-ಸಿ.ಸಿದ್ದಯ್ಯ
ದೇಶದಲ್ಲಿ ಡಿಜಿಟಲ್ ವಂಚನೆಗಳು ಹೆಗ್ಗಿಲ್ಲದೆ ನಡೆಯುತ್ತಿವೆ. ಲಕ್ಷಾಂತರ ಜನರು ತಮ್ಮ ಹಣ ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಇಂತಹ ವಂಚನೆ ದಿನೇ ದಿನೇ ಹೆಚ್ಚುತ್ತಲೇ ಇವೆ. ಸೈಬರ್ ಅಪರಾಧಿಗಳು ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ರೂ. 1770 ಕೋಟಿವರೆಗೆ ವಂಚಿಸಿದ್ದಾರೆ. ದಿನವೊಂದರಲ್ಲಿ ಸರಾಸರಿ 6,000 ಕ್ಕೂ ಹೆಚ್ಚು ಸೈಬರ್ ಅಪರಾಧಗಳ ದೂರುಗಳನ್ನು I4C ಸ್ವೀಕರಿಸುತ್ತಿದೆ. ಯೋಚಿಸಿ
ಇಂತಹ ವಂಚಕರ ವಿರುದ್ದ ಕಠಿಣ ಕ್ರಮ ತೆಗೆದುಕೊಂಡು, ಡಿಜಿಟಲ್ ವಂಚನೆಯಿಂದ ಪ್ರಜೆಗಳನ್ನು ರಕ್ಷಿಸುವ ಜವಾಬ್ಧಾರಿ ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು “ಕಾಯಿರಿ, ಯೋಚಿಸಿ, ನಂತರ ಪ್ರತಿಕ್ರಿಯಿಸಿ” ಎಂಬ ಮೂರು ಮಂತ್ರವನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ!! ಜನರು ಎಚ್ಚರಿಕೆಯಿಂದ ಇರುತ್ತಿಲ್ಲವಾದ ಕಾರಣಕ್ಕೆ ತಮ್ಮ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಮೋದಿ ಪರೋಕ್ಷವಾಗಿ ಹೇಳುತ್ತಿದ್ದಾರೆಯೇ? ಯೋಚಿಸಿ
“ದೂರವಾಣಿ ಕರೆ ಮಾಡಿ ‘ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ’ ಎಂದು ಹೆದರಿಸಿ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಲಪಟಾಯಿಸುವ ದಂಧೆ ದೇಶಾದ್ಯಂತ ವ್ಯಾಪಿಸಿರುವಾಗಲೇ, ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರು ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದ್ದಾರೆ…. ಯೋಚಿಸಿ
ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು
“ಇಂತಹ ಕ್ರಿಮಿನಲ್ ಗಳಿಂದ ಪಾರಾಗಲು ಅವರು ದೇಶವಾಸಿಗಳಿಗೆ ಮೂರು ಸಲಹೆಗಳನ್ನು ನೀಡಿದ್ದಾರೆ….” ಯೋಚಿಸಿ
ಹೀಗೆ ಬಂಡವಾಳಶಾಹಿ ಮಾಧ್ಯಮಗಳು (ಅಥವಾ ಗೋಡಿ ಮಾಧ್ಯಮಗಳು) ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದವು. ಆದರೆ, “ನಿಮ್ಮ ಒಂದೇ ಒಂದು ಪೈಸೆಯನ್ನೂ ಡಿಜಿಟಲ್ ವಂಚಕರು ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ, ವಂಚಕರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುತ್ತದೆ. ನೀವು ಧೈರ್ಯದಿಂದ ಡಿಜಿಟಲ್ ವ್ಯವಹಾರ ಮುಂದುವರಿಸಿ. ದೇಶದಲ್ಲಿ ಡಿಜಿಟಲ್ ಪಾವತಿ ಸುರಕ್ಷಿತವಾಗಿರುತ್ತದೆ.” ಈ ರೀತಿ ಹೇಳುವ ಮೂಲಕ ಪ್ರಧಾನಿಯವರು ಜನರಲ್ಲಿ ಧೈರ್ಯ ತುಂಬಲಿಲ್ಲವಲ್ಲ ಎಂದು ಯಾವ ಮಾಧ್ಯಮಗಳೂ ಪ್ರಧಾನಿಯವರಿಗಿರುವ ಜವಾಬ್ಧಾರಿಯ ಕಡೆ ಬೆಟ್ಟು ಮಾಡಿ ತೋರಿಸಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 17ರಂದು ‘ಮನ್ ಕಿ ಬಾತ್’(ಮನದ ಮಾತು)ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ “ಡಿಜಿಟಲ್ ಬಂಧನ ವಂಚನೆ” (digital arrest frauds) ಕುರಿತು ಕಳವಳ ವ್ಯಕ್ತಪಡಿಸಿದರು. ಯೋಚಿಸಿ
“ಒಂದು ನಿಮಿಷ ನಿಲ್ಲಿ. ಅದರ ಬಗ್ಗೆ ಯೋಚಿಸಿ. ಆ ನಂತರವಷ್ಟೇ ಪ್ರತಿಕ್ರಿಯಿಸಿ. ಇಂದಿನ ಡಿಜಿಟಲ್ ಯುಗದಲ್ಲಿ ನಾವು ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದ್ದೇವೆ. ಅದೇ ಸಮಯದಲ್ಲಿ, ಸೈಬರ್ ಅಪರಾಧಿಗಳ ತಂತ್ರಗಳು ಸಹ ಬದಲಾಗುತ್ತಿವೆ. ಜನರು ದಿನವೂ ಹೊಸ ವಿಧಾನದಿಂದ ವಂಚನೆಗೊಳಗಾಗುತ್ತಿದ್ದಾರೆ.” ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳ ಬಗ್ಗೆ, ಸೈಬರ್ ಅಪರಾಧಗಳ ಗಂಭೀರತೆ ಕುರಿತು ಸ್ವತಃ ಪ್ರಧಾನಿಯೇ ಕಳವಳ ವ್ಯಕ್ತಪಡಿಸಿದ್ದು ಹೀಗೆ. ಇದೇ ಸಂದರ್ಭದಲ್ಲಿ, ಪ್ರಧಾನಿಯಾಗಿ ಇಂತಹ ಅಪರಾಧಗಳನ್ನು ಎದುರಿಸಲು ತಮ್ಮ ಸರ್ಕಾರ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಅವರು ಹೇಳಲಿಲ್ಲ. ಹೀಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಪಾಠ ಮಾಡುವ ಮೂಲಕ ‘ವಂಚಕರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಎಚ್ಚರವಿದ್ದರೆ ಸಾಕು’ ಎಂದು ಪ್ರಧಾನಿ ತೀರ್ಮಾನಿಸಿದಂತಿದೆ. ಯೋಚಿಸಿ
ಡಿಜಿಟಲ್ ಇಂಡಿಯಾದ ಜಪದಿಂದ ಡಿಜಿಟಲ್ ಅರೆಸ್ಟ್ ಗೆ!!
ಇದುವರೆಗೂ ಡಿಜಿಟಲ್ ಇಂಡಿಯಾದ ಜಪ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಈಗ ಡಿಜಿಟಲ್ ವಂಚನೆಗಳ ಬಗ್ಗೆ ಮಾತನಾಡಿರುವುದು ಕೊಂಚ ಅಚ್ಚರಿ ಮೂಡಿಸಿದೆ. ವ್ಯಾಪಕವಾದ ಈ ವಂಚನೆ, ಇಂತಹ ವಂಚನೆಯನ್ನು ಹೇಗೆಲ್ಲಾ ಮಾಡುತ್ತಾರೆ ಎಂಬುದೆಲ್ಲಾ ಪ್ರಧಾನಿಯವರ ಗಮನಕ್ಕೂ ಬಂದಿದೆಯಾದರೂ, ವರ್ಷಗಳು ಕಳೆದರೂ ಇಂತಹ ವಂಚನೆಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ ಎಂದರೆ, ಮೋದಿ ಆಡಳಿತದ ಅಡಿಯಲ್ಲಿ ಸಮಾಜ ಮತ್ತಷ್ಟು ಅಪಾಯವನ್ನು ಎದುರಿಸುತ್ತಿದೆ ಎಂಬುದನ್ನು ಮೋದಿಯವರ ಈ ‘ಮನದ ಮಾತು’ಗಳಿಂದ ಸ್ವಷ್ಟವಾಗುತ್ತದೆ.
ಮೋದಿಯವರು ಈ ಮಾತು ಹೇಳುವಾಗಲೂ, ಇಂತಹ ವಂಚನೆಗಳಿಗೆ ಕಡಿವಾಣ ಹಾಕಲು ತಮ್ಮ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸಲಿಲ್ಲ. ತನಿಖಾ ಸಂಸ್ಥೆಗಳು ರಾಜ್ಯಗಳ ಸಹಕಾರದೊಂದಿಗೆ ಈ ಪಿಡುಗನ್ನು ತೊಡೆದುಹಾಕಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ ಎಂದಷ್ಟೇ ಕಣ್ಣೊರೆಸುವ ಮಾತುಗಳನ್ನಾಡಿದರು.
ಐದು ವರ್ಷಗಳ ಸರಾಸರಿ 5 ಲಕ್ಷಕ್ಕೂ ಹೆಚ್ಚು ಪ್ರಕರಣ
ಇಂದು, ಕ್ಯೂಆರ್ ಸ್ಕ್ಯಾನರ್ ಗಳು ಬಹುತೇಕ ಎಲ್ಲಾ ಮಾರಾಟ ಕೇಂದ್ರಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ಕಂಡುಬರುತ್ತವೆ. ಭಾರತ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಥೈಲ್ಯಾಂಡ್ನ ವೇಗದ ಪಾವತಿ ವ್ಯವಸ್ಥೆಯನ್ನು ಜೋಡಿಸುವ ಪ್ರಸ್ತಾಪವನ್ನು ಆರ್ ಬಿ ಐ ಇತ್ತೀಚೆಗೆ ಪ್ರಕಟಿಸಿದೆ. ಇದೆಲ್ಲವೂ ನಾಣ್ಯದ ಒಂದು ಮುಖ. ಎರಡನೇ ಭಾಗವು ಆತಂಕಕಾರಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಆರ್ ಬಿ ಐ ಲೆಕ್ಕಾಚಾರದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ವರದಿಯಾದ ವಂಚನೆ ಪ್ರಕರಣಗಳ ಸಂಖ್ಯೆ ಸರಾಸರಿ 5 ಲಕ್ಷಕ್ಕೂ ಹೆಚ್ಚು. ಇನ್ನು ದೂರು ಕೊಡದ, ಬೆಳಕಿಗೆ ಬಾರದ ಪ್ರಕರಣಗಳೆಷ್ಟೋ?
ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ಡೇಟಾ ಪ್ರಕಾರ, ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವಂತೆ 2023 ರಲ್ಲಿ 15.56 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ . 2021 ರಲ್ಲಿ 4.52 ಲಕ್ಷ ಇದ್ದ ದೂರುಗಳ ಸಂಖ್ಯೆ 2022 ರಲ್ಲಿ 9.66 ಲಕ್ಷಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಮೊದಲ ಅಧಿವೇಶನ : 370ನೇ ವಿಧಿ ರದ್ದತಿ ವಿರುದ್ಧ ನಿರ್ಣಯ
ಭಾರತೀಯರು ‘ಡಿಜಿಟಲ್ ಬಂಧನ’ ಪ್ರಕರಣದಲ್ಲಿ ರೂ. 120.30 ಕೋಟಿ, ವ್ಯಾಪಾರ ಹಗರಣದಲ್ಲಿ ರೂ. 1,420.48 ಕೋಟಿ, ಹೂಡಿಕೆ ಹಗರಣದಲ್ಲಿ ರೂ. 222.58 ಕೋಟಿ ಮತ್ತು ಪ್ರಣಯ/ಡೇಟಿಂಗ್ ಹಗರಣ (romance/dating scam)ದಲ್ಲಿ ರೂ. 13.23 ಕೋಟಿ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (Indian Cybercrime Coordination Center -I4C) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ ಮೇ ತಿಂಗಳಲ್ಲಿ ಜನವರಿ-ಏಪ್ರಿಲ್ ಡೇಟಾವನ್ನು ಬಿಡುಗಡೆ ಮಾಡುವಾಗ ರಾಜೇಶ್ ಕುಮಾರ್ ಈ ಮಾಹಿತಿ ನೀಡಿದ್ದಾರೆ.
