– ಸಂಧ್ಯಾ ಸೊರಬ
ಬಿಜೆಪಿಯ ಭದ್ರ ಕೋಟೆ ಎಂದೇ ಬಿಂಬಿತವಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.ಕರ್ನಾಟಕದ ಮೊದಲನೇ ಹಂತದ ಮತದಾನದ ಕ್ಷೇತ್ರಗಳಲ್ಲೊಂದಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಅಳೆದುತೂಗಿ ಲೆಕ್ಕಾಚಾರದಡಿ ಕಾಂಗ್ರೆಸ್ ಜಯಪ್ರಕಾಶ್ ಹೆಗಡೆಯನ್ನು ಕಣಕ್ಕಿಳಿಸಿದರೆ, ಇತ್ತ ಬಿಜೆಪಿ ಜಾತಿ ಲೆಕ್ಕಾಚಾರವನ್ನೇ ಮುಖ್ಯವಾಗಿಟ್ಟುಕೊಂಡು ವಿಧಾನಪರಿಷತ್ತಿನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಗೆ ಟಿಕೇಟ್ ನೀಡಿದೆ. ಈ ಹಿಂದೆ ಕ್ಷೇತ್ರವನ್ನು ಶೋಭಾ ಕರಂದ್ಲಾಜೆ ಪ್ರತಿನಿಧಿಸಿ 2019ರಲ್ಲೇ ಅಲ್ಲಿಂದ ಗೋಬ್ಯಾಕ್ ಆಗಿ ಬೆಂಗಳೂರು ಉತ್ತರಕ್ಕೆ ಬಂದಿದ್ದಾರೆ. ಈ ಬಾರಿ 2024ರಲ್ಲಿ ಬಿಜೆಪಿ ಹಳೆಯ ರಿಸ್ಕ್ ಅನ್ನು ತೆಗೆದುಕೊಳ್ಳುವ ಸಾಹಸಕ್ಕೆ ಹೋಗದೇ ಅಭ್ಯರ್ಥಿಯನ್ನು ಬದಲಾಯಿಸಿತು. ಸಿ.ಟಿ. ರವಿ, ಪ್ರಮೋದ್ ಮಧ್ವರಾಜ್ ಆಕಾಂಕ್ಷಿಗಳಾಗಿದ್ದರೂ ಒಬ್ಬರ ಆಯ್ಕೆ ಮಾಡಿದರೆ ಮತ್ತೊಂದು ಕಡೆ ವಿರೋಧ ವ್ಯಕ್ತವಾದರೂ ಜಾಣ ನಡೆ ಅನುಸರಿಸಲಾಗಿದೆ. ಜಾತಿ ಲೆಕ್ಕಾಚಾರದ ಜೊತೆ ಸಂಘಪರಿವಾರದ ಬೆಂಬಲ ಇರುವುದರಿಂದಲೇ ಕೋಟಾ ಶ್ರೀನಿವಾಸ ಪೂಜಾರಿಯನ್ನು ಬಿಜೆಪಿ ಕಕ್ಕಿಳಿಸಿದೆ. ಇನ್ನು ಶ್ರೀನಿವಾಸಪೂಜಾರಿ ಹಾಗೂ ಜಯಪ್ರಕಾಶ್ ಹೆಗಡೆ ಈ ಹಿಂದೆ ಬ್ರಾಹ್ಮವರ ವಿಧಾನಸಭಾ ಕ್ಷೇತ್ರವಿದ್ದಾಗ ಈ ಇಬ್ಬರೂ ಎರಡು ಚುನಾವಣೆಗಳಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಈಗ ಬರೋಬ್ಬರಿ ದಶಕಗಳ ನಂತರ ಉಡುಪಿ-ಚಿಕ್ಕಮಗಳೂರು ಕಣದಲ್ಲಿ ಮುಖಾಮುಖಿಯಾಗಿದ್ದಾರೆ.
