ಜಾರ್ಖಂಡ್ ವಿಧಾನಸಭಾ ಚುನಾವಣೆ: ಭ್ರಷ್ಟ, ವಿಭಜಕ ರಾಜಕಾರಣ ಸೋಲಿಸಲು-ಪರ್ಯಾಯದ ಹುಡುಕಾಟ

ಸುಬೋಧ್ ವರ್ಮಾ-ಸುಬೋಧ್ ವರ್ಮಾ

ಅನು: ನಾಗರಾಜ ನಂಜುಂಡಯ್ಯ

ದೇಶದ ಎರಡನೇ ದೊಡ್ಡ ಬಡ ರಾಜ್ಯ ಎಂದು ಜಾರ್ಖಂಡ್ ಅನ್ನು ಅಂದಾಜಿಸಿಲಾಗಿದೆ. ರಾಜ್ಯದ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಯು ಅಂತಹ ನೀತಿಗಳಿಂದ ದೂರವಿದ್ದು, ಧಾರ್ಮಿಕ ವಿಭಜನೆ ಮತ್ತು ಅಸ್ಮಿತೆ ಆಧಾರಿತ ರಾಜಕೀಯವನ್ನು ಪ್ರಚೋದಿಸುತ್ತಿದೆ. ಇಂಡಿಯಾ ಬ್ಲಾಕ್ ಕೂಡ ಆರ್ಥಿಕ ನೀತಿಗಳಲ್ಲಿನ ಮೂಲಭೂತ ಬದಲಾವಣೆಗಳಿಗಿಂತ ಹೆಚ್ಚಾಗಿ ‘ಮೈಯ್ಯ ಸಮ್ಮಾನ್ ಯೋಜನೆ’ ಯಂತಹ ತನ್ನ ನೀತಿಗಳ ಮೇಲೆ ಆಧರಿಸಿದೆ. ಬಿಜೆಪಿಯ ವಿಭಜಕ ಕಾರ್ಯಸೂಚಿಗೆ ಅವರ ಪ್ರತಿ ಸವಾಲು ಕೂಡ ನೀರಸವಾಗಿದೆ. ಪ್ರಾಯಶಃ ಎಡ ಶಕ್ತಿಗಳು ದೊಡ್ಡ ಬೆಂಬಲಕ್ಕಾಗಿ ದೃಢವಾದ ಸ್ಪರ್ಧೆಯನ್ನು ಮಾಡುವ ಸಮಯ ಒದಗಿ ಬಂದಿದೆ, ಆದರೂ ಅದು ಇನ್ನೂ ಅಧಿಕಾರ ಹಿಡಿಯುವಷ್ಟು ಸ್ಪರ್ಧೆ ಮಾಡುವ ಸ್ಥಿತಿಯಲ್ಲಿಲ್ಲ. ಕಾದು ನೋಡೋಣ?

ಜಾರ್ಖಂಡ್ ರಾಜ್ಯವು ತನ್ನ 6ನೇ ವಿಧಾನಸಭೆಯನ್ನು ಆಯ್ಕೆ ಮಾಡಲು ನವೆಂಬರ್ 13 ಮತ್ತು 20, 2024 ರಂದು ಎರಡು ಹಂತಗಳಲ್ಲಿ ಚುನಾವಣೆ ಎದುರಿಸುತ್ತಿದೆ. ನವೆಂಬರ್ 2000 ರಲ್ಲಿ ರಚನೆಯಾದ ಬುಡಕಟ್ಟು ಪ್ರಾಬಲ್ಯದ ಈ ರಾಜ್ಯವು 24 ವರ್ಷಗಳ ಅವಧಿಯಲ್ಲಿ 13 ಸರ್ಕಾರಗಳನ್ನು ಕಂಡಿದೆ. (ಇದರಲ್ಲಿ ಏಳು ಮುಖ್ಯಮಂತ್ರಿಗಳು ಮತ್ತು ಮೂರು ಬಾರಿ ರಾಷ್ಟ್ರಪತಿ ಆಳ್ವಿಕೆ ಒಳಗೊಂಡಿದೆ). ಈ ಅವಧಿಯಲ್ಲಿ ಸರಿ ಸುಮಾರು ಅರ್ಧದಷ್ಟು ಕಾಲ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತ ನಡೆಸಿದೆ. ಉಳಿದಂತೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು (ಜೆಎಂಎಂ) ಇತರರೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದೆ.

