ಚಿಕ್ಕಮಗಳೂರು | ದಲಿತ ಯುವಕರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಎರಡು ದಿನಗಳಿಂದ ಪೂಜೆ ಸ್ಥಗಿತ

ಚಿಕ್ಕಮಗಳೂರು: ಚಿಕ್ಕಮಗಳೂರು ನರಸೀಪುರ ಗ್ರಾಮದ ತಿರುಮಲ ದೇವಸ್ಥಾನದಲ್ಲಿ ದಲಿತ ಯುವಕರು ದೇಗುಲ ಪ್ರವೇಶ ಮಾಡಿದ್ದ ನಂತರದಲ್ಲಿ ಎರಡು ದಿನಗಳಿಂದ ಪೂಜೆ ಸ್ಥಗಿತಗೊಂಡಿದೆ. ದೇವಸ್ಥಾನ

ಪೂಜೆ ಪುನರ್ ಆರಂಭಿಸಲು ಗ್ರಾಮಸ್ಥರ ಮನವೊಲಿಸಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ತಾಲ್ಲೂಕಿನ ಬೆಳವಾಡಿ ಸಮೀಪದ ನರಸೀಪುರ ದಲ್ಲಿ 250ಕ್ಕೂ ಹೆಚ್ಚು ಕುರುಬ ಸಮುದಾಯದ ಕುಟುಂಬಗಳಿದ್ದು, ಪರಿಶಿಷ್ಟ ಜಾತಿಯ (ಆದಿ ಕರ್ನಾಟಕ) 13 ಕುಟುಂಬಗಳಿವೆ.

ತಿರುಮಲ, ಬೀರಪ್ಪ, ಲಕ್ಷ್ಮೀದೇವಿ ಸೇರಿ ಸಣ್ಣಪುಟ್ಟ 9 ಗುಡಿಗಳಿವೆ. ತಿರುಮಲ ದೇವರ ಗುಡಿಯೇ ಊರ ಪ್ರಮುಖ ದೇಗುಲವಾಗಿದ್ದು, ಮುಜರಾಯಿ ಇಲಾಖೆ ಮೂಲಕ ಅರ್ಚಕರನ್ನು ನೇಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ದೇವಸ್ಥಾನ

‘ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ, ಎಲ್ಲಾ ಜಾತಿಯ ಜನರಿಗೂ ದೇಗುಲದಲ್ಲಿ ಮುಕ್ತ ಅವಕಾಶ ಇದೆ ಎಂಬ ಫಲಕವನ್ನು ಮುಜರಾಯಿ ಇಲಾಖೆ ಎಲ್ಲಾ ದೇಗುಲಗಳಲ್ಲಿ ಅಳವಡಿಸಿದೆ. ಅದರಂತೆ ನಮ್ಮೂರಿನ ದೇಗುಲಕ್ಕೂ ಫಲಕ ಅಳವಡಿಸಲು ಅಧಿಕಾರಿಗಳು ಬಂದಿದ್ದರು. ಆದರೆ, ಆ ಫಲಕ ಎರಡು ವರ್ಷಗಳಿಂದ ಅಳವಡಿಕೆಯಾಗಿಲ್ಲ. ಪದೇ ಪದೇ ಕೇಳಿ ಬೇಸತ್ತಿದ್ದ ನಾವು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆವು’ ಎಂದು ದಲಿತ ಯುವಕ ಹೇಮಂತಕುಮಾರ್ ಹೇಳಿದರು.

ಇದನ್ನೂ ಓದಿ : ನನ್ನ ತಪ್ಪಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧ: ಆರೋಗ್ಯ ಸಚಿವ

‘ಎರಡು ದಿನ ಪೂಜೆ ನಿಂತಿದ್ದರಿಂದ ಕೆಲವು ವಿಧಿ-ವಿಧಾನಗಳನ್ನು ನೆರವೇರಿಸಬೇಕು ಎಂದು ಗ್ರಾಮಸ್ತರು ಹೇಳಿದ್ದಾರೆ. ಶುಕ್ರವಾರ ಪೂಜೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ದಲಿತರಿಗೆ ಪ್ರವೇಶ ನಿರಾಕರಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು. ಮಂಗಳವಾರ ಸಂಜೆ ಗ್ರಾಮಕ್ಕೆ ಬಂದ ತಹಶೀಲ್ದಾರ್ ಸುಮಂತ್ ಅವರು ಇಬ್ಬರು ದಲಿತ ಯುವಕರನ್ನು ದೇಗುಲದ ಒಳಗೆ ಕರೆದೊಯ್ದರು.

ಅಂದು ದೇಗುಲದ ಕೀಲಿ ನೀಡಿದ್ದ ಗ್ರಾಮಸ್ತರು ಮತ್ತೆ ಅದನ್ನು ಪಡೆಯಲು ಹಿಂದೇಟು ಹಾಕಿದರು. ಪ್ರತಿದಿನ ಬೆಳಿಗ್ಗೆ, ಮತ್ತು ಸಂಜೆ ನಡೆಯುತ್ತಿದ್ದ ಪೂಜೆ, ಅಂದಿನಿಂದ ಸ್ಥಗಿತಗೊಂಡಿದೆ. ತಿರುಮಲ ದೇಗುಲ ಸೇರಿ ಸುತ್ತ ಇರುವ ನಾಲೈದು ಗುಡಿಗಳ ಪೂಜೆಯನ್ನು ಕುರುಬ ಸಮುದಾಯಕ್ಕೆ ಸೇರಿದ ಅರ್ಚಕರೇ ನಡೆಸುತ್ತಿದ್ದಾರೆ. ಅಂದಿನಿಂದ ಅಷ್ಟೂ ಗುಡಿಗಳ ಪೂಜೆ ನಡೆದಿಲ್ಲ ಎಂದು ವರದಿಯಾಗಿದೆ.

ಇದನ್ನೂ ನೋಡಿ : ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕೇರಳ ಮಾದರಿ ಜಾರಿಯಾಗಲಿ – ಡಾ. ಅನೀಲ್ Janashakthi Media

Donate Janashakthi Media

Leave a Reply

Your email address will not be published. Required fields are marked *