ಈ ಹಿಂದೆ ಈ ಕ್ಷೇತ್ರದ ಉಡುಪಿ ಹಾಗೂ ಚಿಕ್ಕಮಗಳೂರು ಎರಡೂ ಒಂದೇ ಆಗಿರದೇ ಎರಡೂ ಪ್ರತ್ಯೇಕ ಲೋಕಸಭಾ ಸಂಸದೀಯ ಕ್ಷೇತ್ರಗಳಾಗಿದ್ದವು. ಬಳಿಕ 2008 ರಲ್ಲಿ ಆದಂತಹ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಇವು ತಮ್ಮ ಜಂಟಿ ಅಸ್ತಿತ್ವವನ್ನು ಕಳೆದುಕೊಂಡು, ಉಡುಪಿ ಹಾಗೂ ಚಿಕ್ಕಮಗಳೂರು ಈ ಎರಡೂ ಜಿಲ್ಲೆಗಳ ನಾಲ್ಕು-ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ “ಉಡುಪಿ-ಚಿಕ್ಕಮಗಳೂರು” ಲೋಕಸಭಾ ಕ್ಷೇತ್ರವೆಂಬ ಹೊಸ ಸಂಸತ್ ಕ್ಷೇತ್ರ ಹುಟ್ಟಿಕೊಂಡಿತು.ಅಲ್ಲದೇ ಪಶ್ಚಿಮದ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಮೇಲಿನ ಮಲೆನಾಡು ಪ್ರದೇಶಗಳು ಈ ಲೋಕಸಭಾ ಕ್ಷೇತ್ರದಲ್ಲಿ ಸೇರಿಕೊಂಡು ಈ ಕ್ಷೇತ್ರದ ರಚನೆಯಾಯಿತು. ಆದ್ದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕರಾವಳಿ ಮತ್ತು ಮಲೆನಾಡು ಭಾಗಗಳ ಸೀಮೆಗಳನ್ನೊಳಗೊಂಡ ಮಿಶ್ರಿತ ಕ್ಷೇತ್ರವಾಗಿದೆ.
ಇನ್ನೊಂದು ವಿಶೇಷವೇನೆಂದರೆ, ಉಡುಪಿ ಮೂರನೇ ಬಾರಿಗೆ ತನ್ನ ಕ್ಷೇತ್ರವ್ಯಾಪ್ತಿಯನ್ನು ಬದಲಾಯಿಸಿಕೊಂಡಿದ್ದಾಗಿದೆ. 1952ರಲ್ಲಿ ನಡೆದ ದೇಶದ ಮೊತ್ತಮೊದಲ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಎಂಬ ಕ್ಷೇತ್ರವೇ ಇದ್ದಿರಲಿಲ್ಲ. ಆಗ ಅಂದಿನ ಮದರಾಸು ರಾಜ್ಯಕ್ಕೆ ಸೇರಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ (ಉತ್ತರ) ಹಾಗೂ ದಕ್ಷಿಣ ಕನ್ನಡ (ದಕ್ಷಿಣ) ಎಂದು ವಿಭಜಿಸಲಾಗಿತ್ತು.ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಹಾಗೂ ಮುಲ್ಕಿ ವಿಧಾನಸಭಾ ಕ್ಷೇತ್ರಗಳು ಸೇರಿ ಅಂದು ದಕ್ಷಿಣ ಕನ್ನಡ (ಉತ್ತರ) ಕ್ಷೇತ್ರ ರಚನೆ ಯಾಗಿತ್ತು. 1952ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಇದರ ಸದಸ್ಯರಾಗಿ ಆಯ್ಕೆಯಾಗಿದ್ದರು. ದಕ್ಷಿಣ ಕನ್ನಡ (ದಕ್ಷಿಣ)ಕ್ಕೆ ಕಾಂಗ್ರೆಸ್ನ ಬಿ.ಶಿವರಾವ್ ಸದಸ್ಯರಾಗಿದ್ದರು.
1957ರ ಲೋಕಸಭಾ ಚುನಾವಣೆ ವೇಳೆ ಕರಾವಳಿ ಪ್ರದೇಶ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡು ಉಡುಪಿ ಎಂಬ ಲೋಕಸಭಾ ಕ್ಷೇತ್ರ ಉದಯವಾಯಿತು. 1957ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಪಿಎಸ್ಪಿಯ ಮೋಹನ್ ರಾವ್ರನ್ನು ಸೋಲಿಸಿ ಉಡುಪಿಯ ಮೊದಲ ಅಧಿಕೃತ ಸಂಸದರಾಗಿ ಆಯ್ಕೆಯಾದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಮೋಹನ್ರಾವ್ ಅವರನ್ನೇ ಮತ್ತೆ ಸೋಲಿಸಿ ಮೂರನೇ ಬಾರಿಗೆ ಉಡುಪಿ ಕ್ಷೇತ್ರದ ಸಂಸದರಾದರು.
1967ರಲ್ಲಿನ ನಡೆದ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿಯ ಜೆ.ಎಂ.ಲೋಬೊ ಪ್ರಭು ಗೆಲವು ಸಾಧಿಸಿ ಕಾಂಗ್ರೆಸ್ ಎದುರಾಳಿ ಎಸ್.ಎಸ್. ಕೊಳ್ಳೆಬೈಲ್ ಅವರನ್ನು ಸೋಲಿಸಿದರು. ಬಳಿಕ 1971ರಲ್ಲಿ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದ ಪಿ.ರಂಗನಾಥ್ ಶೆಣೈ ಗೆಲುವು ಪಡೆದುಕೊಂಡು, ಜೆ.ಎಂ.ಲೋಬೊ ಪ್ರಭುರನ್ನು ಸೋಲಿಸಿದರು. 1977ರಲ್ಲಿ ಕಾಂಗ್ರೆಸ್ನ ತೋನ್ನೆ ಅನಂತ ಪೈ ಅಥವಾ ಟಿ.ಎ.ಪೈ ಗೆದ್ದು, ಬಿಎಲ್ಡಿಯ ಡಾ.ವಿ.ಎಸ್.ಆಚಾರ್ಯರನ್ನು ಸೋಲಿಸಿದರು.
ಬಳಿಕ 1957ರ ಲೋಕಸಭಾ ಚುನಾವಣೆ ವೇಳೆ ಕರಾವಳಿ ಪ್ರದೇಶ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡು ಉಡುಪಿ ಎಂಬ ಲೋಕಸಭಾ ಕ್ಷೇತ್ರ ಉದಯವಾಯಿತು. ಇದೇ ವರ್ಷ ಅಂದರೆ, 1957ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಪಿಎಸ್ಪಿಯ ಮೋಹನ್ರಾವ್ ಅವರನ್ನು ಸೋಲಿಸಿ ಉಡುಪಿಯ ಮೊದಲ ಅಧಿಕೃತ ಸಂಸದರಾಗಿ ಆಯ್ಕೆಯಾದರು. 1962 ನಡೆದ ಮುಂದಿನ ಚುನಾವಣೆಯಲ್ಲಿ ಮೋಹನ್ರಾವ್ ಅವರನ್ನೇ ಮತ್ತೆ ಸೋಲಿಸಿ ಸತತ ಮೂರು ಬಾರಿ ಉಡುಪಿ ಕ್ಷೇತ್ರದ ಸಂಸದರಾಗಿ ಉಳ್ಳಾಲ ಶ್ರೀನಿವಾಸ ಮಲ್ಯ ಆಯ್ಕೆಯಾದರು.
ಇದನ್ನು ಓದಿ : ಕೇರಳ ಇನ್ನೊಂದು ಟ್ರೆಂಡ್ ಮುರಿಯುವುದೇ?
1967 ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿಯ ಜೆ.ಎಂ.ಲೋಬೊ ಪ್ರಭು, ತನ್ನ ಕಾಂಗ್ರೆಸ್ ಎದುರಾಳಿ ಎಸ್.ಎಸ್. ಕೊಳ್ಳೆಬೈಲ್ ಅವರನ್ನು ಹಿಂದೆ ನಡೆಯುವಂತೆ ಮಾಡಿದರು. 1971ರಲ್ಲಿ ಪಿ.ರಂಗನಾಥ್ ಶೆಣೈ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಮಡಿಲಿಗೆ ಹಾಕಿ, ಜೆ.ಎಂ.ಲೋಬೊ ಪ್ರಭು ಅವರನ್ನು ಹಿಮ್ಮೆಟ್ಟಿಸಿದರು. 1977ರಲ್ಲಿ ಕಾಂಗ್ರೆಸ್ನ ತೋನ್ನೆ ಅನಂತ ಪೈ (ಟಿ.ಎ.ಪೈ) ಅವರು ಬಿಎಲ್ಡಿಯ ಡಾ.ವಿ.ಎಸ್.ಆಚಾರ್ಯರನ್ನು ಯಶಸ್ವಿಯಾದರು.
