ನವದೆಹಲಿ: ನಮ್ಮ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಅಂದ್ರೆ, ಒಂದುಮಟ್ಟಿಗೆ ಹರಸಾಹಸನೇ ಆಗಿದೆ.
ಯಾಕಂದ್ರೆ, ಡಿಎಲ್ ಪಡೆಯೋರು ಬೇರೆಬೇರೆ ಫಾರ್ಮ್ ತುಂಬಬೇಕು, ಅವ್ರಿವ್ರು ಆಫಿಸರ್ಸ್‌ಗಳನ್ನ ಭೇಟಿಮಾಡಬೇಕು. ಇದು ಒಂದ್ಕಡೆಯಾದ್ರೆ, ಮತ್ತೊಂದು ಕೆಲವೆಡೆ ಈ ಲೈಸೆನ್ಸ್ ಪಡೆಯೋಕೆ ಭ್ರಷ್ಟ ಅಭ್ಯಾಸಗಳನ್ನ ಕೂಡ ಮಾಡ್ಲಾಗತ್ತೆ ಅಂತ. ಅರ್ಥಾತ್ ಅವ್ರಿವ್ರನ್ನ ಹಿಡಿದು ಡಿಎಲ್ ಇಷ್ಟು ಅಷ್ಟು ರೇಟಿಗೆ ಮಾಡಿಸಿಕೊಳ್ಳೋದು ಅನ್ನೋ ದೂರುಗಳು ಅಪವಾದಗಳು ಬೇರೆ. ಈ ಎಲ್ಲವುಗಳಿಂದ ಆರ್.ಟಿ.ಓಗೆ ಕಿರಿಕಿರಿ. ಇಂತಹವುಗಳೆಲ್ಲಾ ಕೊನೆಯದಾಗಿ ಪರಿಣಾಮ ಬೀರೋದು “ಟ್ರಾಫಿಕ್ ರೂಲ್ಸ್” ಮೇಲೆ.
ಹೀಗಾಗಿ ಇಂಥ ನ್ಯೂನತೆಗಳನ್ನ ಸರಿಮಾಡೋಕೆ, ಸರಿಯಾದ ವ್ಯವಸ್ಥೆಯನ್ನ ಜಾರಿಮಾಡೋಕೆ ಅಂತಾನೇ “ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ” ಭಾರತದಲ್ಲಿ ನಿಯಮಗಳಿಗೆ ಪ್ರಮುಖ ಬದಲಾವಣೆಗಳನ್ನ ಪರಿಚಯಿಸಿದೆ.
ಇದನ್ನು ಓದಿ : ನನ್ನ ಸುತ್ತಮುತ್ತಲಿನ 40 ಜನರ ಫೋನ್ ಟ್ಯಾಪ್ ಆಗುತ್ತಿದೆ ಎಂದ ಹೆಚ್.ಡಿ.ಕುಮಾರಸ್ವಾಮಿ
ಜೂನ್ 1 ರಿಂದ ಟ್ರಾಫಿಕ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ. ಅವು ಯಾವುವು ಅನ್ನೋದನ್ನ ನೋಡೋದಾದ್ರೆ,
- ಅರ್ಜಿದಾರರು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ಪರೀಕ್ಷೆಯನ್ನು ತೆಗೆದುಕೊಳ್ಳುವ ಪ್ರಸ್ತುತ ಅಭ್ಯಾಸದ ಬದಲಿಗೆ ತಮ್ಮ ಆಯ್ಕೆಯ ಹತ್ತಿರದ ಸೆಂಟರ್ನಲ್ಲಿ ಡ್ರೈವಿಂಗ್ ಟೆಸ್ಟ್ ಪಡೀಬಹುದು. ಚಾಲನಾ ಪರೀಕ್ಷೆ ನಡೆಸೋಕೆ ಸರ್ಕಾರವು ಖಾಸಗಿ ಆಟಗಾರರಿಗೆ ಅಧಿಕಾರ ನೀಡುವ ಪ್ರಮಾಣಪತ್ರವನ್ನು ಸರ್ಕಾರ ನೀಡುತ್ತೆ.
