ಮಿಸ್‌‍ಫೈರ್‌ ಆಗಿ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ ನಟ ಗೋವಿಂದ

ಮುಂಬೈ : ಬಾಲಿವುಡ್‌ ನಟ ಗೋವಿಂದ ಅವರು ಇಂದು ಬೆಳಗ್ಗೆ ತಮ ಮನೆಯಲ್ಲಿ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೆಳಗ್ಗೆ 4:45ರ ಸುಮಾರಿಗೆ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಿಸ್‌‍ಫೈರ್‌ ಆಗಿ ಗಾಯವಾಗಿದೆ.

ಶಿವಸೇನೆ ನಾಯಕರಾಗಿರುವ ಗೋವಿಂದ ಅವರು ಇಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳುವಾಗ ಈ ಘಟನೆ ನಡೆದಿದೆ.  ಘಟನೆ ವೇಳೆ ಮನೆಯಲ್ಲಿ ಗೋವಿಂದ ಒಬ್ಬರೇ ಇದ್ದರು ಎಂದು ಮಾಧ್ಯಮಗಳಿಗೆ ಗೋವಿಂದ ಅವರ ಮ್ಯಾನೇಜರ್‌ ಶಶಿ ಸಿನ್ಹಾ ಪ್ರತಿಕ್ರಿಯಿಸಿದ್ದು, ಪರವಾನಗಿ ಪಡೆದ ರಿವಾಲ್ವರ್‌ನ್ನು ಕೇಸ್‌‍ನಲ್ಲಿ ಇಟ್ಟುಕೊಂಡಿದ್ದರು.

ಇಂದು ಕೇಸ್‌‍ನಿಂದ ತೆಗೆಯುವಾಗ ರಿವಾಲ್ವರ್‌ ಕೆಳಗೆ ಬಿದ್ದು ಫೈರ್‌ ಆಗಿ ಬುಲೆಟ್‌ ಕಾಲಿಗೆ ತಗುಲಿದೆ. ವೈದ್ಯರು ಬುಲೆಟ್ ಅನ್ನು ತೆಗೆದಿದ್ದಾರೆ, ಗೋವಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಇದೀಗ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟನ ಸ್ಥಿತಿ ಸ್ಥಿರವಾಗಿದ್ದು, ಐಸಿಯುನಲ್ಲಿ ಇರಿಸಲಾಗಿದೆ. ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್​ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *