ರಾಜ್ಯಸಭೆಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಅಧಿಸೂಚನೆ: ಚುನಾವಣಾ ಆಯೋಗ

ನವದೆಹಲಿ: ರಾಜ್ಯಸಭೆಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್ 20ರಂದು ಮೇಲ್ಮನೆ ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಖಾಲಿ

ರಾಜ್ಯಸಭೆಗೆ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳು ಆರು ಸದಸ್ಯರನ್ನ ಆಯ್ಕೆ ಮಾಡಲಿವೆ.

ಆಂಧ್ರಪ್ರದೇಶ

ರಾಜ್ಯವು ಮೂವರು ಸಂಸದರನ್ನು ಕಳುಹಿಸಲಿದೆ. ಜಗನ್ ಮೋಹನ್ ರೆಡ್ಡಿ ವೈಎಸ್‌ಆರ್‌ಸಿಪಿ ಸಂಸದರಾದ ವೆಂಕಟರಮಣ ರಾವ್ ಮೋಪಿದೇವಿ, ಬೀಡಾ ಮಸ್ತಾನ್ ರಾವ್ ಯಾದವ್ ಮತ್ತು ರಾಗ ಕೃಷ್ಣಯ್ಯ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಈ ಎಲ್ಲಾ ಮೂರು ಸ್ಥಾನಗಳನ್ನು ಗೆಲ್ಲಲು ಸಜ್ಜಾಗಿದೆ.

ಇದನ್ನೂ ಓದಿ: ಮುಡಿಪು ಪೇಟೆ: ತ್ಯಾಜ್ಯ ವಿಲೇವಾರಿ ಘಟಕ ಅಸಮರ್ಪಕ ಕಾರ್ಯ ನಿರ್ವಹಣೆ: ತೆರವುಗೊಳಿಸುವಂತೆ ಡಿವೈಎಫ್ಐ ಮುಡಿಪು ಘಟಕ ಮನವಿ

ಒಡಿಶಾ 

ಪೂರ್ವ ರಾಜ್ಯವು ಮೇಲ್ಮನೆಗೆ ಒಬ್ಬ ಸದಸ್ಯರನ್ನು ಕಳುಹಿಸಲು ಸಜ್ಜಾಗಿದೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸಂಸದ ಸುಜೀತ್ ಕುಮಾರ್ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದಿಂದ ಬಿಜೆಪಿ ಈ ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳ 

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ಜವಾಹರ್ ಸಿರ್ಕಾ‌ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಈ ಸ್ಥಾನವನ್ನು ಆರಾಮವಾಗಿ ಉಳಿಸಿಕೊಳ್ಳಲು ಸಜ್ಜಾಗಿದೆ.

ಹರಿಯಾಣ 

ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯ ಕೃಷ್ಣ ಲಾಲ್ ಪನ್ವಾರ್ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಈ ಸ್ಥಾನವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

ಇದನ್ನೂ ನೋಡಿ: ಸುಳ್ಳು ಆರೋಪ ಮೆಟ್ಟಿ ನಿಂತು ದಿಗ್ವಿಜಯ ಸಾಧಿಸಿದ್ದೇವೆ! ಹ್ಯಾಟ್ರಿಕ್ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

Donate Janashakthi Media

Leave a Reply

Your email address will not be published. Required fields are marked *