2006-2008ರಲ್ಲಿ ಸ್ವತಂತ್ರವಾಗಿ ಶಾಸಕರಾಗಿದ್ದ ಮಧುಕೋಡಾ ಅವರು ಸುಮಾರು ಎರಡು ವರ್ಷಗಳ ಕಾಲ ಜೆಎಂಎಂ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಆಡಳಿತ ಮಾಡಿದ್ದರು, ಆದರೂ ಮಧುಕೋಡ ಅವರು ಮೂಲತಃ ಬಿಜೆಪಿ ಶಾಸಕರಾಗಿದ್ದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಾರ್ಖಂಡ್ ನ ಜನರು ಈ ಪಕ್ಷ ಅಥವಾ ಆ ಪಕ್ಷವನ್ನು ಬೆಂಬಲಿಸುತ್ತಾ, ಆಗಾಗ್ಗೆ ಒಡೆದ ಜನಾದೇಶಗಳನ್ನು ನೀಡುವ ಸರ್ಕಾರಗಳನ್ನೇ ನೋಡುತ್ತಿದ್ದಾರೆ. ಹಾಗಾಗಿ, ಜಾರ್ಖಂಡ್ ನಲ್ಲಿ ಹೊಸ ಪರ್ಯಾಯಕ್ಕಾಗಿ ಹುಡುಕಾಟ ನಡೆಯುತ್ತಲೇ ಇದೆ.

ಇದನ್ನೂ ಓದಿ: ಒಂದನೇ ತರಗತಿಗೆ  4.27 ಲಕ್ಷ ಶಾಲಾಶುಲ್ಕ: ಸಾಮಾಜಿಕ ಜಾಲತಾಣಗಳಲ್ಲಿ ಹರೆದಾಡುತ್ತಿರುವ ಖಾಸಗಿ ಶಾಲೆಯ ಶುಲ್ಕ ರಸೀದಿ

ಇಂತಹ ಹುಡುಕಾಟದ ಪರಿಸ್ಥಿತಿ ಜಾರ್ಖಂಡ್ ಗೆ ಮಾತ್ರ ಸೀಮಿತವಾಗದೆ, ಇನ್ನಿತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನರು ಕೂಡ ವಿವಿಧ ರಾಜಕೀಯ ಪಕ್ಷಗಳ ಬಾಗಿಲುಗಳನ್ನು ಆಗಾಗ್ಗೆ ತಟ್ಟುತ್ತಲೇ ಇರುತ್ತಾರೆ. ಆದರೆ ಜಾರ್ಖಂಡ್ ನಲ್ಲಿ, ದೀರ್ಘ ಮತ್ತು ಪ್ರಯಾಸಕರ ಹೋರಾಟದ ನಂತರ ಹೊಸ ರಾಜ್ಯ ರಚನೆಯ ಆರಂಭದಿಂದಲೇ, ಸ್ಥಳೀಯವಾಗಿ ಬಡತನ, ಅಭಾವ ಮತ್ತು ಹಕ್ಕು ನಿರಾಕರಣೆಗಳ ಸಂಕೋಲೆಗಳನ್ನು ಮುರಿಯಬಹುದು ಎಂಬ ಭರವಸೆಯನ್ನು ಹುಟ್ಟುಹಾಕಿತ್ತು. ದೇಶದ ಅಂದಾಜು ಶೇಕಡ 40 ರಷ್ಟು ಖನಿಜ ಸಂಪತ್ತನ್ನು ಈ ರಾಜ್ಯವು ಹೊಂದಿದೆ. ಹಾಗಾಗಿಯೇ ಉದ್ಯೋಗಗಳ ಆಧಾರದ ಮೇಲೆ ಸಮೃದ್ಧಿ ಮತ್ತು ಘನತೆಯ ಜೀವನ ಶೀಘ್ರದಲ್ಲೇ ಬರಲಿದೆ ಎಂಬ ಭರವಸೆಯನ್ನು ಜನರು ಇಟ್ಟುಕೊಂಡಿದ್ದಾರೆ. ಆದರೆ, ವಿಭಜಕ, ಭ್ರಷ್ಟ ಹಾಗೂ ಧಾರ್ಮಿಕ ಒಳ ಕಾರ್ಯಸೂಚಿಗಳ ಆಡಳಿತದಿಂದಾಗಿ ಇದು ಸಾಧ್ಯವಾಗಿಲ್ಲ.

