ಹರಿಯಾಣ : ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

-ಬಿ.ಶ್ರೀಪಾದ್ ಭಟ್

ದಶಕಗಳ ಕಾಲ ಚುನಾವಣಾ ರಾಜಕಾರಣದಲ್ಲಿದ್ದರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಆ ಅಖಾಡದ ಕನಿಷ್ಠ ಅಂಕಗಣಿತ ಗೊತ್ತಿಲ್ಲ ಎಂದು ಹರ್ಯಾಣ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ಹರಿಯಾಣ

ಮೊದಲನೆಯದಾಗಿ ತಮ್ಮ ಪಕ್ಷದ ದೌರ್ಬಲ್ಯವೇ ಒಳಜಗಳ ಎಂದು ಗೊತ್ತಿದ್ದರೂ ಹೂಡಾ-ಸೆಲ್ಜಾ ನಡುವಿನ ವೈಮನಸ್ಸನ್ನು ಬಗೆಹರಿಸುವ ಗೋಜಿಗೂ ಹೋಗಲಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಹರಿಯಾಣ

ಎರಡನೆಯದು ಜಾಟ್ ಹೊರತಾದ ಸಣ್ಣ ಸಣ್ಣ ಹಿಂದುಳಿದ ಜಾತಿಗಳನ್ನು ತನ್ನೊಳಗೆ ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ. ಕೇವಲ ಜಾಟ್ ಮತಗಳನ್ನು ನೆಚ್ಚಿಕೊಂಡಿದ್ದರು. ಆದರೆ ಈ ಮತಕ್ಷೇತ್ರಗಳಿಗೆ ಜೆಜೆಪಿ ಮತ್ತು ಐಎನ್ ಎಲ್ ಡಿಯಂತ ಪ್ರಾದೇಶಿಕ ಪಕ್ಷಗಳು ಸಹ ಕೈ ಹಾಕಿ ತಾವು ಒಂದು ಸ್ಥಾನವನ್ನು ಗೆಲ್ಲದೆ ಕಾಂಗ್ರೆಸ್ ಗೆ ಸಹ ನಷ್ಟವುಂಟು ಮಾಡಿದರು. ಹರಿಯಾಣ

ಇದನ್ನೂ ಓದಿ: ಐಸಿಡಿಎಸ್ ಕಾಯ್ದೆ : ಮೂರು ತಿಂಗಳೊಳಗೆ ಸಚಿವರ ಸಭೆ: ಸಚಿವ ಸೋಮಣ್ಣ ಭರವಸೆ

ಹೂಡಾ ಕುಟುಂಬಕ್ಕೂ ಸಂಪೂರ್ಣವಾಗಿ ಜಾಟ್ ಮತಗಳನ್ನು ಸೆಳೆಯಲು ಸಾಧ್ಯವಾದಂತಿಲ್ಲ. ಹೂಡಾ ಎನ್ನುವ ಫ್ಯೂಡಲ್ 90 ಕ್ಷೇತ್ರಗಳ ಪೈಕಿ 72ರಲ್ಲಿ ತಮ್ಮ ಹಿಂಬಾಲಕರನ್ನು ಅಭ್ಯರ್ಥಿಗಳಾಗಿ ಆರಿಸಿದ್ದರು. ಹೈಕಮಾಂಡ್ ಮತ್ತು ರಾಹುಲ್ ಸಹ ಈ ಹೂಡಾ ಮತ್ತು ಅವರ ಬೆಂಬಲಿಗರು ನಕ್ಷತ್ರ ತಂದುಕೊಡುತ್ತಾರೆ ಎಂದು ನಂಬಿದ್ದರು. ಆದರೆ ಇವರೆಲ್ಲರೂ ಸರಿಯಾಗಿ ಕೈ ಕೊಟ್ಟಿದ್ದಾರೆ

ಕಾಂಗ್ರೆಸ್ ಬಂದರೆ ಜಾಟ್ ಪ್ರಾಬಲ್ಯ ಹೆಚ್ಚಲಿದೆ ಎನ್ನುವ ಭಯವೂ ಸಹ ಸಣ್ಣ ಸಣ್ಣ ಜಾತಿಗಳು ಬಿಜೆಪಿ ಕಡೆಗೆ ವಾಲಿರುವಂತಿದೆ. ಮತ್ತು ಜಾಟ್ ಸಮುದಾಯ en block ಆಗಿ ಕಾಂಗ್ರೆಸ್ ಗೆ ಮತ ಹಾಕಿಲ್ಲ. ಜಾಟ್ ಪ್ರಾಬಲ್ಯವಿರುವ 36 ಕ್ಷೇತ್ರಗಳಲ್ಲಿ 19ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ

ಇನ್ನು ಚಮ್ಮಾರ್ ಹೊರತಾದ ಇತರೇ ದಲಿತ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ವಿಫಲರಾದ ಕಾಂಗ್ರೆಸ್ ಗೆ ರಾಹುಲ್ ಗಾಂಧಿಯವರ ಜಾತಿ ಗಣತಿ ಪರವಾದ ಪ್ರಚಾರವೂ ನೆರವಿಗೆ ಬರಲಿಲ್ಲ. ಬಹುಶಃ ಯಾರು ಕಾಂಗ್ರೆಸ್ ಗೆ ಚುನಾವಣಾ ತಂತ್ರ ಹೇಳಿಕೊಡುತ್ತಿದ್ದಾರೋ ಆ ಗ್ಯಾಂಗ್ ರಾಹುಲ್ ರನ್ನು ಸರಿಯಾಗಿ ಹಾದಿ ತಪ್ಪಿಸಿದ್ದಾರೆ.

ಬಿಜೆಪಿ ಗುರುಗಾಂವ್, ಫರಿದಾಬಾದ್ ಮುಂತಾದ ನಗರ ಪ್ರದೇಶಗಳನ್ನು ಒಳಗೊಂಡ ಅಹಿರ್ವಾಲ್ ಭಾಗದಲ್ಲಿ ಗೆಲ್ಲುವ ಸಾಧ್ಯತೆಗಳಿದ್ದವು ಮತ್ತು ಅದು ಸಾಧಿಸಿದೆ. ಬಹುಶಃ ಎಲ್ಲಾ 11 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ ಈ ಭಾಗದಲ್ಲಿ ತಲೆ ಹಾಕಿರಲಿಲ್ಲ ಎನ್ನುವ ವಿಚಾರವೇ ಅಚ್ಚರಿಯ ಸಂಗತಿ ಆದರೆ ಗ್ರಾಮೀಣ ಭಾಗವನ್ನು ನೆಚ್ಚಿಕೊಂಡ ಕಾಂಗ್ರೆಸ್ ಅಲ್ಲಿಯೂ ವಿಫಲಗೊಂಡಂತಿದೆ. ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಸಹ ಕಾಂಗ್ರೆಸ್ ವಿಫಲಗೊಂಡಿದೆ.

ಇದನ್ನೂ ನೋಡಿ: ICDS-50| ಐಸಿಡಿಎಸ್‌ನಲ್ಲಿ ಜನಚಳುವಳಿಗಳ ಪಾತ್ರ

Donate Janashakthi Media

Leave a Reply

Your email address will not be published. Required fields are marked *