ಬೆಂಗಳೂರು: ಕಳೆದ ಒಂದೂವರೆಗೆ ವರ್ಷದಿಂದ ವೇತನ ಹೆಚ್ಚಳದ ಬಾಕಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ನೌಕರರು ಸರ್ಕಾರಕ್ಕೆ ವಿವಿಧ ನೌಕರ ಸಂಘಟನೆಗಳು ಮನವಿ ಮಾಡಿದ್ದರು. ಅವರ ಮನವಿಗೆ ಸರ್ಕಾರ ಸಂದಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಗೆ ಬಾಕಿ ಇರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಇನ್ನೊಂದು ವಾರದಲ್ಲಿ ಅರ್ಹರ ಬ್ಯಾಂಕ್ ಖತೆಗೆ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸರ್ಕಾರ ಶೀಘ್ರವೇ ಮಹತ್ವದ ನಿರ್ಧಾರ ಕೈಗೊಂಡು ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಿಹಿ
2023 ಮೇ ತಿಂಗಳಲ್ಲಿ ಕರ್ನಾಟಕ ಕಾಂಗ್ರೆಸ್‌ಗೆ ಬಹುಮತ ಬಂದು ಅಧಿಕಾರ ಲಭಿಸಿತು. ಅಂದಿನಿಂದಲೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗೆ ಮನವಿಗಳನ್ನು ಸಲ್ಲಿಸಲಾಗುತ್ತ ಬರಲಾಗಿತ್ತು. ಇದೀಗ ಸರ್ಕಾರ ನೌಕರರಿಗೆ ಹಿಂಬಾಕಿ ನೀಡಲು ಮನಸ್ಸು ಮಾಡಿದೆ.
ಇದನ್ನೂ ಓದಿ: ಲಂಚ, ವಂಚನೆ ಪ್ರಕರಣ : ಸಿಬಿಐ ತಕ್ಷಣವೇ ಗೌತಮ್ ಅದಾನಿ ಮೇಲೆ ಭ್ರಷ್ಟಾಚಾರದ ಕೇಸು ದಾಖಲಿಸಬೇಕು-ಸಿಪಿಐ(ಎಂ) ಆಗ್ರಹ
ಸಾರಿಗೆ ನೌಕರರಿಗೆ 2020 ಜನವರಿ 01ರಿಂದ ಬಾಕಿ ಇರುವ ವೇತನ ಹೆಚ್ಚಳದ ಅಂಶವು ಇದೀಗ ನೌಕರರಿಗೆ ಮುಂದಿನ ಒಂದು ಇಲ್ಲವೇ ಎರಡು ವಾರದಲ್ಲಿ ಖಾತೆಗೆ ಜಮೆ ಆಗಲಿದೆ. ಈ ಮೂಲಕ ವರ್ಷಾಂತ್ಯಕ್ಕೆ ನೌಕರರಿಗೆ ಭರ್ಜರಿ ಸುದ್ದಿಯೊಂದನ್ನು ರಾಜ್ಯ ಸರ್ಕಾರ ನೀಡಿದೆ.
2020ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನದಲ್ಲಿ ಶೇಕಡಾ 15ರಷ್ಟು ಹೆಚ್ಚಳ ಮಾಡಲಾಗಿತ್ತು. ಅದಾದ ಬಳಿಕ ವೇತನದಲ್ಲಿ ಹೆಚ್ಚಾದ ಹಣ ನೌಕರರಿಗೆ ಪಾವತಿ ಆಗದೇ ಬಾಕಿ ಉಳಿಕೊಂಡಿತ್ತು. ಆ ಬೇಡಿಕೆಯ ಇದೀಗ ಈಡೇರುವ ಕಾಲ ಸಮೀಪಿಸಿದೆ. ಸದ್ಯಕ್ಕೆ ಸರ್ಕಾರ ಅಧಿಕೃತವಾಗಿ ಏನ್ನನ್ನು ತಿಳಿಸಿಲ್ಲ. ಬದಲಾಗಿ ಬಾಕಿ ಪಾವತಿಗೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವೇತನ ಹೆಚ್ಚಾದರೂ ಸಹಿತ ಸರ್ಕಾರ ಹಿಂಬಾಕಿ ನೀಡದ ಕಾರಣ, ಕೆಲವು ಭಾರಿ ಪ್ರತಿಭಟಿಸಲಾಗಿತ್ತು. ಕೊನೆಗೆ ಕಳೆದ ವರ್ಷ 2023ರ ಫೆಬ್ರವರಿಯಲ್ಲಿ ಹಿಂಬಾಕಿ ನೀಡದ ಸರ್ಕಾರದ ಕ್ರಮ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ನಿವೃತ್ತ ನೌಕರರು ಗುಟ್ಟಾಗಿ ಮಾಹಿತಿ ಕಲೆ ಹಾಕಿದ್ದರು.
ಸದ್ಯ ಸರ್ಕಾರ ಬಂದ ಬಳಿಕ ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ಇಲಾಖೆಗೆ ಮತ್ತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಿದೆ. ಈ ನಡುವೆ ಮತ್ತೊಮ್ಮೆ ನೌಕರರ ಸಂಘವು ಸರ್ಕಾರಕ್ಕೆ ಹಿಂಬಾಕಿಗೆ ಮನವಿ ಮಾಡಿತ್ತು. ಸ್ಪಂದಿಸುವುದಾಗಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದರು. ಇದೆಲ್ಲ ಬೆಳವಣಿಗೆ ನಡುವೆ ಇದೀಗ ಮುಂದಿನ ಒಂದು ವಾರದೊಳಗೆ ಎಲ್ಲ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ನೀಡುವುದಾಗಿ ಸರ್ಕಾರ ತಿಳಿಸಿದೆ.
ಇದನ್ನೂ ನೋಡಿ: ‘ಆರ್.ಬಿ. ಮೋರೆ | ದಲಿತರಿಗೂ ಕಮ್ಯುನಿಸ್ಟರಿಗೂ ಹಿಡಿದ ಕನ್ನಡಿ – ಬಂಜಗೆರೆ ಜಯಪ್ರಕಾಶ್ Janashakthi Media