ಆದರೆ, ಜನರು ಕನಿಷ್ಠ ಉದ್ಯೋಗ, ಸಮೃದ್ಧಿಯ ಭರವಸೆಯೊಂದಿಗೆ ರಾಜಕೀಯ ಆಡಳಿತದ ಹುಡುಕಾಟದಲ್ಲಿ ಇದ್ದಾರೆ. ಜಾರ್ಖಂಡ್ 2005-06 ರಲ್ಲಿ ಶೇ.74 ಬಡತನದೊಂದಿಗೆ ದೇಶದ ಎರಡನೇ ದೊಡ್ಡ ಬಡ ರಾಜ್ಯವಾಗಿದೆ. 2019-21 ರಲ್ಲಿ ಇದು ಇನ್ನೂ ಶೇ.29 ಬಡತನದ ದರ ಹೊಂದಿದೆ ಎಂದು ಅಂಕಿಅಂಶಗಳು ಅಂದಾಜಿಸಿವೆ. ಈ ಎರಡು ವರ್ಷಗಳಲ್ಲಿ, ಜಾರ್ಖಂಡ್ ಅನ್ನು ಕೆತ್ತಿದ ಅದರ ಮೂಲ ಅಸ್ಥಿತ್ವದ ನೆರೆಯ ಬಿಹಾರವು ಅತ್ಯಂತ ಬಡ ರಾಜ್ಯವಾಗಿತ್ತು. ಇದು ನೀತಿ ಆಯೋಗ ಅಂದಾಜಿಸಿದ ಬಡತನ ಸೂಚ್ಯಂಕವನ್ನು ಆಧರಿಸಿದೆ. ಇದು ಬಡತನದ ಬದಲಿಗೆ ವಿವಾದಾತ್ಮಕ ವ್ಯಾಖ್ಯಾನವನ್ನು ಅಳವಡಿಸಿಕೊಂಡಿದೆ ಎನ್ನಲಾಗಿದೆ.

ಆದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಈ ಅಳತೆ ಎಂದು ವಿಮರ್ಶಕರು ಭಾವಿಸುತ್ತಾರೆ ಬಡತನವನ್ನು ಕಡಿಮೆ ಅಂದಾಜು ಮಾಡುತ್ತಿದೆ. ಅದಿರಲಿ, ಬೇರೆ ಯಾವುದೇ ವ್ಯಾಖ್ಯಾನದ ಅನುಪಸ್ಥಿತಿಯಲ್ಲಿ, ಡೇಟಾವು ಒಂದು ಅಂಶವನ್ನು ವಿವರಿಸುತ್ತದೆ: ಜಾರ್ಖಂಡ್ ತನ್ನ ಬಡತನ ಮತ್ತು ಅಭಾವದ ಆಘಾತಕಾರಿ ಮಟ್ಟವನ್ನು ಭೇದಿಸಲು ಅಥವಾ ಸುಧಾರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಹತಾಶ ಜನರು ಒಂದು ಮಾರ್ಗವನ್ನು ಹುಡುಕುತ್ತಾ ಒಂದು ಪಕ್ಷದಿಂದ ಇನ್ನೊಂದಕ್ಕೆ ಓಡುವುದರಲ್ಲಿ ಆಶ್ಚರ್ಯವೇನು ಇಲ್ಲ ಎನಿಸುತ್ತದೆ.

