ಕ್ಲೀನ್‌ ಕುಂದಾಪುರ ಯೋಜನೆ; 1 ಟನ್‌ನಷ್ಟು ಚಪ್ಪಲಿಗಳು ಇತರ ತ್ಯಾಜ್ಯ ಸಂಗ್ರಹ

ಉಡುಪಿ: ಕ್ಲೀನ್‌ ಕುಂದಾಪುರ ಯೋಜನೆಯ ಸ್ವಯಂ ಸೇವಕರು, ಕುಂದಾಪುರ ಬೀಚ್‌ ಸುತ್ತಮುತ್ತಲಿನ 200-300 ಮೀ. ಪ್ರದೇಶದಲ್ಲಿ ಬಿದ್ದಿದ್ದ 1 ಟನ್‌ನಷ್ಟು ಚಪ್ಪಲಿಗಳು ಸೇರಿ ವೈದ್ಯಕೀಯ, ಇತರ ತ್ಯಾಜ್ಯಗಳನ್ನು  ಸಂಗ್ರಹಿಸಿ ಸ್ವಚ್ಛಗೊಳಿಸಿದ್ದಾರೆ.

ವರಾಹಿ, ಸೌಪರ್ಣಿಕಾ, ಖೇಟಾ, ಕುಬ್ಜಾ ಚಕ್ರಾ ನದಿಗಳ ನೀರು ಕುಂದಾಪುರ ಹಾಗೂ ಬೈಂದೂರು ತಾಲೂಕಿಗಳಲ್ಲಿ ಹರಿದು  ಪಂಚ ಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲು ಸೇರುತ್ತದೆ. ಹೀಗಾಗಿ ಸಹಜವಾಗಿ ಎರಡು ತಾಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚ ಗಂಗಾವಳಿಯಲ್ಲಿ ಸೇರಿ ಅರಬ್ಬಿ ಕಡಲು ಪ್ರವೇಶಿಸುತ್ತದೆ.

ತ್ಯಾಜ್ಯ ಸಂಗ್ರಹಣೆಯ ಮೂಲಕ ನಿರಂತರವಾಗಿ ಕಿನಾರೆಯ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಕ್ಲೀನ್‌ ಕುಂದಾಪುರದ ಕಾರ್ಯಕರ್ತರು ಪಂಚ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ತ್ಯಾಜ್ಯದ ಹೆಚ್ಚುತ್ತಿರುವುದನ್ನು ಗಮನಿಸಿದ್ದಾರೆ.

ಇದನ್ನು ಓದಿ : ಮಕ್ಕಳ ತಟ್ಟೆಗೆ ಹಾಕಿದ ಮೊಟ್ಟೆ ವಾಪಸ್ ಪಡೆಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ!

ಹೀಗಾಗಿ ಸಮುದ್ರ ಕಿನಾರೆ ಸ್ವಚ್ಛವಾಗಿಡುವ ಮೂಲಕ ಸುಂದರ ಕುಂದಾಪುರದ ಕನಸನ್ನು ನನಸು ಮಾಡಲು ಕಳೆದ ಕೆಲ ಸಮಯದಿಂದ ಪ್ರತೀ ವಾರ ಕೋಡಿ ಕಿನಾರೆಯ ಪರಿಸರ ಸ್ವಚ್ಛಗೊಳಿಸುವ ಕ್ಲೀನ್‌ ಕುಂದಾಪುರ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಸ್ಥಳೀಯ ಪುರಸಭೆ, ಅರಣ್ಯ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡದವರ ಕಾರ್ಯಶೈಲಿಯನ್ನು ಮೆಚ್ಚಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯಾಧೀಶರು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಒಟ್ಟಾಗುವ ತ್ಯಾಜ್ಯಗಳ ವಿಲೇವಾರಿ ಆಗದೇ ಇದ್ದಲ್ಲಿ, ಹಳೆಯ ತ್ಯಾಜ್ಯದ ಮೇಲೆ ಕೂತು, ಪದರಗಳಾಗಿ ಅವು ಕಿನಾರೆಯ ಮರಳಲ್ಲಿ ಹೂತು ಹೋಗುತ್ತವೆ. ಇದರಿಂದ ಸಮುದ್ರದ ಮತ್ಸ್ಯ ಸಂತತಿ, ಜಲಚರಗಳು, ಕಡಲಾಮೆ, ವಲಸೆ ಹಕ್ಕಿಗಳು ಹಾಗೂ ಇತರ ಜೀವಿಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎನ್ನಲಾಗಿದೆ.

ಇದನ್ನು ನೋಡಿ : ಮನೆಯಲ್ಲೇ ಸಮತೋಲನ ಪಶು ಆಹಾರ ತಯಾರಿಸೋದು ಹೇಗೆ? |ರೈತರಿಗಾಗಿ ಮಾಹಿತಿ |Janashakthi Media

Donate Janashakthi Media

Leave a Reply

Your email address will not be published. Required fields are marked *