- ಅಥರಾಯ್ಜಡ್ ಅಲ್ಲದ ಅಂದ್ರೆ ಮಾನ್ಯವಾಗಿರದ ಲೈಸೆನ್ಸ್ ಡ್ರೈವಿಂಗ್‌ಗೆ ದಂಡದ ಪ್ರಮಾಣವನ್ನು ಕೂಡ ಹೆಚ್ಚಿಸಿದೆ. 1 ಸಾವಿರ ರೂಪಾಯಿಯಿಂದ 2 ಸಾವಿರ ರೂ.ವರೆಗೆ ದಂಡ, ಅಲ್ಲದೇ ಅಪ್ರಾಪ್ತರು ವಾಹನ ಚಲಾಯಿಸೋದು ಕಂಡು ಬಂದ್ರೆ ಆ ಪೋಷಕರ ವಿರುದ್ಧ ಕೂಡ ಕ್ರಮಕೈಗೊಂಡು 25 ಸಾವಿರ ರೂ.ದಂಡ ವಿಧಿಸುತ್ತದೆ ಇದ್ರ ಜೊತೆಗೆ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಕೂಡ ಕ್ಯಾನ್ಸಲ್ ಆಗತ್ತೆ.
- ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅಗತ್ಯವಾದ ದಾಖಲಾತಿಗಳನ್ನು ನಿರ್ದಿಷ್ಟ ಅವಶ್ಯಕತೆಗಳೊಂದಿಗೆ ಸುವ್ಯವಸ್ಥಿತಗೊಳಿಸಲಾಗಿದೆ. ಇದರರ್ಥ ಸಚಿವಾಲಯವು ಅರ್ಜಿದಾರರಿಗೆ ಅವರು ಪಡೆಯಲು ಬಯಸುತ್ತಿರುವ ಪರವಾನಗಿಯ ಪ್ರಕಾರಕ್ಕೆ ಅಗತ್ಯವಿರುವ ನಿರ್ದಿಷ್ಟ ದಾಖಲೆಗಳನ್ನು ಮುಂಚಿತವಾಗಿ ತಿಳಿಸುತ್ತೆ ಕೂಡ.
- ಪರಿಸರಕ್ಕೆ ಹಾನಿ ಮಾಡೋ ಅಂದ್ರೆ ಸಚಿವಾಲಯವು 9 ಸಾವಿರ ಹಳೆಯ ಸರ್ಕಾರಿ ವಾಹನಗಳನ್ನ ಹಂತಹಂತವಾಗಿ ತೆಗೆದುಹಾಕೋದ್ರ ಜೊತೆಗೆ ಇತರೆ ವಾಹನಗಳಿಂದ ಬರೋ ಹೊಗೆಯ ಗುಣಮಟ್ಟವನ್ನು ಸುಧಾರಿಸೋಕೆ ಪ್ಲ್ಯಾನ್ ಮಾಡುತ್ತಿದೆ.
- ಚಾಲನಾ ಪರವಾನಗಿಗಾಗಿ ಅರ್ಜಿ ಪ್ರಕ್ರಿಯೆಯು ಒಂದೇ ಆಗಿರುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿದಾರರು ತಮ್ಮ ಅರ್ಜಿಯನ್ನು https://parivahan.gov.in/. ಇಲ್ಲಿ ಸಲ್ಲಿಸಬಹುದು.ಅಥವಾ ಆರ್‌ಟಿಓಗಳನ್ನ ಭೇಟಿ ಮಾಡಿ ಕೈಯಿಂದ ಅಪ್ಲಿಕೇಷನ್ ತುಂಬಿ ಅರ್ಜಿ ಕೊಡಬಹುದು.
ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣ ದಿಕ್ಕು ತಪ್ಪುತ್ತಿದೆ, ಸಾಕ್ಷಿ ನಾಶ ಸಾಧ್ಯತೆ – ವಕೀಲ ಸಿ ಎಚ್. ಹನುಮಂತರಾಯ ಆರೋಪ