ಚುನಾವಣಾ ರಾಜಕೀಯ ಸುತ್ತಾ ಸುತ್ತುವ ಪರಿ

ಜಾರ್ಖಂಡ್‌ ನಲ್ಲಿನ ಘರ್ಷಣೆಗಳು, ನಿರಂತರವಾಗಿ ಬದಲಾಗುತ್ತಿರುವ ಚುನಾವಣಾ ಮೆರಿ-ಗೋ-ರೌಂಡ್ ನಂತೆ ಒಂದು ನೋಟವಾಗಿದೆ. ಆಡಳಿತಗಳ ವಿಫಲತೆಯ ಪ್ರತಿಬಿಂಬ ಇಲ್ಲಿ ಗೋಚರಿಸುತ್ತದೆ. ಚುನಾವಣಾ ಆಯೋಗದ ಡೇಟಾವನ್ನು ಆಧರಿಸಿ ಕೆಳಗಿನ ಚಾರ್ಟ್ ನಲ್ಲಿ ನೋಡಬಹುದು. ಇದು ಎರಡು ಪ್ರಮುಖ ಮೈತ್ರಿಕೂಟಗಳು ಮತ್ತು ಇತರರು ಗೆದ್ದಿರುವ ಸ್ಥಾನಗಳ ಸಂಖ್ಯೆಯನ್ನು ಪ್ರತಿಬಬಿಸುತ್ತದೆ. ಬಿಜೆಪಿ ಮೈತ್ರಿಕೂಟವು ಸ್ವತಃ ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು) ಅನ್ನು ಒಳಗೊಂಡಿತ್ತು, ಇದರ ಮೈತ್ರಿಕೂಟವು ಒಟ್ಟಾಗಿ 2014 ರಲ್ಲಿ 42 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತು.

ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಎಡಪಕ್ಷಗಳನ್ನು ಒಳಗೊಂಡಂತೆ 26 ಸ್ಥಾನಗಳನ್ನು ಗೆದ್ದಿಕೊಂಡಿತ್ತು. ಹಲವಾರು ಸಣ್ಣ ಪಕ್ಷಗಳು ಮತ್ತು ಸ್ವತಂತ್ರರನ್ನು ರೂಪಿಸುವ ಇತರರು 13 ಸ್ಥಾನಗಳನ್ನು ಪಡೆದಿದ್ದರು. ಆದರೆ 2019 ರ ಮುಂದಿನ ಚುನಾವಣೆಯಲ್ಲಿ, ಜನರು ಬಿಜೆಪಿ ಸರ್ಕಾರದಿಂದ ಬೇಸತ್ತಾಗಿ, ಮೇಜುಗಳನ್ನು ತಿರುಗಿಸಿದ್ದರು. ಇದು ಮುಖ್ಯಮಂತ್ರಿ ರಘುಬರ್ ದಾಸ್ ಅವರ ನೇತೃತ್ವದಲ್ಲಿ ಪ್ರಾಸಂಗಿಕವಾಗಿ ಮೊದಲ ಬುಡಕಟ್ಟು ಅಲ್ಲದ ಆಡಳಿತ ರಚಿಸಲ್ಪಟ್ಟಿತು.

2019 ರಲ್ಲಿ, ಬಿಜೆಪಿ-ಎಜೆಎಸ್‌ಯು, ಮೈತ್ರಿ 27 ಸ್ಥಾನಗಳನ್ನು ಮಾತ್ರ ಪಡೆದಿತ್ತು., ಕಾಂಗ್ರೆಸ್-ಜೆಎಂಎಂ-ಆರ್‌ಜೆಡಿ-ಎಡ ಮಹಾ ಘಟ್ ಬಂಧನ್ (ಮಹಾ ಮೈತ್ರಿ) 48 ಸ್ಥಾನಗಳ ಸಾಧನೆಗೈದು ಸುಲಭವಾಗಿ ಅಧಿಕಾರಕ್ಕೆ ಬಂದಿತು. ‘ಇತರರ’ ಸಂಖ್ಯೆಯೂ ಆ ಚುನಾವಣೆಯಲ್ಲಿ 13 ಸ್ಥಾನಗಳಿಂದ 6 ಸ್ಥಾನಗಳಿಗೆ ಕುಸಿದಿತ್ತು ಎಂಬುದನ್ನು ಗಮನಿಸಬೇಕು. 2014 ರಲ್ಲಿ ನರೇಂದ್ರ ಮೋದಿಯವರ ಭರವಸೆಗಳ ಮೊದಲ ಸರದಿಯಲ್ಲಿ ಜನರು ಬಿಜೆಪಿಗೆ ಮತ ಹಾಕಿದ್ದರು. ಆದರೆ ಐದು ವರ್ಷಗಳ ನಂತರ, ಜನರ ಕನಸು ಭಗ್ನಗೊಂಡಿತು. ಮೋದಿಯವರ ಸುಳ್ಳು ಭರವಸೆಗಳಿಂದಾಗಿ ಬಿಜೆಪಿ ನೆಲಕಚ್ಚಿತು. ಜನರು ಹಿಂತಿರುಗಿ ಮತ್ತೆ ಎಒಒ ಮತ್ತು ಅದರ ಮಿತ್ರಪಕ್ಷಗಳಿಗೆ ಮಣೆ ಹಾಕಿದ್ದರು.

