ಕುಮಾರಸ್ವಾಮಿ ಮೇಲೆ ಸೂಕ್ತ ಕಾನೂನಾತ್ಮಕ ಕ್ರಮಕ್ಕೆ ಹೋರಾಟಗಾರರ ಆಗ್ರಹ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಗೆ, IPS ಅಧಿಕಾರಿ, ಲೋಕಾಯುಕ್ತ ADGP ಆಗಿರುವ ಚಂದ್ರಶೇಖರ್ ರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಪರೋಕ್ಷವಾಗಿ ಬೆದರಿಕೆಯೊಡ್ಡಿದ್ದು, ಈ ಬಗ್ಗೆ ಲೋಜಯುಕ್ತ ಸಂಸ್ಥೆ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಸೂಕ್ತ 

ಶ್ರೀ ಸಾಯಿ ಮಿನರಲ್ಸ್ ಮೈನಿಂಗ್ ಕಂಪನಿ ಗೆ ಅಕ್ರಮವಾಗಿ ಭೂಮಿಮಂಜೂರು ಮಾಡಿದ ಆರೋಪ ಕುಮಾರಸ್ವಾಮಿ ಮೇಲಿದ್ದು, ಈ ಬಗ್ಗೆ ವಿಶೇಷ ಲೋಕಾಯುಕ್ತ ತಂಡ ತನಿಖೆ ನಡೆಸುತ್ತಿದೆ. ಆದ್ರೆ ಈ ಮಧ್ಯೆ SIT ಮುಖ್ಯಸ್ಥರಾದ ಚಂದ್ರಶೇಖರ್ ರನ್ನ ಕುಮಾರಸ್ವಾಮಿ ಟಾರ್ಗೆಟ್ ಮಾಡುವ ಮೂಲಕ ಅಧಿಕಾರಿಗಳಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಮಮ್ತಾಜ್ ಅಲಿ ಆತ್ಮಹತ್ಯೆ, ಬ್ಲಾಕ್ ಮೇಲ್ ಪ್ರಕರಣ : ಆಳವಾದ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಹೀಗಾಗಿ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದುವೇಳೆ ಇದೇ ರೀತಿ ಯಾರಾದ್ರೂ ಸಾಮನ್ಯ ಆರೋಪಿ ಬೆದರಿಕೆ ಹಾಕಿದ್ದಾರೆ, ಇಷ್ಟೊತ್ತಿಗೆ ಆತನ ಜಾಮೀನು ರದ್ದುಗೊಳಿಸಿ ವಶಕ್ಕೆ ಪಡೆಯಾಗುತ್ತಿತ್ತು. ಆದ್ರೆ ಪ್ರಭಾವಿ ಸಚಿವ ಎಂಬ ಕಾರಣಕ್ಕೆ ಹಿಂದೇಟು ಹಾಕುವುದು ಸರಿಯಲ್ಲ. ಲೋಕಾಯುಕ್ತ ಸಂಸ್ಥೆಯ ಈ ನಡೆಯ ವಿರುದ್ಧ ನಮಗೆ ಅಸಂಧಾನವಿದೆ ಎಂದಿದ್ದಾರೆ.

ಹೀಗಾಗಿ ಈ ಕೂಡಲೇ ಕ್ರಮಕ್ಕೆಕ್ ಮುಂದಾಗಿ, ಕುಮಾರಸ್ವಾಮಿ ವಿರುದ್ಧ ಜಾಮೀನು ವಜಾಗೊಳಿಸುವ ದಾವೆ ಹೂಡಿ, ಕಾನೂನಾತ್ಮಕವಾಗಿ ಮುಂದಿನ ಕೈಗೊಳ್ಳಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

ಇದನ್ನೂ ನೋಡಿ: ಜಾತಿಗಣತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ : Janashakthi Media

Donate Janashakthi Media

Leave a Reply

Your email address will not be published. Required fields are marked *