ಗುರುರಾಜ್ ದೇಸಾಯಿ, ಎಸ್.ಎಫ್.ಐ ರಾಜ್ಯ ಕಾರ್ಯದಶರ್ಿ
ಶಿಕ್ಷಣ ಹಕ್ಕು ಕಾಯ್ದೆ- ಸಂಕ್ಷಿಪ್ತ ರೂಪ `ಆರ್.ಟಿ.ಇ.’ ಎಂದು. ಈ ಕಾಯ್ದೆಯ ಘೋಷಿತ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿ ಯಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆಥರ್ಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ ನೀಡಬೇಕಿದೆ. ಆದರೆ ಕನರ್ಾಟಕ ರಾಜ್ಯದಲ್ಲಿ ಈ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಯೋಜಿತ ಕುತಂತ್ರ, ಸಕರ್ಾರದ ನಿರ್ಲಕ್ಷ್ಯ ನಿರಾಸಕ್ತಿಯಿಂದಾಗಿ ಸಾವಿರಾರು ವಿದ್ಯಾಥರ್ಿಗಳು ಕಾಯ್ದೆಯಿಂದ ವಂಚಿತರಾಗುತ್ತಿದ್ದಾರೆ.
2002ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 21-ಎ ಅನುಚ್ಛೇಧವನ್ನು ಸೇರಿಸಲಾಯಿತು. ಅದರ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವುದು 6ರಿಂದ14 ವರ್ಷದ ಪ್ರತಿ ಮಗುವಿನ ಹಕ್ಕಾಗಿದೆ. ಸಂವಿಧಾನದಲ್ಲಿ ನೀಡಿರುವ ಶಿಕ್ಷಣದ ಹಕ್ಕನ್ನು ಅನುಷ್ಟಾನ ಗೊಳಿಸುವಂತೆ ಎಸ್ಎಫ್ಐ ಮತ್ತು ಪ್ರಗತಿಪರ ಸಂಘಟನೆಗಳು, ಶಿಕ್ಷಣ ತಜ್ಞರ ಒತ್ತಡದ ಮೇರೆಗೆ 2009 ರಲ್ಲಿ ‘ಶಿಕ್ಷಣ ಹಕ್ಕು’ ಕಾಯ್ದೆಯನ್ನು ತರಲಾಯಿತು. 2010 ರಲ್ಲಿ ಕಾಯ್ದೆ ಅಸ್ತಿತ್ವಕ್ಕೆ ಬಂತು. ಶಿಕ್ಷಣ ಹಕ್ಕು ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸವರ್ೋಚ್ಚ ನ್ಯಾಯಾಲಯದ ಮೆಟ್ಟಿಲೇರಿದವು. ಸವರ್ೋಚ್ಚ ನ್ಯಾಯಾಲಯವು ಕಾಯ್ದೆಯ ಪ್ರಕಾರ ಈ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 25 ಮೀಸಲು ವಿದ್ಯಾಥರ್ಿಗಳಿಗೆ ಶಿಕ್ಷಣ ಉಚಿತ ಇರಬೇಕೆಂದು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿ ಉಳಿದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ತೀಪರ್ು ನೀಡಿತು.
