ಚುನಾವಣಾ ನಿಯಮಗಳ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂದು ಸಿಪಿಐ (ಎಂ) ಪೊಲಿಟ್ ಬ್ಯೂರೋ ಒತ್ತಾಯ

ನವದೆಹಲಿ: ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದು ವೀಡಿಯೋ ಮತ್ತಿತರ ಡಿಜಿಟಲ್ ಮೂಲದ ವಿದ್ಯುನ್ಮಾನ ದಾಖಲೆಗಳು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ದೊರೆಯದಂತೆ ನಿರ್ಬಂಧಿಸುವ ಮೋದಿ ಸರ್ಕಾರದ ನಡೆಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಪೊಲಿಟ್ ಬ್ಯೂರೋವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚಿನ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಸಲುವಾಗಿ ಈ ನಿಯಮಗಳನ್ನು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ಈ ಹಿಂದೆ ಜಾರಿಗೆ ತರಲಾಗಿತ್ತು.

ಈ ಹೊಸ ನಿಯಮಗಳ ಕರಡನ್ನು ಸಿದ್ದಪಡಿಸುವಾಗ ಸರ್ಕಾರವು ಭಾರತದ ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸಿದೆ ಎಂದು ಪತ್ರಿಕಾ ವರದಿಗಳು ಹೇಳುತ್ತವೆ. ಇಂತಹ ಯಾವುದೇ ಬದಲಾವಣೆ ಮಾಡುವಾಗ ಚುನಾವಣಾ ಆಯೋಗ ಮಾತ್ರವಲ್ಲ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕೆನ್ನುವುದು ಹಲವಾರು ವರ್ಷಗಳಿಂದ ಒಪ್ಪಿಕೊಂಡು ಬಂದ ನಿದರ್ಶನಗಳಿವೆ.

ಇದನ್ನೂ ಓದಿ : ‘7 ಜನ್ಮಗಳು’, ‘11 ಮಂತ್ರಗಳು’ ಮತ್ತು ತಳ್ಳಾಟದ ರಾಜಕೀಯ

ಚುನಾವಣಾ ಪ್ರಕ್ರಿಯೆಗಳನ್ನು ನಡೆಸುವ ವಿಷಯದಲ್ಲಿನ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ ಅರ್ಜಿದಾರನಿಗೆ ಯಾವುದೇ ಹಕ್ಕಿಲ್ಲ ಎಂಬ ಸರ್ಕಾರದ ವಾದವು ಸೋಗಿನ ಮಾತಾಗುತ್ತದೆ ಅಷ್ಟೆ. ಚುನಾನಾವಣೆಗಳನ್ನು ನಡೆಸುವ ವಿಧಾನಗಳ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕೆಂಬ ನಿಯಮಕ್ಕೆ ಸರ್ಕಾರದ ಈ ಧೋರಣೆ ಸಂಪೂರ್ಣವಾಗಿ ವಿರುದ್ಧವಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತ್ರಿಪುರಾದ ಮತಗಟ್ಟೆಗಳಲ್ಲಿ ನಡೆದ ಅವ್ಯವಹಾರದ ಆರೋಪಗಳು ವೀಡಿಯೋ ದಾಖಲೆಗಳಲ್ಲಿ ಸಾಬೀತಾಗಿದ್ದರಿಂದ ಅಂತಿಮವಾಗಿ ಮರುಚುನಾವಣೆ ಮಾಡಬೇಕಾಗಿ ಬಂದ ಅನುಭವ ಈ ಹಿಂದೆ ಸಿಪಿಐ(ಎಂ) ಗೆ ಇದೆ. ಅರ್ಧಕ್ಕರ್ಧ ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಸಬೇಕಾಯಿತು. ಚುನಾವಣೆ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನವು ಅವಿಭಾಜ್ಯ ಅಂಗವಾಗಿರುವ ಈ ಯುಗದಲ್ಲಿ, ಒಕ್ಕೂಟ ಸರ್ಕಾರದ ನಡೆಯು ಪ್ರತಿಗಾಮಿ ಹೆಜ್ಜೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ, ಚುನಾವಣೆ ನಡೆಸುವ ನಿಯಮಗಳಿಗೆ ತಂದ ಪ್ರಸ್ತಾಪಿತ ತಿದ್ದುಪಡಿಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಒತ್ತಾಯಿಸುತ್ತದೆ.

ಇದನ್ನೂ ನೋಡಿ : ಅಂಬೇಡ್ಕರ್ ಕುರಿತ ಹೇಳಿಕೆ | ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *