ಸಂಸದರಿಗೆ ಅನುಮತಿ ನಿರಾಕರಣೆ ಸಂಸದರ ಹಕ್ಕುಗಳ ಉಲ್ಲಂಘನೆ – ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ನವದೆಹಲಿ: ವೆನೆಜುವೆಲಾದ ಕ್ಯಾರಕಾಸ್‌ನಲ್ಲಿ ನಡೆಯುತ್ತಿರುವ “ಫ್ಯಾಸಿಸಂ ವಿರುದ್ಧ ಸಂಸದರ ವೇದಿಕೆʼ’ (Parliamentarian’s Forum Against Fascism)ಯಲ್ಲಿ ಪಾಲ್ಗೊಳ್ಳಲು ಸಂಸತ್ ಸದಸ್ಯ (ರಾಜ್ಯಸಭೆ) ಡಾ ವಿ ಶಿವದಾಸನ್ ಗೆ ರಾಜಕೀಯ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಖಂಡಿಸಿದೆ.

ಇದು ಆಳುವ ಪಕ್ಷದ ಅಭಿಪ್ರಾಯಗಳಿಗೆ ಹೊಂದಿಕೆಯಾಗದ ಯಾವುದೇ ದನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಅದು ಹೇಳಿದೆ. ವೆನೆಜುವೆಲಾದ ನ್ಯಾಷನಲ್ ಅಸೆಂಬ್ಲಿ ತಾನು ಸಂಘಟಿಸುತ್ತಿರುವ ಈ ಸಂಸದರ ವೇದಿಕೆಯಲ್ಲಿ ಭಾಗವಹಿಸಲು ಸಿಪಿಐ(ಎಂ) ತನ್ನ ಸಂಸತ್ ಸದಸ್ಯರನ್ನು ನಾಮನಿರ್ದೇಶನ ಮಾಡಲು ಆಹ್ವಾನವನ್ನು ಪಡೆದಿದೆ. ಪಕ್ಷವು ಡಾ ವಿ ಶಿವದಾಸನ್‍ ರನ್ನು ತನ್ನ ಪ್ರತಿನಿಧಿಯಾಗಿ ಈ ವೇದಿಕೆಯಲ್ಲಿ ಭಾಗವಹಿಸಲು ನಾಮನಿರ್ದೇಶನ ಮಾಡಿದೆ. ಅಲ್ಲಿ ಅನೇಕ ದೇಶಗಳ ಸಂಸದರು ಉಪಸ್ಥಿತರಿರುತ್ತಾರೆ.

ಇದನ್ನೂ ಓದಿ: ಇದು ಬಡತನದ ಅಳತೆಯೋ ಅಥವ ನವ-ಉದಾರವಾದವನ್ನು ‘ಚಂದಗೊಳಿಸುವ’ ಕೆಲಸವೋ?

ಇದಕ್ಕೆ ಎಫ್‌ಸಿಆರ್‌ಎ ಅನುಮತಿಯನ್ನು ಪಡೆದರೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶಿವದಾಸನ್‌ಗೆ ರಾಜಕೀಯ ಅನುಮತಿ ನಿರಾಕರಿಸಿದ್ದು, ಸಂಸತ್‍ ಸದಸ್ಯರಾಗಿ ಅವರ ಹಕ್ಕುಗಳನ್ನು ಉಲ್ಲಂಘಿಸಿರುವುದು ಅತ್ಯಂತ ಖಂಡನೀಯ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಸರ್ಕಾರವು ರಾಜಕೀಯ ತಾರತಮ್ಯದ ನೀತಿಯನ್ನು ಅನುಸರಿಸುತ್ತಿದೆ, ಭಿನ್ನ ದನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ತಡೆಯುತ್ತಿದೆ ಎನ್ನುತ್ತ, ಇದು ಎಲ್ಲಾ ವಿರೋಧ ಪಕ್ಷಗಳು ಮತ್ತು ಅವುಗಳ ಸಂಸತ್ ಸದಸ್ಯರಿಗೆ ಆತಂಕದ ವಿಷಯವಾಗಿದೆ ಎಂದು ಹೇಳಿದೆ.

 

ಇದನ್ನೂ ನೋಡಿ: ಕರ್ನಾಟಕ ರಾಜ್ಯೋತ್ಸವ| ಕನ್ನಡ ಭಾಷೆಗೆ ಒದಗಿರುವ ಸಮಸ್ಯೆ ಸವಾಲುಗಳು- ಚಿಂತಕ ಪಾರ್ವತೀಶ ಬಿಳಿದಾಳೆ ಮಾತುಗಳು

Donate Janashakthi Media

Leave a Reply

Your email address will not be published. Required fields are marked *