ಇದನ್ನೂ ನೋಡಿ: ‘ಆರ್‌.ಬಿ. ಮೋರೆ | ದಲಿತರಿಗೂ ಕಮ್ಯುನಿಸ್ಟರಿಗೂ ಹಿಡಿದ ಕನ್ನಡಿ – ಬಂಜಗೆರೆ ಜಯಪ್ರಕಾಶ್‌ Janashakthi Media

2024 ರ ಲೋಕಸಭಾ ಚುನಾವಣೆಯಲ್ಲಿ, ರಾಷ್ಟ್ರೀಯ ಕಾಳಜಿಗಳು ಪ್ರಾಬಲ್ಯ ಹೊಂದಿದ್ದವು ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ರಾಜ್ಯದಿಂದ ಘನ ಜನಾದೇಶವನ್ನು ನೀಡಲಾಯಿತು, ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಅಸೆಂಬ್ಲಿ ಕ್ಷೇತ್ರಗಳಾದ್ಯಂತ ಈ ಮತವನ್ನು ಕಳೆದು ನೋಡಿದರೆ, ಬಿಜೆಪಿ 47 ಸ್ಥಾನಗಳಲ್ಲಿ ಮತ್ತು ಅದರ ಮಿತ್ರ ಪಕ್ಷವಾದ ಎಜೆಎಸ್‌ಯು 5 ಮುನ್ನಡೆ ಸಾಧಿಸುತ್ತದೆ. ಇದು ಎನ್‌ಡಿಎ ಗೆ ಒಟ್ಟು 52 ಸ್ಥಾನಗಳನ್ನು ತಂದುಕೊಟ್ಟಿತು. ವಿರೋಧ ಪಕ್ಷವಾದ ಇಂಡಿಯಾ ಬಣವು 29 ಅಸೆಂಬ್ಲಿ ಕ್ಷೇತ್ರಗಳಲ್ಲಿ, ಅದರಲ್ಲಿ ಜೆಎಂಎಂ 14 ಮತ್ತು ಕಾಂಗ್ರೆಸ್ 15 ಸ್ಥಾನ ಪಡೆದವು.

ಇತ್ತೀಚಿನ ಚುನಾವಣಾ ಇತಿಹಾಸದ ಈ ಸಂಕ್ಷಿಪ್ತ ಪುನರಾವರ್ತನೆಯು ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀಳಬಹುದು ನೋಡಣ? ಹಿಂದಿಂತೆ ಜನರು ಕೆಲವು ಬದಲಾವಣೆಗಳನ್ನು ಹುಡುಕುವ ಮಟ್ಟಿಗೆ ಪರಿಸ್ಥಿತಿ ಉದ್ಬವಗೊಂಡಿರುವುದು ಕಾಣುತ್ತಿದೆ. ಇದರಲ್ಲಿ ಹೆಚ್ಚು ಪರಿಗಣಿಸಲ್ಪಡುವ ಅಂಶವೆಂದರೆ, ಜನರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳನ್ನು ಪರಿಹರಿಸುವ ಹೊಸ ಶಕ್ತಿಯ ಹೊರಹೊಮ್ಮುವಿಕೆಗೆ ಖಂಡಿತ ಅವಕಾಶದ ವಾತಾವರಣವಿದೆ ಎಂದೆನುಸುತ್ತದೆ. ಆದರೆ ಚಾಲ್ತಿಯಲ್ಲಿರುವ ಭ್ರಷ್ಟ ಮತ್ತು ಅವನತಿಯ ರಾಜಕೀಯ ಶಕ್ತಿಗಳಿಂದ ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲು ನಿರಂತರ ಪ್ರಯತ್ನಗಳು ನಡೆಯುತ್ತಲಿವೆ.