ನಾಲ್ಕು ತಿಂಗಳಲ್ಲಿ 7.4 ಲಕ್ಷ ಪ್ರಕರಣಗಳ ದಾಖಲು
ದೇಶದಲ್ಲಿ ದಿನಕ್ಕೆ ಸರಾಸರಿ 6,000 ಕ್ಕೂ ಹೆಚ್ಚು ಸೈಬರ್ ಅಪರಾಧಗಳ ದೂರುಗಳನ್ನು ಸ್ವೀಕರಿಸುವ I4C ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 7.4 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ಖಚಿತಪಡಿಸುತ್ತದೆ. ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಬಂಧನಗಳು, ಪ್ರಣಯ/ಡೇಟಿಂಗ್, ವ್ಯಾಪಾರ ಮತ್ತು ಹೂಡಿಕೆ ವಂಚನೆಗಳಲ್ಲಿ ಸುಮಾರು 46 ಪ್ರತಿಶತ ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾ ಈ ಮೂರು ದೇಶಗಳ ವಂಚಕರಿಂದ ನಡೆಯುತ್ತಿವೆ ಎಂದು ಕಂಡುಬಂದಿದೆ. ಇದರಲ್ಲಿ ಬಲಿಪಶುಗಳು ಒಟ್ಟು 1,776 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಷೇರು ವಹಿವಾಟಿನಲ್ಲಿ 23 ರಾಜ್ಯಗಳ 168 ಮಂದಿಗೆ 22 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂದಾಯ ಮಾಡಿರುವ ಗಾಜಿಯಾಬಾದ್ ಗ್ಯಾಂಗ್ ನ ಕೈವಾಡ ಇತ್ತೀಚೆಗೆ ಬಯಲಾಗಿದೆ. ಜಾರ್ಖಂಡ್, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಸೈಬರ್ ಗ್ಯಾಂಗ್ ಗಳಿಂದ ಶೇಕಡಾ 80 ರಷ್ಟು ಇಂತಹ ಅಪರಾಧಗಳು ನಡೆಯುತ್ತಿವೆ ಎಂದು ಐಐಟಿ ಕಾನ್ಪುರ ಅಧ್ಯಯನವು ಇತ್ತೀಚೆಗೆ ತೀರ್ಮಾನಿಸಿದೆ. ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ, ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ರಾಜೇಶ್ ಪಂತ್ ಅವರು ಪ್ರತಿ ದಿನ ಸಾವಿರಾರು ದೂರುಗಳನ್ನು ಸ್ವೀಕರಿಸುತ್ತಾರೆ. ಆದರೆ ತನಿಖೆಯ ಪ್ರಮಾಣವು ಕಡಿಮೆಯಾಗಿದೆ. ಇದು ಸೈಬರ್ ಅಪರಾಧಿಗಳ ವಿರುದ್ಧದ ಹೋರಾಟದಲ್ಲಿನ ವ್ಯವಸ್ಥಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಇದನ್ನೂ ನೋಡಿ: ರೈತರ ಬಗ್ಗೆ ನಿರ್ದೇಶಕ ಗುರುಪ್ರಸಾದ ಮಾತುಗಳು Janashakthi Media
ಮುಂದಿನ ವರ್ಷದ ವೇಳೆಗೆ ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 90 ಕೋಟಿ ತಲುಪಲಿದ್ದು, ಮೊಬೈಲ್ ಸಂಪರ್ಕಗಳ ಸಂಖ್ಯೆ ಈಗಾಗಲೇ 116 ಕೋಟಿ ದಾಟಿದೆ. ಬಳಕೆಯ ಸ್ಫೋಟ ತಡೆಯಲು ಸರ್ಕಾರ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಳ್ಳದಿರುವುದರಿಂದ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಈ ಪೈಕಿ ನೆರೆಯ ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದಲ್ಲಿ ಈ ಗ್ಯಾಂಗ್ ಗಳು ಬೆಳೆಯುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯ ಬಹಿರಂಗಪಡಿಸಿದೆ. ಡಿಜಿಟಲ್ ಭದ್ರತಾ ಮೋಸಗಳನ್ನು ತಪ್ಪಿಸಲು ಕನಿಷ್ಠ ಮುನ್ನೆಚ್ಚರಿಕೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಮತ್ತು ಆನ್ಲೈನ್ ವಂಚನೆಯ ಸಂದರ್ಭದಲ್ಲಿ ತಕ್ಷಣ ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ಎಲ್ಲಾ ನಾಗರಿಕರಿಗೆ ತಿಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಸೈಬರ್ ಅಪರಾಧಿಗಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದೆ
ಇಂತಹ ವಂಚನೆ ಕೃತ್ಯಗಳು ಮುಂದುವರೆದಿದ್ದು ಲಕ್ಷಾಂತರ ಜನರು ಹಣ ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಅಪರಾಧಿಗಳು ಎಲ್ಲಿದ್ದರೂ ಜಂಟಿ ಕ್ರಮ ಮತ್ತು ತಾಂತ್ರಿಕ ಕಣ್ಗಾವಲುಗಳೊಂದಿಗೆ ಆನ್ಲೈನ್ ಅಪರಾಧಿಗಳನ್ನು ಹೇಗೆ ಬಲೆಗೆ ಬೀಳಿಸುವುದು ಎಂಬುದರ ಕುರಿತು ಸರ್ಕಾರಗಳು ಗಮನಹರಿಸಬೇಕಿದೆ.
ಇತ್ತೀಚೆಗೆ, 61 ದೇಶಗಳ ಪೊಲೀಸ್ ಪಡೆಗಳು ‘ಆಪರೇಷನ್ ಫಸ್ಟ್ ಲೈಟ್ 2024’ ಹೆಸರಿನಲ್ಲಿ ಏಕಪಕ್ಷೀಯ ದಾಳಿಯಲ್ಲಿ ನಾಲ್ಕು ಸಾವಿರ ವಂಚಕರು ಸಿಕ್ಕಿಬಿದ್ದರು. ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆಯಂತಹ ದೇಶಗಳು ಸೈಬರ್ ಭದ್ರತೆಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿವೆ. ಆಯಾ ದೇಶಗಳ ಅನುಭವಗಳಿಂದ ಸೈಬರ್ ಬೆದರಿಕೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕಾರ್ಯತಂತ್ರಗಳನ್ನು ಚುರುಕುಗೊಳಿಸಬೇಕು. ಸೈಬರ್ ಅಪರಾಧಿಗಳಿಗೆ ಕಡಿವಾಣ ಹಾಕಲು ಸರ್ಕಾರಗಳು ಒಗ್ಗೂಡಿದರೆ ಮಾತ್ರ ದೇಶದಲ್ಲಿ ಡಿಜಿಟಲ್ ಪಾವತಿ ಸುರಕ್ಷಿತವಾಗಿರುತ್ತದೆ. ಆದರೆ, ‘ನಿಲ್ಲಿ… ಯೋಚಿಸಿ… ನಂತರ ನಿರ್ಧರಿಸಿ..’ ಎಂಬ ಪ್ರಧಾನಿಯವರ ಮಂತ್ರಗಳಿಂದ ಸೈಬರ್ ವಂಚನೆಗಳಿಂದ ಮುಕ್ತರಾಗಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಉತ್ತರಾಖಂಡ | ಭೀಕರ ಅಪಘಾತ : ಬಸ್ ಕಂದಕಕ್ಕೆ ಬಿದ್ದು 22 ಮಂದಿ ಪ್ರಯಾಣಿಕರು ಸಾವು