1978ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಪುನಃ ಬದಲಾಯಿತು. ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು ವಿಧಾನಸಭಾ ಕ್ಷೇತ್ರಗಳೊಂದಿಗೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುರತ್ಕಲ್ ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳಳನ್ನು ಉಡುಪಿ ಲೋಕಸಭಾ ವ್ಯಾಪ್ತಿಗೆ ಸೇರಿಸಲಾಯಿತು., 1980, 1984, 1989, 1991, 1996 ಈ ಐದು ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಸ್ಕರ್ ಫೆರ್ನಾಂಡೀಸ್ ಸತತವಾಗಿ ಜಯಭೇರಿ ಬಾರಿಸಿದರು. ಈ ಚುನಾವಣೆಗಳಲ್ಲಿ ಅವರು ಕ್ರಮವಾಗಿ ಜನತಾ ಪಕ್ಷದ ಡಾ.ವಿ.ಎಸ್. ಆಚಾರ್ಯ, ಬಿಜೆಪಿಯ ಕೆ.ಎಸ್.ಹೆಗ್ಡೆ ಜನತಾ ದಳದ ಎಂ.ಸಂಜೀವ, ಬಿಜೆಪಿಯ ರುಕ್ಕಯ್ಯ ಪೂಜಾರಿ ಹಾಗೂ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ಅವರನ್ನು ಸೋಲಿಸಿದ್ದರು.
ಬದಲಾದ ರಾಜಕೀಯ ಘಟ್ಟದಲ್ಲಿ 19980 ಐ.ಎಂ.ಜಯರಾಮ ಚುನಾವಣೆಯಲ್ಲಿ ಬಿಜೆಪಿಯ ಶೆಟ್ಟಿ, ಕಾಂಗ್ರೆಸ್ ಆಸ್ಕರ್ ಫೆರ್ನಾಂಡೀಸ್ರನ್ನು ಸೋಲಿಸುವ ಮೂಲಕ ಬಿಜೆಪಿಗೆ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ಬಿಟ್ಟುಕೊಡುವಂತಾಯಿತು 1999 ರ ಒಂದೇ ವರ್ಷದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿನಯ ಕುಮಾರ್ ಸೊರಕೆ, ಐ.ಎಂ.ಜಯರಾಮ ಶೆಟ್ಟಿ ಅವರನ್ನು ಸೋಲಿಸುವ ಸೋಲಿಸುವ ಮೂಲಕ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ನ ಮಡಿಲಿಗೆ ಹಾಕಿದರು.
ಆದರೆ 2004ರ ಚುನಾವಣೆಯ ವೇಳೆ ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿದ ಮನೋರಮಾ ಮಧ್ವರಾಜ್, ವಿನಯಕುಮಾರ್ ಸೊರಕೆ ಅವರನ್ನು ಹಿಮ್ಮೆಟ್ಟಿಸಿದ್ದರಿಂದ ಕ್ಷೇತ್ರ ಮತ್ತೆ ಬಿಜೆಪಿಗೆ ಹೋಗುವಂತಾಯಿತು. ಇನ್ನು 2009ರಲ್ಲಿ ನಡೆದ ಚುನಾವಣೆಯಲ್ಲಿ ಉಡುಪಿ ಲೋಕಸಭಾ ಕ್ಷೇತ್ರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ವ್ಯಾಪ್ತಿಯನ್ನು ಮತ್ತೊಮ್ಮೆ ಬದಲಾಯಿಸಿಕೊಳ್ಳುವಂತಾಯಿತುಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎನ್ನುವ ಹೊಸ ಲೋಕಸಭಾ ಕ್ಷೇತ್ರದ ರಚನೆಯಾಯಿತು.
ಇತೆ ಚಿಕ್ಕಮಗಳೂರು ಕ್ಷೇತ್ರದ ಇತಿಹಾಸವನ್ನು ಅವಲೋಕಿಸುವುದಾದರೆ, ಚಿಕ್ಕಮಗಳೂರು ಇದು ಸಹ ತನ್ನ ವ್ಯಾಪ್ತಿಯನ್ನು ಎರಡು ಬಾರಿ ಬದಲಾಯಿಸಿಕೊಂಡಿದೆ. 1952ರಲ್ಲಿ ಮೈಸೂರು ರಾಜ್ಯದಲ್ಲಿ ಹಾಸನ-ಚಿಕ್ಕಮಗಳೂರು ಎಂಬುದು ಈ ಕ್ಷೇತ್ರದ ಹೆಸರಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಎಚ್.ಸಿದ್ಧನಂಜಪ್ಪ ಎಂಬವರು ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. 1957 ಹಾಗೂ 19620 ಚುನಾವಣೆಯಲ್ಲೂ ಅವರೇ ಗೆದ್ದು ಕ್ಷೇತ್ರವನ್ನು ಪ್ರತಿನಿಧಿಸಿದರು.