ಖಾಸಗಿ ಶಾಲೆಗಳ ಯೋಜಿತ ಕುತಂತ್ರ: ಸವರ್ೋಚ್ಛ ನ್ಯಾಯಾಲಯ ತೀಪರ್ು ನೀಡಿದ ಮೇಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯ ಜಾರಿಗೆ ಅಡ್ಡಿ ಮಾಡುತ್ತಿವೆ. ಮತ್ತು ಕಾಯ್ದೆಯ ಜಾರಿಯಿಂದ ತಪ್ಪಿಸಿಕೊಳ್ಳುವುದು ಹೇಗೆಂದು ದಾರಿಯನ್ನು ಹುಡುಕುತ್ತಿವೆ. ಜಾರಿಮಾಡಲಾಗುತ್ತಿರುವ ಕಡೆ ಕೇಂದ್ರ ಸರಕಾರಕ್ಕೆ ಅಂಕಿ-ಅಂಶ ನೀಡಬೇಕೆನ್ನುವ ತೋರಿಕೆಯ ಆಟಕ್ಕೆ-ಕಾಟಾಚಾರದ ಜಾರಿಗೆ ಮುಂದಾಗಿವೆ. ಕಾಯ್ದೆಯ ಜಾರಿಗಾಗಿ ವ್ಯಾಪಕ ಪ್ರಚಾರ ಮಾಡಬೇಕು. ಲಭ್ಯ ಸೀಟುಗಳನ್ನು ಪ್ರಕಟಿಸಬೇಕು ಎಂದು ಕಾಯ್ದೆ ಹೇಳಿರುವಾಗಲೂ ಕೂಡ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾಥರ್ಿಗಳ ಪ್ರವೇಶಕ್ಕೆ ನಿರಾಕರಿಸಿವೆ. 2014-15ನೇ ಸಾಲಿಗೆ ಆರ್.ಟಿ.ಇ. ಕಾಯ್ದೆ ಅನ್ವಯ 1,08,000 ಸೀಟುಗಳು ಲಭ್ಯ ಇವೆ. ಅದಕ್ಕಾಗಿ 1,59,000 ಅಜರ್ಿಗಳು ಶಿಕ್ಷಣ ಇಲಾಖೆಗೆ ಬಂದಿವೆ. ಬೆಂಗಳೂರು ನಗರದಲ್ಲಿಯೇ 79,000 ಅಜರ್ಿಗಳು ಬಂದಿವೆ. ಇನ್ನೂ 1,349 ಖಾಸಗಿ ಶಿಕ್ಷಣ ಸಂಸ್ಥೆಗಳು ‘ನೆರೆಹೊರೆ’ ಹೆಸರಲ್ಲಿ ಕಡಿಮೆ ಪ್ರಮಾಣದ ಅಜರ್ಿಗಳನ್ನು ಪಡೆದಿವೆ. ಇದರಿಂದಾಗಿ ಅಂದಾಜು 40,000 ಸೀಟುಗಳು ಖಾಲಿ ಉಳಿಯುವ ಸಾಧ್ಯತೆಗಳಿವೆ. ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅಜರ್ಿಗಳು ಬಂದಿರುವುದನ್ನು ನೋಡಿದರೆ, ಖಾಸಗಿ ಶಾಲೆಗಳು ಕಾಯ್ದೆಯನ್ನು ಜಾರಿ ಗೊಳ್ಳದಂತೆ ನಿರ್ಲಕ್ಷತೆಯನ್ನು ತೋರಿಸುತ್ತಿರುವುದು ತಂತ್ರಗಾರಿಕೆ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಅನೇಕ ಕುಂಟು ನೆಪಗಳ ಮೂಲಕ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿದೆ.
ಹಲವಾರು ಅಲ್ಪಸಂಖ್ಯಾತ ಶಾಲೆಗಳು ವ್ಯಾಪಕವಾಗಿ ಹಣ ಮಾಡುವ ದಂಧೆಯಲ್ಲಿ ನಿರತವಾಗಿವೆ. ಈ ಕಾಯ್ದೆಯಲ್ಲಿ ಅವುಗಳನ್ನು ಹೊರಗಿಟ್ಟಿರುವುದು ಸರಿಯಲ್ಲ. (ಸೇರ್ಪಡೆ- ಆರ್. ರಾಮಕೃಷ್ಣ- ಕನಿಷ್ಟ ಆಯಾ ಅಲ್ಪಸಂಖ್ಯಾತ ವಿಭಾಗದ ಬಡ ಮಕ್ಕಳಿಗಾದರೂ ಈ ಮೀಸಲು ಕೊಡಬೇಕೆಂದು ಕೇಳಬೇಕಾಗಿದೆ.)ಇದನ್ನೇ ನೆಪವಾಗಿಸಿಕೊಂಡು ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದೊಟ್ಟಿಗೆ ಜಂಗಿ ಕುಸ್ತಿಗಿಳಿದ ಪರಿಣಾಮ ಪಾಲಕರು ಅಜರ್ಿ ಎಲ್ಲಿ ಹಾಕುವುದು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ರಾಜ್ಯದಲ್ಲಿರುವ ಅಲ್ಪ ಸಂಖ್ಯಾತ ಶಾಲೆಗಳೇನು ಉಚಿತವಾಗಿ ಶಿಕ್ಷಣ ನೀಡುತ್ತಿಲ್ಲ. ಹಾಗಾಗಿ ಈ ಕಾಯ್ದೆಯ ವ್ಯಾಪ್ತಿಗೆ ಅವುಗಳನ್ನು ತರುವ ತಿದ್ದುಪಡಿ ಆಗತ್ಯವಾಗಿ ಆಗಬೇಕಿದೆ.