ಪರ್ಯಾಯ ನೀತಿಗಳ ಅಗತ್ಯವಿದೆ

ಯಾವ ರೀತಿಯ ಪರ್ಯಾಯ ನೀತಿಗಳು ಜನರಿಗೆ ನಿಜವಾಗಿಯೂ ಪ್ರಯೋಜನವನ್ನು ನೀಡಬಲ್ಲವು? ಅಗ್ರಗಣ್ಯವಾಗಿ, ಮೊದಲ ಅಂಶವೆಂದರೆ, ಖನಿಜ ಸಂಪನ್ಮೂಲಗಳ ಕಡೆಗೆ ಸುಸ್ಥಿರ ಮತ್ತು ನ್ಯಾಯೋಚಿತ ನೀತಿಯ ಅಗತ್ಯತೆ ಜನರ ಗಮನವನ್ನು ಸೆಳೆಯುತ್ತದೆ. ಇದರ ಅರ್ಥವೆಂದರೆ, ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಹೊರ ತೆಗೆಯುವ ಚಟುವಟಿಕೆಗಳಂತಹ ಕೈಗಾರಿಕೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು. ಹೊರ ತೆಗೆಯಲಾದ ಖನಿಜ ಸಂಪತ್ತಿನ ಮೇಲಿನ ರಾಯಧನ ಮತ್ತು ವಿವಿಧ ಕೆಳಮಟ್ಟದ ಸಂಸ್ಕರಣೆಯನ್ನು ರಾಜ್ಯದ ಜನರ ಕಲ್ಯಾಣಕ್ಕಾಗಿ ಬಳಸಲು ಸಂಪನ್ಮೂಲಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರಗಳು ಕಾರ್ಯಸೂಚಿ ಹೊಂದಿರಬೇಕು.

ವಿದ್ಯುತ್ ಉತ್ಪಾದನೆಯಂತಹ ಇತರ ಸಂಬಂಧಿತ ಕೈಗಾರಿಕೆಗಳು ದೇಶೀಯ ಅಗತ್ಯಗಳನ್ನು ಮೊದಲು ಮತ್ತು ಕೈಗೆಟುಕುವ ದರಗಳಲ್ಲಿ ಪೂರೈಸಲು ಸಜ್ಜಾಗಬೇಕು. ಭೂಮಿಯನ್ನು ಖಾಸಗಿಯಾಗಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಮತ್ತು ಅರಣ್ಯಗಳ ನಿರ್ಲಜ್ಜ ವಿನಾಶ ಅಥವಾ ಬುಡಕಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಹೆಚ್ಚು ಮಾಪನಾಂಕವಾಗಿ ನಿರ್ಣಯಿಸಬೇಕು, ಸಮುದಾಯಗಳ ಒಪ್ಪಿಗೆಯೊಂದಿಗೆ ಮತ್ತು ಉದ್ಯೋಗ ಮತ್ತು ಪರಿಹಾರದ ಸಾಕಷ್ಟು ಖಾತರಿಗಳೊಂದಿಗೆ ಮುನ್ನೆಡಯಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಾರ್ಖಂಡ್ ನಿಂದ ಸಂಪನ್ಮೂಲಗಳ ಹರಿವು ಮತ್ತು ದೇಶೀಯ ಮತ್ತು ವಿದೇಶಿ ಉದ್ಯಮಿಗಳ ಜೇಬಿಗೆ ಅಥವಾ ಗೂಡಿಗೆ ಹೋಗುವುದನ್ನು ತಡೆಹಿಡಿಯಬೇಕು. ಇದರಿಂದ ಜನರು ಖನಿಜ ಸಂಪತ್ತಿನಿಂದ ಪ್ರಯೋಜನ ಪಡೆಯುವಂತಾಗುತ್ತದೆ.

ಒಟ್ಟಾರೆಯಾಗಿ, ರಾಜ್ಯ ದೇಶೀಯ ಉತ್ಪನ್ನದ (GDP) ಮೂರನೇ ಒಂದು ಭಾಗದಷ್ಟು ಕೃಷಿಯು ಕೊಡುಗೆ ನೀಡುತ್ತಿದೆ. ಇದು ಕೈಗಾರಿಕೆಗಳ ಕೊಡುಗೆಯಷ್ಟೆ ಸರಿಸುಮಾರು ಅದೇ ಪಾಲಿನಷ್ಟಿದೆ. ಆದಾಗ್ಯೂ, ಜಾರ್ಖಂಡ್ ಆರ್ಥಿಕ ಸಮೀಕ್ಷೆಯು ಉದ್ಯೋಗಗಳಲ್ಲಿ ತೀವ್ರವಾದ ಬದಲಾವಣೆಯನ್ನು ಬಹಿರಂಗಪಡಿಸುತ್ತದೆ. ಕೃಷಿಯಲ್ಲಿ ದುಡಿಯುವ ಪುರುಷರ ಪಾಲು 2017-18 ರಲ್ಲಿ ಸುಮಾರು ಶೇಕಡಾ 43 ರಿಂದ 2022-23 ರಲ್ಲಿ ಶೇಕಡಾ 30ಕ್ಕೆ ಇಳಿದಿದೆ. ಆದರೆ ಮಹಿಳೆಯರ ಪಾಲು ಶೇಕಡಾ ಸುಮಾರು 80 ಅಂದರೆ, ಶೇ 60 ರಷ್ಟು ಏರಿದೆ.

ಅತ್ಯಲ್ಪ ಹಿಡುವಳಿಗಳ ತೀವ್ರ ಹೆಚ್ಚಳ ಮತ್ತು ಇತರ ಎಲ್ಲಾ ದೊಡ್ಡ ಹಿಡುವಳಿಗಳಲ್ಲಿನ ಕುಸಿತದೊಂದಿಗೆ, ಇದು ಅತ್ಯಂತ ಸಣ್ಣ, ಜೀವನಾಧಾರ ಮಟ್ಟದ ಕೃಷಿಯೊಂದಿಗೆ ಕೃಷಿಯಲ್ಲಿ ಭೀಕರ ಬಿಕ್ಕಟ್ಟನ್ನು ಸೂಚಿಸುತ್ತದೆ. ಪುರುಷ ಕೃಷಿ ಕಾರ್ಮಿಕರ ಕುಸಿತವನ್ನು ಗಣಿಗಾರಿಕೆ ಅಥವಾ ಉತ್ಪಾದನೆಗೆ ಬದಲಾಯಿಸುವುದರಿಂದ ಸರಿದೂಗಿಸಲು ಅಸಾಧ್ಯ. ಈ ಎರಡು ವಲಯಗಳಲ್ಲಿನ ಅವರ ಷೇರುಗಳು ಅನುಕ್ರಮವಾಗಿ 1.7 ಪ್ರತಿಶತ ಮತ್ತು 9 ಪ್ರತಿಶತದಷ್ಟು ಅಗಾಧವಾಗಿರುತ್ತವೆ. 2017-18 ರಲ್ಲಿ ಶೇ. 20ಕ್ಕೆ ಹೋಲಿಸಿದರೆ 2022-23ರಲ್ಲಿ ಸುಮಾರು ಶೇ. 26 ರಷ್ಟು ಪುರುಷರು ಕೆಲಸ ಮಾಡುವ ನಿರ್ಮಾಣ ಕ್ಷೇತ್ರದಲ್ಲಿ ಅನೌಪಚಾರಿಕ ಕಾಲೋಚಿತ ಕೆಲಸವನ್ನು ಒಪ್ಪಿಕೊಳ್ಳಬೇಕಾದ ಹೆಚ್ಚಿನ ಪುರುಷರು ಕೃಷಿಯನ್ನು ತೊರೆದಿದ್ದಾರೆ.

