿಸಿ. ಇದು ಅಧಿಕೃತ ಮೂಲದಿಂದ ಬಂದಿದೆಯೇ ಎಮದು ನೋಡಿ. ಇಲ್ಲವೇ ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್ ಸಿಬ್ಬಂದಿ ಸಂಪರ್ಕಿಸಬೇಕು. ವೈಯಕ್ತಿಕ ಹಣಕಾಸಿನ ಮಾಹಿತಿ ಹಂಚಿಕೊಳ್ಳದಂತೆ ಬಿಎಸ್‌ಎನ್‌ಎಲ್ ತಿಳಿಸಿದೆ.

ಇದನ್ನೂ ನೋಡಿ : HMPV ಬಗ್ಗೆ ಭಯ ಬೇಡ – ಚೀನಾದಿಂದ ಮಾತನಾಡಿದ ಕನ್ನಡಿಗ Janashakthi Media

Donate Janashakthi Media

Leave a Reply

Your email address will not be published. Required fields are marked *