ಭಟ್ಕಳ| ಮಾಲಿಕನ ಮೇಲೆ ದ್ವೇಷ; ಹಣ್ಣಿನ ಅಂಗಡಿಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು

ಭಟ್ಕಳ: ಭಟ್ಕಳ ತಾಲೂಕಿನ ಪಂಚಾಯತ್ ಮುಂಭಾಗದಲ್ಲಿ ಹಣ್ಣಿನ ಅಂಗಡಿಯೊಂದಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿರುವ ಘಟನೆ ನಡೆದಿದೆ. ಹಣ್ಣಿನ ಅಂಗಡಿಯ ಮಾಲಕನ ಮೇಲಿನ ದ್ವೇಷಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ. ಮಾವಿನ ಕುರ್ವೆ ಪಂಚಾಯತ್‌ ವ್ಯಾಪ್ತಿಯ ತಲಗೋಡ ಕೋಟೆಮನೆ ರಾಮಚಂದ್ರ ಜಟ್ಟಪ್ಪ ನಾಯ್ಕ ಇವರಿಗೆ ಸೇರಿದ ಹಣ್ಣಿನ ಅಂಗಡಿ ಇದಾಗಿದೆ.

ಇಲ್ಲಿನ ತಾಲೂಕು ಪಂಚಾಯತ್ ಮುಂಭಾಗದಲ್ಲಿ ಇವರು ತಾತ್ಕಾಲಿಕ ಹೆಣ್ಣಿನ ಅಂಗಡಿಯನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ ಇವರ ಮೇಲಿನ ದ್ವೇಷದಿಂದಾಗಿ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವುದರಿಂದ ಹಣ್ಣಿನ ಅಂಗಡಿ ಹಾಗೂ ಅಂಗಡಿಯಲ್ಲಿದ್ದ ಇತರೆ ಸಾಮಾನುಗಳು ಸೇರಿ ಒಟ್ಟು 7 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಹೋಗಿದೆ. ಅದೇ ರೀತಿ ನನ್ನ ಅಂಗಡಿಗೆ ಯಾರೋ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುವ ಬಗ್ಗೆ ಸಂಶಯವಿದೆ ಈ ಬಗ್ಗೆ ತನಿಖೆ ಮಾಡುವಂತೆ ಪ್ರಕರಣ ನೀಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ : ವಸತಿ ಶಾಲೆಯ ಅಡುಗೆ ಸಹಾಯಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಹಣ್ಣಿನ ಅಂಗಡಿಯ ಮಾಲೀಕ ರಾಮಚಂದ್ರ ನಾಯ್ಕ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಸೋಮರಾಜ ರಾಠೋಡ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ನೋಡಿ: ‘ಪುರುಷರ ಸಾವಿನ ಸುತ್ತ’ – 498A ಏನು – ಎತ್ತ? Janashakthi Media

Donate Janashakthi Media

Leave a Reply

Your email address will not be published. Required fields are marked *