ಸ್ವಾಮೀಜಿಗಳು ಮತ್ತು ರಾಜಕೀಯ ಹಾಗೂ ಸಮಾಜ

 

– ವಿಶೇಷ ವರದಿ: ಸಂಧ್ಯಾ ಸೊರಬ
ಸ್ವಾಮೀಜಿಗಳಿಗಾಗಿರಬಹುದು, ಅವಧೂತ ಎಂದನಿಸಿಕೊಂಡವರಿಗಿರಬಹುದು, ಸಮಾಜದಲ್ಲಿ ಅವರವರಿಗೆ ಆದಂತಹ ಪ್ರತ್ಯೇಕ ಸ್ಥಾನವಿದೆ. ಸಮಾಜವನ್ನು ತಿದ್ದುವ, ಬುದ್ಧಿಹೇಳುವ, ಸಮಾಜದ ಪ್ರಜ್ಞೆಗಳನ್ನು ಸರಿದಾರಿಗೆ ತರುವ ಜವಾಬ್ದಾರಿ ಅವರ ಮೇಲಿದೆ. ಈಗ ಬಹುತೇಕ ಸಮುದಾಯಗಳಿಗೆ ಜಾತಿ, ಧರ್ಮಗಳಿಗೆ ತಮ್ಮದೇ ಆದ ಸ್ವಾಮೀಜಿ, ಗುರುಗಳು ಇದ್ದಾರೆ. ಅವರಲ್ಲಿ ಒಂದಿಷ್ಟು ಜನ ಬೂದಿ ಮುಚ್ಚಿದ ಕೆಂಡದಂತೆ ಇದ್ದಾರೆ. ಇನ್ನು ಕೆಲವರು ಆಗಾಗ ಆ ಪಕ್ಷಕ್ಕೆ ಬೆಂಬಲ ಸೂಚಿಸಿಯೋ ಅಥವಾ ಮತ್ತು ತಮ್ಮ-ತಮ್ಮ ಸಮುದಾಯದ ನಾಯಕರಿಗೆ ಆ ಸ್ಥಾನ ನೀಡಿಲ್ಲ, ಈ ಸ್ಥಾನ ನೀಡಿಲ್ಲ ಎಂದೆಲ್ಲಾ ಪ್ರತಿಭಟಿಸಿದ ಹೇಳಿಕೆ ನೀಡಿದ ಅದೆಷ್ಟೋ ಉದಾಹರಣೆಗಳಿವೆ.

ಅದು ಸರಿ ರಾಜಕೀಯದಲ್ಲಿ ತಮ್ಮ ಸಮುದಾಯವನ್ನು ಪ್ರಾತಿನಿಧ್ಯಗೊಳಿಸಬೇಕು, ತಮ್ಮತಮ್ಮ ಮಠ ಅದುದಾನಕ್ಕೆ ಅನುದಾನ ಬರಬೇಕು, ಆ ಕೆಲಸ ಈ ಕೆಲಸ ಆಗಬೇಕು ಎಂದೆಲ್ಲಾ ಬೆಂಬಲಿಸುವುದು ಸರಿ. ಆದರೆ, ಖುದ್ದಾಗಿ ಅವರೇ ರಾಜಕೀಯ ಅಖಾಡಕ್ಕೆ ಪ್ರವೇಶಿಸುತ್ತೇನೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಅನ್ನೋದು ಗೊತ್ತಾಗುತ್ತಿಲ್ಲ.

ಸಂಘಪರಿವಾರದ ಬೆಂಬಲದಿಂದ ಬಿಜೆಪಿ, ದಕ್ಷಿಣದ ಹೆಬ್ಬಾಗಿಲು ಕರ್ನಾಟಕದಲ್ಲಿ ಯೋಗಿ ಆದಿತ್ಯನಾಥರಂತವರನ್ನು ಹುಡುಕಬೇಕು ಎಂದೆಲ್ಲಾ ಈ ಹಿಂದೆ ಪ್ಲ್ಯಾನ್‌ ಮಾಡಿತ್ತಾದರೂ ಇದೂವರೆಗೂ ಅದು ಕೈಗೂಡಿಲ್ಲ. ಇದನ್ನೀಗ ಕಾಂಗ್ರೆಸ್‌ ವರ್ಕೌಟ್‌ ಮಾಡಲು ಸ್ವಾಮೀಜಿಯೊಬ್ಬರನ್ನು ಲಿಂಗಾಯತ ಮತಗಳನ್ನು ತನ್ನತ್ತ ಸೆಳೆಯಲು ಏಪ್ರಿಲ್‌ 12 ರನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ ಎಂಬುದೀಗ ಬಹಿರಂಗವಾಗಿದೆ.