ಖಾಸಗಿ ಶಾಲೆಗಳ ‘ಹಿಡಿತದಲ್ಲಿ ಸರಕಾರ:
ಕಾಯ್ದೆಯನ್ನು ರಾಜ್ಯದಲ್ಲಿ ವ್ಯಾಪಕವಾಗಿ ಜಾರಿಗೊಳಿಸಬೇಕಾಗಿರುವುದು ಸರಕಾರದ ಕರ್ತವ್ಯ. ಆದರೆ ಸರಕಾರ ಖಾಸಗಿ ಶಾಲೆಗಳಿಗೆ ಶರಣಾಗಿ ಅವರ ಹಿಡಿತದಲ್ಲಿ ಅವರು ಹೇಳಿದಂತೆ ಕುಣಿಯುತ್ತಿದೆ. ಅದಕ್ಕಾಗಿಯೇ ಖಾಸಗಿ ಶಾಲೆಗಳು ಶುಲ್ಕವನ್ನು ಎರಡು ಪಟ್ಟು ಹೆಚ್ಚಿಸಲು ಅಂದರೆ ದ್ವಿಗುಣಗೊಳಿಸಲು ಪಟ್ಟು ಹಿಡಿದು ಕುಳಿತಿದ್ದವು. ಖಾಸಗಿ ಶಾಲೆಗಳನ್ನು ನಿಯಂತ್ರಿಸಬೇಕಾದ ಸರಕಾರ ಖಾಸಗಿ ಶಾಲೆಗಳ ನಿಯಂತ್ರಣದಲ್ಲಿರುವುದು ನಾಚಿಕೆಗೇಡಿನ ಸಂಗತಿ. ಸರಕಾರದ ಕುಮ್ಮಕ್ಕಿನಿಂದಾಗಿ ಕಾಯ್ದೆಯನ್ನು ತಮಗಿಚ್ಛೆ ಬಂದಂತೆ ಉಲ್ಲಂಘನೆ ಮಾಡಲಾಗುತ್ತಿದೆ. ಸ್ಥಳೀಯ ಆಡಳಿತವು 6-14 ವರ್ಷದ ಮಕ್ಕಳ ವಿವರಗಳನ್ನು ಗೃಹ ಸಮೀಕ್ಷೆಯ ಮೂಲಕ ಪತ್ತೆ ಹಚ್ಚಿ, ಪರಿಷ್ಕರಿಸಿ ಅವರನ್ನು ಈ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲು ಅವಕಾಶವಿದೆ. ಆದರೆ ಸ್ಥಳೀಯ ಆಡಳಿತ ಇಲ್ಲಿಯವರೆಗೆ ಈ ರೀತಿಯ ಪ್ರಯತ್ನಕ್ಕೆ ಮುಂದಾಗಿಲ್ಲ. ಇದನ್ನು ಜಾರಿ ಮಾಡಿಸಲು ಸರಕಾರ ಇಚ್ಚಾ ಶಕ್ತಿ ತೋರುತ್ತಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ 2012-13 ನೇ ಸಾಲಿನಲ್ಲಿ 1,75,000 ವಿದ್ಯಾಥರ್ಿಗಳು ಶಾಲೆಯಿಂದ ಹೊರಗುಳಿದ್ದಿದ್ದಾರೆ ಎಂಬ ಅಂಶವನ್ನು ಸಮೀಕ್ಷೆಯೊಂದು ಹೊರ ಹಾಕಿದೆ. ಇದು ತುಂಬ ಆತಂಕಕಾರಿ ವಿಷಯ. (ಸೇರ್ಪಡೆ- ಆರ್. ರಾಮಕೃಷ್ಣ. -ಶಾಲೆಯ ಹೊರಗಿರುವ ಮಕ್ಕಳ ಸಂಖ್ಯೆ ವಾಸ್ತವವಾಗಿ ಇನ್ನೂ ಹೆಚ್ಚಿರಬಹುದು.) ಕಾಯ್ದೆಗೆ ವ್ಯಾಪ್ತಿಗೆ ಅಂದರೆ ಶಾಲೆಗೆ ಕರೆ ತರುವ ಪ್ರಯತ್ನ ನಡೆಯುತಿಲ್ಲವೆಂಬುದು 2014-15ನೇ ಸಾಲಿಗೆ ಬಂದ ಅಜರ್ಿಗಳಿಂದ ಪತ್ತೆ ಹಚ್ಚಬಹುದಾಗಿದೆ. ಸರಕಾರವು ಕಾಯ್ದೆಯನ್ನು ಜಾರಿಗೊಳಿಸಲು ಸ್ಥಳೀಯ ಆಡಳಿತಕ್ಕೆ ತರಬೇತಿಯನ್ನು ನೀಡಿದೆ ಎಂದು ಹೇಳಲಾಗುತ್ತದೆ. ಆದರೆ ವ್ಯಾಪಕ ಪ್ರಚಾರ ಮತ್ತು ಪಾಲಕರಲ್ಲಿ ಜಾಗೃತಿಯನ್ನು ಮೂಡಿಸದ ಕಾರಣ ಕಾಯ್ದೆಯು ಕನರ್ಾಟಕದಲ್ಲಿ ಹಳ್ಳ ಹಿಡಿದಿದೆ. ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಖಾಸಗಿ ಶಾಲೆಗಳಿಗೆ ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕಿದೆ. ಬಡವ-ಬಲ್ಲಿದ ಎಂಬ ಭೇಧಭಾವವಿಲ್ಲದೆ ಸಮಾನತೆಯಿಂದ ಕಲಿಯಲು ಅವಕಾಶ ಮಾಡಿಕೊಡುವ ಶಿಕ್ಷಣ ಹಕ್ಕು ಕಾಯ್ದೆಯ ಜಾರಿಗೆ ಸಕರ್ಾರ ವ್ಯಾಪಕ ಪ್ರಯತ್ನಕ್ಕಿಳಿಯಬೇಕಿದೆ. ಇಲ್ಲದೆ ಹೋದರೆ ಅದು ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂದು ಸರಕಾರ ಗಮನಿಸಬೇಕಾಕಿದೆ.
ಕಾಯ್ದೆ ಉಲ್ಲಂಘನೆ ಮತ್ತು `ವ್ಯಾಪಕ ವಸೂಲಿ’:
ಕಾಯ್ದೆಯನ್ನು ಜಾರಿಗೊಳಿಸುವಾಗ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿವೆ. ಸಮವಸ್ತ್ರ, ಪಠ್ಯಪುಸ್ತಕ, ಕ್ರೀಡೆ, ವಾಹನ ಶುಲ್ಕ, ಗ್ರಂಥಾಲಯ ಇತ್ಯಾದಿ ಹೆಸರಲ್ಲಿ ವ್ಯಾಪಕವಾಗಿ ವಂತಿಗೆ ಪಡೆಯಲಾಗುತ್ತಿದೆ. ಸೆಕ್ಷನ್ 7(2) ರ ಪ್ರಕಾರ ಶಾಲೆಗಳಲ್ಲಿ ಏನೆಲ್ಲಾ ಸೌಲಭ್ಯ ನೀಡಲಾಗುತ್ತದೆಯೋ ಅದೆಲ್ಲವನ್ನು ಆರ್.ಟಿ.ಇ. ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಉಚಿತವಾಗಿ ಕೊಡಬೇಕು ಎಂದು ಹೇಳುತ್ತದೆ. ಅವಕಾಶ ವಂಚಿತ ಮತ್ತು ಮೀಸಲಾತಿ ಕೋಟಾದಲ್ಲಿ ದಾಖಲಾದ ಮಕ್ಕಳಿಂದ ಯಾವುದೇ ರೀತಿಯ ಶುಲ್ಕ ಪಡೆಯಬಾರದು ಎಂದು ಸೆಕ್ಷನ್ 8(1) ಹೇಳುತ್ತದೆ. ಆದರೆ ಅನೇಕ ಖಾಸಗಿ ಶಾಲೆಗಳು ಮನಸೋ ಇಚ್ಛೆ ಶುಲ್ಕವನ್ನು ಪಡೆಯುತ್ತಿದ್ದಾರೆ.
