ಬಾಗಲಕೋಟೆ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಕಿಡಿಕಾರಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೈವಾಡವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಡಿಕೆಶಿ ಅನ್ನು ಪೆನ್ಡ್ರೈವ್ ಪ್ಯಾಕ್ಟರಿ ಮಾಲೀಕ ಅಂತ ಹೇಳಲ್ಲ ಎಂದು ಹೇಳಿದರು.
‘ಇದರಲ್ಲಿ ಮಾನ್ಯ ಎಚ್.ಡಿ. ಕುಮಾರಸ್ವಾಮಿ ಅವರ ಪಾತ್ರ ದೊಡ್ಡದು ಅಂತ ಸಹ ಹೇಳಲ್ಲ. ನಾನು ಹೇಳೋದೇನು ಅಂದ್ರೆ, ಈ ಎಲ್ಲಾ ಘಟನೆಗಳಿಂದ ಕರ್ನಾಟಕ ರಾಜ್ಯದ ಜನತೆ, ದೇಶ ಹಾಗೂ ಪ್ರಪಂಚದ ಮುಂದೆ ಬೆತ್ತಲೆಯಾಗಿ ಬಿಟ್ಟಿದ್ದಾರೆ. ನಮ್ಮಲ್ಲಿ ಹೆಣ್ಣನ್ನು ತಾಯಿ ಅಂತ ಕರೆಯುತ್ತೀವಿ.
ಇದನ್ನು ಓದಿ : ಆರನೇ ಹಂತದಲ್ಲಿ ಹಕ್ಕು ಚಲಾಯಿಸಿದ ಘಟಾನುಘಟಿಗಳು
ತಾಯಿ ಅಂತ ಕರೆಯುವ ಹೆಣ್ಣಿಗೆ ಇಷ್ಟು ಅಪಮಾನ ಆಗಿದ್ದು, ಇದೇ ಮೊದಲನೇ ಬಾರಿ. ಈ ವಿಷಯದಲ್ಲಿ ನಾನು ಸಿದ್ದರಾಮಯ್ಯ, ಗೃಹಮಂತ್ರಿಗೆ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ’ ಎಂದರು.
‘ನಿಮ್ಮ ಕೈಯಲ್ಲಿ ಆಗಲ್ಲ ಎಂಬುದು ಖಚಿತವಾದರೆ ದಯವಿಟ್ಟು ಕೇಸ್ನ ಸಿಬಿಐಗೆ ಹಸ್ತಾಂತರಿಸಿ. ನಾನು ಡಿ.ಕೆ. ಶಿವಕುಮಾರ್ ಕುರಿತು ಆಪಾದನೆ ಮಾಡಲ್ಲ. ಕುಮಾರಸ್ವಾಮಿ ಬಗ್ಗೆಯೂ ಆರೋಪ ಮಾಡಲ್ಲ. ನೀವು ಇಬ್ಬರು ಕೂಡ ಒಳ್ಳೆಯವರೆ. ಇಂತಹ ಸಂದರ್ಭ ನಮ್ಮ ರಾಜ್ಯದ ಇತಿಹಾಸದಲ್ಲಿ ಬಂದಿಲ್ಲ. ಅದಕ್ಕೆ ಸಿಬಿಐಗೆ ಕೇಸ್ ಹಸ್ತಾಂತರಿಸಿ ಎಂದು ಮನವಿ ಮಾಡ್ತಿದ್ದೀನಿ ಅಷ್ಟೇ’ ಎಂದು ಹೇಳಿದ್ದಾರೆ.
ಇದನ್ನು ನೋಡಿ : ರಾಜಸ್ಥಾನ : ಬಿಜೆಪಿ ಪ್ರಾಬಲ್ಯ ಕಳೆದುಕೊಳ್ಳಲಿದೆಯೆ? ಲೆಕ್ಕಾಚಾರಗಳು ಏನು ಹೇಳುತ್ತಿವೆ! Janashakthi Media