ರೈತರಿಗೆ ಉತ್ತಮ ನೀರಾವರಿ, ಅಗ್ಗದ ಒಳಹರಿವು, ವಿಸ್ತೃತ ಬುಟ್ಟಿಯ ಉತ್ಪನ್ನಗಳಿಗೆ ಹೆಚ್ಚಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖಚಿತವಾದ ಸಂಗ್ರಹಣೆ ಮತ್ತು ಇತರ ನೀತಿಗಳೊಂದಿಗೆ ಮಾತ್ರ ಈ ಬಿಕ್ಕಟ್ಟನ್ನು ಪರಿಹರಿಸಬಹುದು. ಇತರ ಕೃಷಿ ಉತ್ಪನ್ನಗಳಾದ ಹಣ್ಣುಗಳು, ತರಕಾರಿಗಳು, ಔಷಧೀಯ ಸಸ್ಯಗಳು ಮತ್ತು ನಗದು ಬೆಳೆಗಳಿಗೆ ಸಹ ಬೆಂಬಲ ಬೆಲೆಯ ಅಗತ್ಯವಿದೆ. ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಯಲ್ಲಿನ ಆಘಾತಕಾರಿ ಕಡಿಮೆ ಮಟ್ಟದ ಉದ್ಯೋಗವು ರಾಜ್ಯದಲ್ಲಿನ ಹೊರತೆಗೆಯುವ ಕೈಗಾರಿಕೆಗಳು ಸ್ಥಳೀಯ ಉದ್ಯೋಗವನ್ನು ಗಮನದಲ್ಲಿರಿಸಿ ಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳ ವೈಫಲ್ಯವನ್ನು ಬಹಿರಂಗಪಡಿಸುತ್ತದೆ.

ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಯು ಅಂತಹ ನೀತಿಗಳಿಂದ ದೂರವಿದ್ದು, ಧಾರ್ಮಿಕ ವಿಭಜನೆ ಮತ್ತು ಅಸ್ಮಿತೆ ಆಧಾರಿತ ರಾಜಕೀಯವನ್ನು ಪ್ರಚೋದಿಸುತ್ತಿದೆ. ಇಂಡಿಯಾ ಬ್ಲಾಕ್ ಕೂಡ ಆರ್ಥಿಕ ನೀತಿಗಳಲ್ಲಿನ ಮೂಲಭೂತ ಬದಲಾವಣೆಗಳಿಗಿಂತ ಹೆಚ್ಚಾಗಿ ‘ಮೈಯ್ಯ ಸಮ್ಮಾನ್ ಯೋಜನೆ’ ಯಂತಹ ತನ್ನ ನೀತಿಗಳ ಮೇಲೆ ಆಧರಿಸಿದೆ. ಬಿಜೆಪಿಯ ವಿಭಜಕ ಕಾರ್ಯಸೂಚಿಗೆ ಅವರ ಪ್ರತಿ ಸವಾಲು ಕೂಡ ನೀರಸವಾಗಿದೆ. ಪ್ರಾಯಶಃ ಎಡ ಶಕ್ತಿಗಳು ದೊಡ್ಡ ಬೆಂಬಲಕ್ಕಾಗಿ ದೃಢವಾದ ಸ್ಪರ್ಧೆಯನ್ನು ಮಾಡುವ ಸಮಯ ಒದಗಿ ಬಂದಿದೆ, ಆದರೂ ಅದು ಇನ್ನೂ ಅಧಿಕಾರ ಹಿಡಿಯುವಷ್ಟು ಸ್ಪರ್ಧೆ ಮಾಡುವ ಸ್ಥಿತಿಯಲ್ಲಿಲ್ಲ. ಕಾದು ನೋಡೋಣ?

ಇದನ್ನೂ ಓದಿ: ಹೇರ್ ಡ್ರೈಯರ್ ಸ್ಪೋಟ; ಮಹಿಳೆಯ ಎರಡೂ ಕೈ ತುಂಡು

Donate Janashakthi Media

Leave a Reply

Your email address will not be published. Required fields are marked *