ಸೆಕ್ಷನ್ 12(2) ಎ ಪ್ರಕಾರ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಾಗ ಮಕ್ಕಳಿಂದ ಪೋಷಕರಿಂದ ಯಾವುದೇ ರೀತಿಯ ದೇಣಿಗೆ ಪಡೆಯಬಾರದು. ಅದರೆ ‘ಬಿಲ್ಡಿಂಗ್ ಫಂಡ್ ಹೆಸರಲ್ಲಿ ಸಾವಿರಾರು ರೂ.ಗಳನ್ನು ಖಾಸಗಿ ಶಾಲೆಗಳು ವಂತಿಗೆ ಪಡೆಯುತ್ತಿವೆ. ಸೆಕ್ಷನ್ 12(2) ಬಿ. ಪ್ರಕಾರ ಆಯ್ಕೆ ಪರೀಕ್ಷೆ ನಡೆಸಬಾರದು ಎಂದಿದೆ. ಆದರೆ ಬೆಂಗಳೂರು, ರಾಯಚೂರು, ಕೊಪ್ಪಳ ಸೇರಿದಂತೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಮತ್ತು ಮಗುವಿಗೆ ಪರೀಕ್ಷೆಗಳನ್ನು ನಡೆಸಿದ್ದಾರೆ. ವಯಸ್ಸಿನ ದಾಖಲೆ ಇಲ್ಲದ ಕಾರಣ ಮುಂತಾದ ಯಾವುದೇ ಕಾರಣಕ್ಕೂ ಮಗುವಿಗೆ ಶಾಲಾ ಪ್ರವೇಶವನ್ನು ನಿರಾಕರಿಸುವಂತಿಲ್ಲ. ಆದರೆ ಮಂಡ್ಯ, ಕೋಲಾರ, ತುಮಕೂರು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಯಸ್ಸಿನ ನೆಪ ಹೇಳಿ ಅಜರ್ಿಯನ್ನು ತಿರಸ್ಕರಿಸಲಾಗಿದೆ. ದಾಖಲಾತಿಗೆ ನಿಗದಿ ಪಡಿಸಿದ ಅವಧಿ ಮುಗಿದ ನಂತರವೂ ಯಾವುದೇ ಮಗುವಿಗೆ ದಾಖಲಾತಿಯನ್ನು ನಿರಾಕರಿಸುವಂತಿಲ್ಲ. ಎಂದು ಸೆಕ್ಷನ್ 15(10) ಹೇಳುತ್ತದೆ. ಆದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅವಧಿ ಮುಗಿದಿದೆ ಎಂದು ಪ್ರವೇಶ ನಿರಾಕರಿಸಲಾಗಿದೆ.
ಕಾಯ್ದೆಯನ್ನು ಯೋಜನಾ ಬದ್ದವಾಗಿ ಜಾರಿ ಮಾಡಬೇಕಿರುವುದು ಸರಕಾರದ ಕೆಲಸ. ಕಾಯ್ದೆಗಳನ್ನು ಉಲ್ಲಂಘನೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸರಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಕೂಡಲೇ ನಿಯಮ ಉಲ್ಲಂಘಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಸರಕಾರ ಮುಂದಾಗಬೇಕಿದೆ. ಕಾಯ್ದೆಯಲ್ಲಿರುವ ಹಲವಾರು ನ್ಯೂನ್ಯತೆಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಸರಿಯಾಗಿ ಜಾರಿಗೆ ಬಂದರೆ ದುರ್ಬಲ ವರ್ಗದ ವಿದ್ಯಾಥರ್ಿಗಳ ಆಶಾ ಕಿರಣವಾಗಬಹುದಾದ `ಶಿಕ್ಷಣ ಹಕ್ಕು ಕಾಯ್ದೆ’ಯ ಸಮರ್ಪಕ ಜಾರಿಗಾಗಿ ಎಸ್ಎಫ್ಐ ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿದೆ. ಪ್ರಗತಿಪರರು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಶಿಕ್ಷಕ-ಪಾಲಕ ಸಮುದಾಯ ಬೆಂಬಲಕ್ಕೆ ನಿಲ್ಲಬೇಕಿದೆ. ಕಾಯ್ದೆಯ ಜಾರಿಗಾಗಿ ಪ್ರಬಲ ಹೋರಾಟ ರೂಪಗೊಳ್ಳಬೇಕಿರುವುದು ಅಗತ್ಯವಿದೆ.