ಆದರೆ, 1967ರ ಲೋಕಸಭಾ ಚುನಾವಣಾ ವೇಳೆಗೆ ಇದನ್ನು ವಿಭಾಗಿಸಿ ಚಿಕ್ಕಮಗಳೂರು ಹಾಗೂ ಹಾಸನವನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನಾಗಿ ಮಾಡಲಾಯಿತು. 1967ರ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ (ಪಿಎಸ್ಪಿ) ಎಂ.ಹುಚ್ಚೇಗೌಡರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಸಂಸತ್ ಸದಸ್ಯರೆನಿಸಿದರು.
1971ರಲ್ಲಿ ಡಿ.ಬಿ.ಚಂದ್ರೇಗೌಡ ಕಾಂಗ್ರೆಸ್ನಿಂದ ಸಂಸತ್ ಸದಸ್ಯರಾದರೆ, 1977ರಲ್ಲಿ ಮತ್ತೊಮ್ಮೆ ಅವರೇ ಜಯಗಳಿಸಿದ್ದಲ್ಲದೇ 1978ರಲ್ಲಿ ತನ್ನ ಸ್ಥಾನವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಗಾಗಿ ತೆರವು ಮಾಡಿದರು. 1978ರಲ್ಲಿ ನಡೆದ ಪ್ರಸಿದ್ಧ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಐತಿಹಾಸಿಕ ಜಯ ಪಡೆದರು.
1980ರಲ್ಲಿ ಕಾಂಗ್ರೆಸ್ನ ಡಿ.ಎಂ.ಪುಟ್ಟೇಗೌಡ, 1984ರಲ್ಲಿ ಡಿ.ಕೆ. ತಾರಾದೇವಿ, 1989ರಲ್ಲಿ ಮತ್ತೆ ಡಿ.ಎಂ.ಪುಟ್ಟೇಗೌಡ, 1991ರಲ್ಲಿ ಮತ್ತೆ ಡಿ.ಕೆ.ತಾರಾದೇವಿ ಜಯ ಪಡೆದರೆ, 1996ರಲ್ಲಿ ಬಿ.ಎಲ್.ಶಂಕರ್ ಅವರ ಮೂಲಕ ಜನತಾದಳ ಇಲ್ಲಿ ಜಯ ದಾಖಲಿಸಿತು. 1998ರ ಬಳಿಕ ಕ್ಷೇತ್ರ ಬಿಜೆಪಿ ಕೈವಶವಾಯಿತು. ಡಿ.ಸಿ.ಶ್ರೀಕಂಠಪ್ಪ ಅವರ ಮೂಲಕ ಬಿಜೆಪಿ ಇಲ್ಲಿ 1998, 1999, 2004ರಲ್ಲಿ ಜಯಭೇರಿ ಬಾರಿಸಿತು. 2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡು ಉಡುಪಿಯೊಂದಿಗೆ ಸೇರಿಕೊಂಡಿತು.2008ರಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ವಿಧಾನಸಭಾ ಕ್ಷೇತ್ರವೇ ಅಳಿದು ಹೋಯಿತು. ಮತ್ತೊಂದೆಡೆ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದೊಂದಿಗೆ ಸೇರಿಕೊಂಡಿತು. ಹಾಗೆಯೇ ಚಿಕ್ಕಮಗಳೂರಿನ ಕಡ ಕ್ಷೇತ್ರ ವನ್ನು ಹಾಸನದೊಂದಿಗೆ ಸೇರ್ಪಡೆಗೊಳಿಸಲಾಯಿತು.ಹಳೆಯ ಚುನಾವಣೆಯ ಪಟ್ಟಿ ಲಗತ್ತಿಸುವುದು.
ಇದನ್ನು ನೋಡಿ : ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!