ಮೇಲ್ನೋಟಕ್ಕೆ ಹೇಮಂತ್ ಸೊರೇನ್ ಅವರು ತಪ್ಪಿತಸ್ಥರು ಎಂದು ಸಾಬೀತಾಗುತ್ತಿಲ್ಲ ಎಂದ ನ್ಯಾಯಾಲಯ
ನವದೆಹಲಿ: ಜಾರ್ಖಂಡ್ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ಗೆ ಭೂ ಹಗರಣಕ್ಕೆ ಸಂಬಂಧಿಸಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ. ಸೊರೇನ್ ಪರ ವಕೀಲ ಅರುಣಾಭ್ ಚೌಧರಿ ಈ ಅಪರಾಧದಲ್ಲಿ ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯವು ಹೇಳಿದೆ. ಹೈಕೋರ್ಟ್ ಜೂನ್ 13 ರಂದು ಸೊರೆನ್ ಜಾಮೀನು ಅರ್ಜಿಯ ನಿರ್ಧಾರವನ್ನು ಕಾಯ್ದಿರಿಸಿತ್ತು.
ಭೂ ಹಗರಣ ಪ್ರಕರಣದಲ್ಲಿ ಹೇಮಂತ್ ಸೊರೇನ್ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ಹೇಮಂತ್ ಸೊರೆನ್ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.ಮೇಲ್ನೋಟಕ್ಕೆ ಹೇಮಂತ್ ಸೊರೇನ್ ಅವರು ತಪ್ಪಿತಸ್ಥರು ಎಂದು ಸಾಬೀತಾಗುತ್ತಿಲ್ಲ. ಜಾಮೀನು ಅವಧಿಯಲ್ಲಿ ಆರೋಪಿ ಯಾವುದೇ ಲೋಪ ಎಸಗುವುದಿಲ್ಲ ಎಂದು ಕಂಡು ಬರುತ್ತಿದೆ. ಹೀಗಾಗಿ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿರೋದಾಗಿ ಹೇಮಂತ್ ಸೊರೇನ್ ಅವರ ಪರ ವಕೀಲ ಅರುಣಾಭ್ ಚೌಧರಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರೀ ಮಳೆ : ದೆಹಲಿ ಏರ್ಪೋರ್ಟ್ ಮೇಲ್ಛಾವಣಿ ಕುಸಿತ
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೊರೇನ್ ಅವರನ್ನು ಜನವರಿ 31 ರಂದು ಬಂಧನ ಮಾಡಿತ್ತು. ದಾಖಲೆಗಳನ್ನು ತಿದ್ದುಪಡಿ ಮಾಡುವ ಅಕ್ರಮ ದಂಧೆಯನ್ನು ಹೇಮಂತ್ ಸೊರೇನ್ ನಡೆಸುತ್ತಿದ್ದರು ಎಂದು ಇಡಿ ಆರೋಪ ಮಾಡಿತ್ತು. ಅಷ್ಟೇ ಅಲ್ಲ, ರಾಂಚಿಯಲ್ಲಿ 8.86 ಕೋಟಿ ರೂ. ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಲಪಟಾಯಿಸಲು ನಕಲಿ ಹಣ ವರ್ಗಾವಣೆ ಹಾಗೂ ಖೋಟಾ ದಾಖಲೆಗಳನ್ನು ಸಿದ್ದಪಡಿಸುತ್ತಿದ್ದರು ಎಂದೂ ಇಡಿ ಆಪಾದಿಸಿತ್ತು.
ಈ ಪ್ರಕರಣದ ವಾದ – ಪ್ರತಿವಾದ ಆಲಿಸಿದ ಜಾರ್ಖಂಡ್ ಹೈಕೋರ್ಟ್ ಇದೀಗ ಹೇಮಂತ್ ಸೊರೇನ್ ಅವರಿಗೆ ಜಾಮೀನು ನೀಡಿದೆ. ಈ ಹಿಂದೆ ಕಳೆದ ತಿಂಗಳು ಎರಡು ಬಾರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ರಾಂಚಿಯ ವಿಶೇಷ ನ್ಯಾಯಾಲಯ ಕೂಡಾ ಹೇಮಂತ್ ಸೊರೇನ್ ಅವರಿಗೆ ಜಾಮೀನು ನಿರಾಕರಣೆ ಮಾಡಿತ್ತು. ಈ ಪ್ರಕರಣ ಸಂಬಂಧ ಹೇಮಂತ್ ಸೊರೇನ್ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಆದರೆ, ತಮ್ಮ ಮಧ್ಯಂತರ ಜಾಮೀನು ಅರ್ಜಿಯನ್ನು ಹೇಮಂತ್ ಸೊರೇನ್ ಬಲವಂತವಾಗಿ ಹಿಂಪಡೆಯಬೇಕಾಗಿ ಬಂದಿತ್ತು.
ಇದನ್ನೂ ನೋಡಿ: ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media