ಆರ್. ರಾಮಕೃಷ್ಣ ಸೇರ್ಪಡೆ ಮಾಡಿದ ಭಾಗ
ಇತ್ತೀಚೆಗೆ ಅವಕಾಶ ವಂಚಿತ ಬಡ ವಿಭಾಗದ ವಿದ್ಯಾಥರ್ಿಗಳಿಗೆ ಪ್ರವೇಶ ನೀಡುವ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘಟನೆ `ಕುಸುಮ’ವು ಸಕರ್ಾರಕ್ಕೆ ನೇರವಾಗಿ ಸವಾಲು ಹಾಕುವಂತಹ ಮಾತುಗಳನ್ನಾಡಿದರೂ ರಾಜ್ಯ ಕಾಂಗ್ರೆಸ್ ಸಕರ್ಾರ ಖಾಸಗಿ ಆಡಳಿತ ಮಂಡಳಿಗಳ ವಿರುದ್ದ ಬಿಗಿನಿಲುವು ಪ್ರದಶರ್ಿಸಲಿಲ್ಲ. ಈ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮತ್ತು ಸಾಮಾಜಿಕವಾಗಿ ಅವಕಾಶ ವಂಚಿತರಾದ ವಿದ್ಯಾಥರ್ಿಗಳಿಗೆ ಶೇ. 25ರಷ್ಟು ಮೀಸಲು ನೀಡುವುದಕ್ಕೆ ನ್ಯಾಯಾಲಯದಿಂದ ತಡೆ ತರಲಾಗಿದೆ ಎಂಬ ಸುದ್ದಿ ಹಬ್ಬಿಸಿ ಅದರ ನೆರವಿನಿಂದ ಪ್ರವೇಶ ನಿರಾಕರಿಸಿದ ವರದಿಗಳು ಸಹ ಕೇಳಿಬಂದವು.
ಇದಲ್ಲದೇ ಮತ್ತೊಂದು ಆತಂಕಕಾರಿ ವಿದ್ಯಮಾನವು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾಷಾ ಮತ್ತು ಧಾಮರ್ಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಮೀಸಲಾತಿ ಬದ್ದತೆಯಿಂದ ವಿನಾಯಿತಿ ಇರುವುದರಿಂದ ಹಲವಾರು ಸಾಮಾನ್ಯ ಆಡಳಿತ ಮಂಡಳಿಗಳೂ ಕೂಡ ತಮ್ಮ ಮಂಡಳಿಯಲ್ಲಿ ಕ್ರಮೇಣ ಭಾಷಾ ಮತ್ತು ಧಾಮರ್ಿಕ ಅಲ್ಪಸಂಖ್ಯಾತ ಸದಸ್ಯರ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡು ಅದನ್ನು ಒಂದು `ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ’ಯನ್ನಾಗಿ ಪರಿವತರ್ಿಸುವ ಕೆಲಸದಲ್ಲಿ ತೊಡಗಿವೆ ಎಂದು ವರದಿಯಾಗಿದೆ. ಇದು ಸಾಮಾಜಿಕ ನ್ಯಾಯವನ್ನು ವಂಚಿಸುವ ಒಂದು ವ್ಯವಸ್ಥಿತ ಸಂಚು ಎಂಬಂತೆ ಕಾಣುತ್ತಿದೆ. ಇಂತಹ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಅದಕ್ಕೆ ತಡೆ ಹಾಕಬೇಕಾದ ಅಗತ್ಯತೆ ಇದೆ. ಈ ಕಾಯ್ದೆಯನ್ನು ಜಾರಿಗೆ ತಂದ ಸಕರ್ಾರಕ್ಕೆ ಇದು ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ , ಅರಣ್ಯ ಹಕ್ಕು ಕಾಯ್ದೆಗಳಂತೆ ಕೇವಲ ತನ್ನ ಸಾಧನೆಗಳ ಪಟ್ಟಿಯಲ್ಲಿ ಹಾಕಿಕೊಳ್ಳಲು ಇರುವ ಒಂದು ಕಾಯ್ದೆಯ ಹೆಸರು ಅಷ್ಟೆ. ಅಥವಾ ಮತಗಳಿಕೆಯ ಸಲುವಾಗಿ ಅರೆಬರೆ ಜಾರಿ ಮಾಡಿ ಜನರನ್ನು ವಂಚಿಸುವ ಒಂದು ಹುನ್ನಾರ ಎನ್ನಬಹುದು.
