ಮುನಿರತ್ನನೊಂದಿಗೆ ವೈರತ್ವ ಇರುವವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು: ಶಾಸಕ ಕುಣಿಗಲ್ ರಂಗನಾಥ ಮನವಿ

ಬೆಂಗಳೂರು: ರಾಜ್ಯದಲ್ಲಿ ಶಾಸಕ ಮುನಿರತ್ನನೊಂದಿಗೆ ವೈರತ್ವ ಇರುವವರು ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಮುನಿರತ್ನ‌ ಮೇಲೆ‌ ಹಲವು ಆರೋಪಗಳಿವೆ. ಓಟರ್ ಐಡಿ ಪ್ರಕರಣ, ಕಾರ್ಪೊರೇಟರ್ ಮೇಲೆ ಹಲ್ಲೆ, ಬಿಬಿಎಂಪಿ ಅಕ್ರಮ ವಿಚಾರವಾಗಿ ಫೈಲ್ ಸುಟ್ಟ ಆರೋಪ ಇದೆ. ಜೊತೆಗೆ, ಮುನಿರತ್ನ ಜೊತೆ ವೈರತ್ವ ಇರುವವರು ಬ್ಲಡ್ ಟೆಸ್ಟ್ ‌ಮಾಡಿಸಬೇಕು. ಮುಖ್ಯವಾಗಿ ಬಿಜೆಪಿ ನಾಯಕರು ಎಚ್ಐವಿ  ಟೆಸ್ಟ್ ಮಾಡಿಸಿಕೊಳ್ಳಬೇಕು. ಎಚ್ಐವಿ (ಏಡ್ಸ್) ಅತ್ಯಂತ ಮಾರಕ ಪಿಡುಗು.

ಮೊನ್ನೆ ಎಚ್ಐವಿ ಪಾಸಿಟಿವ್ ಆದ ಮಹಿಳೆ ಮುನಿರತ್ನ ವಿರುದ್ಧ ಆರೋಪ ಮಾಡಿದ್ದಾಳೆ. ಕುಷ್ಟರೋಗ ಸೇರಿ ಹಲವು ರೋಗಗಳು ಬಂದಾಗ ಸಾಮಾಜಿಕ ಬಹಿಷ್ಕಾರ ಹಾಕಿರುವುದನ್ನು ಗಮನಿಸಿದ್ದೇವೆ. ಎಚ್ಐವಿ ಬಂದಿರುವ ರೋಗಿಗಳನ್ನು ಬಳಸಿಕೊಂಡಿರುವುದು ದುರ್ದೈವವಾಗಿದೆ. ಎಚ್ಐವಿ ಹರಡುವುದು ರಕ್ತದಿಂದ, ಇಲ್ಲದಿದ್ದರೆ ಲೈಂಗಿಕ ಸಂಪರ್ಕದಿಂದ. ಮುನಿರತ್ನ ಹೇಗೆ ಆ ಲೇಡಿಯನ್ನು ಬಳಸಿಕೊಂಡಿದ್ದಾರೆ ಎಂಬುದು ಕೇಳಿ ಬಹಳ ನೋವಾಯ್ತು ಎಂದರು.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಬಿದ್ದ ಖಾಸಗಿ ಬಸ್, ನಾಲ್ವರ ಸಾವು

ಎಚ್ಐವಿ ಸೋಂಕಿತರಿಂದ ರಕ್ತವನ್ನು ತೆಗೆದುಕೊಂಡು ಬೇರೆಯವರಿಗೆ ಹಾಕಿದರೆ ಶೇ.80 ಬೇರೆಯವರಿಗೆ ಬರುವ ಸಾಧ್ಯತೆ ಇದೆ. ಇನ್ನು ರಾಜ್ಯದ ವಿಪಕ್ಷ ನಾಯಕ ಆರ್. ಅಶೋಕ್ ಮೇಲೆಯೂ ಕೂಡ ಹೀಗೆ ಮಾಡಿದ್ದಾರೆ. ಎಂದು ಕೇಳಪಟ್ಟಿದ್ದೇನೆ. ಇಂಥ ಮನೋಭಾವ ಇರುವ ಶಾಸಕನ ವಿಚಾರದಲ್ಲಿ ಸತ್ಯ ಹೊರಗೆ ಬರಬೇಕು. ಮುನಿರತ್ನ‌ ಮೇಲೆ‌ ಹಲವು ಆರೋಪಗಳಿವೆ. ಲೋಕಾಯುಕ್ತದಲ್ಲಿ ಅಕ್ರಮ ಟೆಂಡರ್ ಕೇಸ್ ಇದೆ. ಓಟರ್ ಐಡಿ ಪ್ರಕರಣ ಇದೆ, ಕಾರ್ಪೊರೇಟರ್ ಹಲವು ಆರೋಪ‌ ಮಾಡಿದ್ದಾರೆ. ಬಿಬಿಎಂಪಿ ಅಕ್ರಮ ವಿಚಾರವಾಗಿ ಫೈಲ್ ಸುಟ್ಟ ಆರೋಪ ಇದೆ ಎಂದು ಮಾಹಿತಿ ನೀಡಿದರು.

ಇನ್ನು ರಾಜ್ಯದಲ್ಲಿ ಶಾಸಕ ಮುನಿರತ್ನ ಜೊತೆ ವೈರತ್ವ ಇರುವವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದರಲ್ಲಿಯೂ ಮುಖ್ಯವಾಗಿ ಬಿಜೆಪಿ ನಾಯಕರು ಎಚ್ಐವಿ ಟೆಸ್ಟ್ ಮಾಡಿಸಿಕೊಳ್ಳಿ ಅಂತ ಮನವಿ ಮಾಡುತ್ತೇನೆ. ಪರ್ಸನಲ್ ಟೈಮ್ ತಗೊಂಡು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಪುನಃ ಕುಣಿಗಲ್ ಶಾಸಕ ರಂಗನಾಥ್ ಮತ್ತೆ ಆಗ್ರಹ ಮಾಡಿದರು. ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಿ. ದಯವಿಟ್ಟು ಇದು ನ‌ನ್ನ ಮನವಿ. ಪರ್ಸನಲ್ ಟೈಮಿಂಗ್ ಕೊಟ್ಟು ಎಲ್ಲರೂ ಬ್ಲಡ್ ಸ್ಯಾಂಪಲ್ ಟೆಸ್ಟ್ ಮಾಡಿಸಿಕೊಳ್ಳಿ. ಇದು ನನ್ನ ವೈಯಕ್ತಿಕ ಮನವಿ ಎಂದರು.

ಇದನ್ನೂ ನೋಡಿ: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ – ವೈದ್ಯರು ಹೇಳುವುದೇನು?Janashakthi Media

Donate Janashakthi Media

Leave a Reply

Your email address will not be published. Required fields are marked *