ಕೊನೆಗೂ ಚುನಾವಣಾ ಆಯೋಗ ಮತದಾರರ ವಿವರಗಳನ್ನು ಪ್ರಕಟಿಸಿದೆ! ಏಕೆ?

ಮೇ 25 ರಂದು ಕೊನೆಗೂ ಚುನಾವಣಾ ಆಯೋಗ ಅದುವರೆಗೆ ನಡೆದಿದ್ದಎಲ್ಲ 5 ಹಂತಗಳ ಮತದಾರರ ಸಂಖ್ಯೆಯನ್ನು ಮೇ 25ರಂದು ಪ್ರಕಟಪಡಿಸಿದೆ. ಮೊದಲ ಹಂತದ ಮತದಾನ ನಡೆದ 11 ದಿನಗಳ ನಂತರ, ಕೇವಲ ಶೇಕಡಾ ಮತದಾನಗಳನ್ನಷ್ಟೇ ಪ್ರಕಟಿಸಿದಾಗ ಎಲ್ಲ ಪ್ರತಿಪಕ್ಷಗಳು ಮತ್ತು ನಾಗರಿಕ ಸಮಾಜದ ಗಣ್ಯರು ಕೇಳಿದರೂ ಪ್ರಕಟಿಸಲು ಆಯೋಗ ನಿರಾಕರಿಸಿದಾಗ, ಪ್ರಕರಣ ಸುಪ್ರಿಂ ಕೋರ್ಟ್‍ಗೂ ಹೋಯಿತು. ಗಮನಾರ್ಹ ಸಂಗತಿಯೆಂದರೆ, ಕಳೆದ 2019ರ ಲೋಕಸಭಾ ಚುನಾವಣೆಗಳವರೆಗೂ ಅದು ಈ ಅಂಕಿ-ಅಂಶಗಳನ್ನು ಪ್ರಟಿಸುವ ಮತ್ತು ಈ ಕುರಿತು ಪತ್ರಿಕಾ ಗೋಷ್ಠಿಯನ್ನು ನಡೆಸುವ ಪರಿಪಾಟವಿತ್ತು. ಕೊನೆಗೂ 

ನ್ಯಾಯಾಲಯ ಈ ಬಗ್ಗೆಆಯೋಗದಿಂದವಿವರಣೆ ಕೇಳಿತು. ಅದಕ್ಕೆ ಉತ್ತರವಾಗಿ ಸಲ್ಲಿಸಿದ 225 ಪುಟಗಳ ಅಫಿಡವಿಟ್‍ನಲ್ಲಿ ಆಯೋಗ ಕಾನೂನು ಪ್ರಕಾರ ಅದನ್ನು ಪ್ರಕಟಿಸಬೇಕಾಗಿಲ್ಲ ಎಂದು ವಾದ ಹೂಡಿತು, ಅವನ್ನು ಪ್ರಕಟಿಸಿದರೆ , ನಾಗರಿಕರಲಿ ಗೊಂದಲ ಉಟಾಗಬಹುದು ಎಂದು ಹೇಳಿತು. ನ್ಯಾಯಾಲಯ ಕೂಡ ಈ ಹಂತದಲ್ಲಿ ಮಧ‍್ಯ ಪ್ರವೇಶಿಸಲು ಬಯಸುವುದಿಲ್ಲ ಎನ್ನುತ್ತ ವಿಚಾರಣೆಯನ್ನು ಮುಂದೂಡಿತು. ಇನ್ನು ಈ ಬಗ್ಗೆ ವಿಚಾರಣೆ ನಡೆಯುವುದು ಚುನಾವಣೆಗಳು ಮುಗಿದು ಫಲಿತಾಂಶಗಳೂ ಬಂದಮೇಲೆಯೇ. ಕೊನೆಗೂ 

ಇದನ್ನೂ ಓದಿ: 28ರಂದು ಬಿಜೆಪಿ ಬೃಹತ್ ಪ್ರತಿಭಟನೆ- ಎಸ್.ಹರೀಶ್

“ಸತ್ಯ ಮೇವಜಯತೇ”

ಸತ್ಯ ನೋವುಂಟು ಮಾಡುತ್ತದೆ,

ಮುಗ್ಧ ಮತದಾತರಿಗೆ ಇದರಿಂದ

ತೊಂದರೆಯಾಗಬಾರದು ಎಂಬುದು

ಚುನಾವಣಾ ಆಯೋಗದ ಆಶಯ

ವ್ಯಂಗ್ಯ ಚಿತ್ರ: ಆರ್‍ ಪ್ರಸಾದ್ ,

’ಇಕನಾಮಿಕ್‍ ಟೈಮ್ಸ್

 

 

ಆದರೆ ಅದೇಕೋ ಚುನಾವಣಾ ಆಯೋಗ ಮರುದಿನವೇ ಬಹಳ ದಿನಗಳಿಂದ ಕೇಳುತ್ತಿದ್ದ, ಅದು ನಿರಾಕರಿಸುತ್ತಿದ್ದ, ಬಹುಶಃ ಅದು ಸಿದ್ದಪಡಿಸಿಟ್ಟುಕೊಂಡಿದ್ದ ಅಂಕಿ-ಅಂಶಗಳನ್ನು ಪ್ರಕಟಿಸಿತು.. ಈ ಪ್ರಕಟಣೆಯಲ್ಲಿ ಅದು ಸುಪ್ರಿಂ‌ ಕೋರ್ಟ್ ಈ ಕುರಿತು ವ್ಯಕ್ತಪಡಿಸಿದ ಆಂಶಗಳಿಂದ ಮತ್ತು ತೀರ್ಪಿನಿಂದ ತನಗೆ ಬಲ ಬಂದಂತೆ ಅನಿಸಿದ್ದರಿಂದ ಮತ್ತು ಅದು ತನ್ನ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ತಂದಿರುವುದರಿಂದ ಈ ಪ್ರಕಟಣೆಯನ್ನು ಮಾಡಲಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಹಾಗಿದ್ದರೆ ಅದು ಸುಪ್ರಿಂಕೋರ್ಟಿನಿಂದ ಶಕ್ತಿಗೂಡಿಸಿಕೊಳ್ಳಲು ಕಾಯುತ್ತಿತ್ತೇ ಎಂದು ಒಬ್ಬ ರಾಜಕೀಯ ವಿಶ್ಲೇಷಕರು ಟಿಪ್ಪಣಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಕೆಲವೇ ದಿನಗಳ ಹಿಂದೆ ಚುನಾವಣಾ ಬಾಂಡುಗಳ ವಿಷಯದಲ್ಲಿ ನಡೆದವಾದ-ವಿವಾದಗಳನ್ನು ಸಹಜವಾಗಿಯೇ ನೆನಪಿಸಿಕೊಳ್ಳಬಹುದು, ಸ್ಟೇಟ್‍ ಬ್ಯಾಂಕ್ ಇಂಡಿಯಾ ಈ ಬಾಂಡುಗಳ ವಿವರಗಳನ್ನು ಸಲ್ಲಿಸಬೇಕು ಎಂದಾಗ, ಇದೇರೀತಿಯ ಅಫಿಡವಿಟನ್ನು ಸಲ್ಲಿಸಿ, ಮೂರುತಿಂಗಳ ಸಮಯವನ್ನು ಕೇಳಿತು. ಆಗಲೂ ಸರಕಾರದ ವಕೀಲರು ನಾಗರಿಕರಿಗೆ ಈ ವಿವರಗಳನ್ನು ಕೇಳುವಹಕ್ಕು ಇಲ್ಲ ಎಂದು ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ ವಿವರಗಳನ್ನು ಸಲ್ಲಿಸಲು ಆದೇಶ ನೀಡಿತು,  ಅದುವರೆಗೆ ಇದಕ್ಕೆ ಬಹಳ ಸಮಯ ಬೇಕು ಎಂದು ಕೇಳಿದ ಸ್ಟೇಟ್‍ ಬ್ಯಾಂಕ್‍ ಇಂಡಿಯ ನಿಗದಿತಗಡುವಿನಿನೊಳಗೇ ವಿವರಗಳನ್ನು ಪ್ರಕಟಿಸಿತು. ಕೊನೆಗೂ 

ಇದೇರೀತಿಯಲ್ಲಿ ಚುನಾವಣಾ ಆಯೋಗ ಸುಪ್ರಿಂ ಕೋರ್ಟಿನಿಂದ ಆದೇಶವನ್ನು ನಿರೀಕ್ಷಿಸಿತ್ತೇ, ಎಲ್ಲೆಡೆಗಳಿಂದ ಟೀಕೆ- ಟಿಪ್ಪಣಿಗಳು ಬರುತ್ತಿದ್ದರೂ, ಮೌನವಹಿಸಿದ್ದ ಆಯೋಗಕ್ಕೆ ಸುಪ್ರಿಂ ಕೋರ್ಟ್ ಏನೂ ಆದೇಶ ಹೊರಡಿಸದೆ ಇದ್ದಾಗಲೂ, ಇದಕ್ಕಿದ್ದಂತೆ, ಬಲಹೇಗೆಬಂತು, ತನ್ನ ಜವಾಬ್ದಾರಿ ಹೆಚ್ಚಿದೆ ಎಂದು ಏಕೆ ಅನಿಸಿತು, ಅದುವರೆಗೆ ಈ ಬಲಮತ್ತುಅನಿಸಿಕೆ ಇರಲಿಲ್ಲವೇ, ಹಾಗಿದ್ದರೆ ಅದಕ್ಕೆ ಕಾರಣಗಳೇನು, ಅಥವ ಯಾರು ಎಂಬಿತ್ಯಾದಿ ಗಂಭೀರ ಪ್ರಶ್ನೆಗಳು ಹಲವು ರಾಜಕೀಯ ವೀಕ್ಷಕರನ್ನು ಕಾಡುತ್ತಿವೆ.

“ನೀವು ಅದೃಷ್ಟವಂತರಪ್ಪಾ..!”

ಚುನಾವಣಾ ಆಯೋಗದ

ಅಧಿಕಾರಿಗಳಿಗೆ

ಸ್ಟೇಟ್‍ ಬ್ಯಾಂಕ್ ಆಫ್

ಇಂಡಿಯಾ ಅಧಿಕಾರಿ

ವ್ಯಂಗ್ಯ ಚಿತ್ರ: ಅಲೋಕ್‍ ನಿರಂತರ್

 

ಇದನ್ನೂ ನೋಡಿ: ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆJanashakthi Media

Donate Janashakthi Media

Leave a Reply

Your email address will not be published. Required fields are marked *