ಮೂಲಭೂತ ಪ್ರಶ್ನೆ
ಶಿಕ್ಷಣ ಒಂದು ಮೂಲಭೂತ ಹಕ್ಕಾಗಬೇಕು ಎಂದು ಎಸ್ಎಫ್ಐ ಸೇರಿದಂತೆ ಶಿಕ್ಷಣ ಪ್ರೇಮಿಶಕ್ತಿಗಳು ಬಹುಕಾಲದಿಂದ ಎತ್ತುತ್ತಾ ಬಂದಿದ್ದ ಬೇಡಿಕೆ. ಈ ಬೇಡಿಕೆ ಈಡೇರಿಸುವಂತಹ
ಕಾಯ್ದೆ ಬಂದರೆ ಎಲ್ಲರೂ ಸಂತೋಷ ಪಡಬೇಕಾದದ್ದೆ. ಈ `ಆರ್ಟಿಇ’ ಕಾಯ್ದೆಯನ್ನು ಸ್ವಾಗತಿಸುತ್ತಲೇ ಅದರ ಗಂಭೀರ ಜಾರಿಗೆ ಒತ್ತಾಯಿಸುತ್ತಲೇ ಶಿಕ್ಷಣ ಪ್ರೇಮಿಗಳು ಮತ್ತೊಂದು ಪ್ರಶ್ನೆ ಎತ್ತಬೇಕಿದೆ.
ಸಕರ್ಾರ ತನ್ನ ಸಕರ್ಾರಿ ಶಾಲೆ-ಕಾಲೇಜು- ಶಿಕ್ಷಣ ಸಂಸ್ಥೆಗಳನ್ನು- ನುರಿತ ಶಿಕ್ಷಕರು, ಸೂಕ್ತ ಸಿಬ್ಬಂದಿ ಸೇರಿದಂತೆ ಕಟ್ಟಡ, ಗ್ರಂಥಾಲಯ, ಪ್ರಯೋಗಶಾಲೆ, ಆಟದ ಮೈದಾನ, ಎಲ್ಲ ಅಗತ್ಯ ಮೂಲಭೂತ ಸೌಲಭ್ಯ-ಸಲಕರಣೆಗಳನ್ನು ಒದಗಿಸಿ ಸಜ್ಜುಗೊಳಿಸಿ ಆ ಮೂಲಕ ಸಕರ್ಾರಿ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾಥರ್ಿಗಳನ್ನು ಸೆಳೆಯಬೇಕು. ಸಕರ್ಾರಿ ಶಾಲಾ ಕಾಲೇಜುಗಳೇ ಖಾಸಗೀ ಕಾಲೇಜುಗಳಿಗಿಂತ ಆಕರ್ಷಕವಾಗಿ ಇರುವಂತೆ ಸಕರ್ಾರ ತನ್ನ ಶೈಕ್ಷಣಿಕ ಕ್ಷೇತ್ರದ ಕರ್ತವ್ಯ ನಿರ್ವಹಿಸಬೇಕು. ಅಂದರೆ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಹಣ ನೀಡಬೇಕು. ಶಿಕ್ಷಣ ಕ್ಷೇತ್ರವನ್ನು ಆಧುನಿಕಗೊಳಿಸಬೇಕು. ಕೇಂದ್ರ ಸಕರ್ಾರ ತನ್ನ ಬಜೆಟ್ ಶೇ. 10 ರಾಜ್ಯ ಸಕರ್ಾರಗಳು ಶೇ. 30 ರಷ್ಟು ನೀಡಿದರೆ ಕೊಠಾರಿ ಆಯೋಗದ ಶಿಫಾರಸ್ಸಿನಂತೆ ದೇಶದ ಒಟ್ಟು ಉತ್ಪನ್ನ(ಜಿಡಿಪಿ)ದ ಶೇ.6 ರಷ್ಟನ್ನು ಶಿಕ್ಷಣಕ್ಕೆ ಕೊಡುವ ದಿಕ್ಕಿನತ್ತ ನಡೆದಂತಾಗುತ್ತದೆ. ನಮ್ಮ ಕೇಂದ್ರ ಸಕರ್ಾರವಾಗಲೀ ರಾಜ್ಯ ಸಕರ್ಾರವಾಗಲೀ ಈ ಬದ್ದತೆ ತೋರಲು ತಯಾರಿಲ್ಲ.
ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವಿದೆ. ಇದರಲ್ಲಿ ಸಾರ್ವಜನಿಕರ ದುಡ್ಡು ಸಕರ್ಾರದ ಖಜಾನೆಯಿಂದ ಖಾಸಗಿ ಆಡಳಿತ ಮಂಡಳಿಗಳ ಬಾಯಿಗೆ ಹಾಕಲಾಗುತ್ತದೆ. ನಮ್ಮ ರಾಜ್ಯದಲ್ಲಿ ಅದು ಒಬ್ಬ ವಿದ್ಯಾಥರ್ಿಗೆ ವರ್ಷಕ್ಕೆ ಸು. ಹನ್ನೊಂದು ಸಾವಿರಕ್ಕಿಂತಲೂ ಹೆಚ್ಚಿದೆ.
ಅಂದರೆ ಶಿಕ್ಷಣದ ಹಕ್ಕಿನ ಬಗೆಗೆ ಮಾತನಾಡುತ್ತ ಸಕರ್ಾರ ತನ್ನ ಖಜಾನೆಯಿಂದ ಖಾಸಗಿಯವರ ಬಾಯಿಗೆ ಹಣವನ್ನು ಸುರಿಯುತ್ತಿದೆ. ಸಕರ್ಾರವೇ ಯಾಕೆ ಎಲ್ಲರಿಗೂ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸೌಲಭ್ಯ ಸಿಗುವಂತೆ ಪ್ರಯತ್ನಿಸಬಾರದು ಎಂಬ ಪ್ರಶ್ನೆಯನ್ನು ಕೂಡ ಶಿಕ್ಷಣ ಪ್ರೇಮಿಗಳು ಕೇಳಬೇಕಿದೆ.
ಶೇ. 25 ಮೀಸಲು ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಅವಕಾಶವಂಚಿತ-ಬಡ ಮಕ್ಕಳನ್ನು ಶಾಲೆಗೆ ಸೇರಿಸಿರುವ ಕಡೆ ಅಂತಹ ಮಕ್ಕಳನ್ನು ಕೀಳಾಗಿ ಕಾಣುವುದು, ಅವರನ್ನು ನಿಂದಿಸುವುದು, ಪ್ರತ್ಯೇಕಗೊಳಿಸುವುದು ಮುಂತಾಗಿ ನಾನಾ ರೀತಿಯ ತಾರತಮ್ಯ ತೋರುತ್ತಿರುವ ಬಗೆಗೆ ವರದಿಗಳಿವೆ.
ಬೆಳೆಯುವ ವಯಸ್ಸಿನ ಎಳೆಯ ಮನಸ್ಸಿನ ಮಕ್ಕಳ ಮೇಲೆ ಇದು ಎಂತಹ ಪರಿಣಾಮ ಬೀರಲಿದೆ ಎಂದು ಎಲ್ಲ ಶಿಕ್ಷಣ ಪ್ರೇಮಿಗಳೂ ಯೋಚಿಸಬೇಕಿದೆ. ಈ ಕಾಯ್ದೆಯ ಜಾರಿ ಮೊದಲು ಆರಂಭವಾದಾಗ ಈ ಕಾಯ್ದೆಯಡಿ ಸೇರಿದ ಮಕ್ಕಳ ಕೂದಲನ್ನು ಕೆಟ್ಟದಾಗಿ ಕತ್ತರಿಸಿ ಅವರನ್ನು ಗುರುತು ಹಚ್ಚಲು ಅನುಕೂಲವಾಗುವಂತೆ ಮಾಡಿಡಲಾಗುತಿತ್ತು. ಆಗಿನ `ಕುಸುಮ’ದ ಅಧ್ಯಕ್ಷರು ಈ ಶೇ. 25 ಮಿಸಲು ನೀತಿ ವಿರೋಧಿಸಿ ಸಮುದ್ರದ ನೀರು ಮತ್ತು ಕೊಳಚೆ ನೀರು ಸೇರುವುದು ಸರಿಯೇ ಎಂದು ಬಹಿರಂಗವಾಗಿ ಕೇಳಿ ತಮ್ಮ ಕೊಳಕು ಮನಸ್ಸನ್ನು ಬಯಲುಗೊಳಿಸಿಕೊಂಡು ಕೊನೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋದರು.
ಇಂತಹ ಮಾತನ್ನು ಬಹಿರಂಗವಾಗಿ ಹೇಳದೇ ಮನಸ್ಸಿನಲ್ಲಿಟ್ಟುಕೊಂಡು ಕೃತಿಯಲ್ಲಿ ಕೊಳಕುತನ ತೋರುವ ಆಡಳಿತ ಮಂಡಳಿಯವರನ್ನು ಗುರುತಿಸಿ ಸರಿಪಡಿಸುವುದು ಹೇಗೆ ಎಂಬ ಪ್ರಶ್ನೆ ಸಹ ಈಗ ಬಹಳ ಮುಖ್ಯವಾದುದಾಗಿದೆ.
0