ಅದು ಒಂದುಕಡೆ ಇರಲೀ, ಇಲ್ಲಿ ಮುಖ್ಯವಾಗಿ ಸಮಾಜದಲ್ಲಿ ರಾಜಕೀಯ ಇಲ್ಲದೇ ಜೀವನವೇ ಇಲ್ಲ.ರಾಜಕೀಯವನ್ನು ಎಷ್ಟರಮಟ್ಟಿಗೆ ಯಾವುದಕ್ಕಾಗಿ ಮಾಡುತ್ತಾರೆ ಎನ್ನುವುದು ಬೇರೆ. ಹಿಂದೆ ರಾಜಕೀಯದಿಂದ ದೂರನೇ ಉಳಿದ ಅದೇಷ್ಟೋ ಮಹಾನ್‌ ಎನಿಸಿಕೊಂಡಿರುವ ಸ್ವಾಮೀಜಿಗಳಿಗೆ ಗುರುಸ್ಥಾನದಲ್ಲಿದ್ದು ಸಲಹೆ ನೀಡಿದ್ದವರು ಚೇತನವಾಗಿ ನಮ್ಮನಿಮ್ಮ ನಡುವೆ ಇದ್ದೂಹೋಗಿದ್ದಾರೆ. ಕೆಲವರೂ ಈಗಲೂ ಇದ್ದಾರೆ. ಜಾತಿ, ರಾಜಕಾರಣ ಸಮುದಾಯ ಈ ವಿಷಯಗಳಿಂದ ದೂರನೇ ಉಳಿದು ಸಮಾಜಯೋಗಿಯಂತೆ ಸೇವೆ ಸಲಹೆ ನೀಡುತ್ತಿರುವವರೂ ಇದ್ದಾರೆ.

ಯಾರ್ಯಾರನ್ನೋ ಕೈಬೀಸಿ ಆಕರ್ಷಿಸಿ ಇನ್ಯಾವುದೋ ಲಾಭಕ್ಕೋ, ಅಧಿಕಾರಕ್ಕೋ ಮಠಮಾನ್ಯ, ದೇವಸ್ಥಾನ ಗುಡಿ, ಚರ್ಚ್‌, ಮಂದಿರಗಳಾದಿಯಂತಹ ಪೂಜಾಕೈಂಕರ್ಯ ನಡೆಯುವ ಸ್ಥಳಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು, ರಾಜಕಾರಣದತ್ತ ಬಲವಂತವಾಗಿಯೋ, ಮತ್ತೇನಕ್ಕೋ ಸೆಳೆಯುವುದೋ ಅಥವಾ ಅವರೇ ಹೋಗುವುದು ಎಷ್ಟರಮಟ್ಟಿಗೆ ಸರಿ? ಸಮಾಜದಲ್ಲಿ ಇಂತಹವರಿಂದ ಸಿಗುವ ಸಂದೇಶವಾದರೂ ಏನು? ಸಮಾಜ ಎನ್ನುವುದು, ಯಾವುದೇ ಒಂದು ಜಾತಿ, ಧರ್ಮ, ಸಮುದಾಯ ಇತ್ಯಾದಿಗೆ ಸೀಮಿತವಾದುದ್ದಲ್ಲ. ಇದರ ಪರಿವ್ಯಾಪ್ತಿ ವಿಸ್ತಾರ. ಇಂತಹ ವಿಸ್ತಾರತೆ ಮನುಕುಲದ ಸಮಾಜದಲ್ಲಿ ತಮ್ಮದೇ ಒಂದು ವೋಟ್‌ ಬ್ಯಾಂಕಿಗಾಗಿ ಅಧಿಕಾರಕ್ಕಾಗಿಯೋ ಸಂಕುಚಿತ ಸಮಾಜವನ್ನು ಸೃಷ್ಟಿಮಾಡುತ್ತಿರುವವರಿಗೂ ಇತ್ತ ಸಾಗುತ್ತಿರುವವರಿಗೂ ಏನು ಹೇಳಬೇಕು ಗೊತ್ತಿಲ್ಲ. ಇದು ಪ್ರಜ್ಙಾವಂತರ ಪ್ರಶ್ನೆ? ಎಂಬುದಂತೂ ಸುಳ್ಳಲ್ಲ.

ಒಂದುವೇಳೆ ಯಾವುದೇ ಸ್ವಾಮೀಗಳಾಗಲೀ ಸಮಾಜದಲ್ಲಿ ಧಾರ್ಮಿಕ ಗುರು ಎಂದನಿಸಿಕೊಂಡವರಾಗಲೀ, ರಾಜಕಾರಣದಲ್ಲಿ ಅದ್ಯಾವುದನ್ನೋ ಪ್ರತಿನಿಧಿಸಿಯೋ, ಮತಗಳ ವಿಭಜನೆಗೆ ಸ್ಪರ್ಧಿಸಿದರು, ಗೆದ್ದರು ಎಂದುಕೊಳ್ಳಿ. ಸಮಾಜಕ್ಕೆ ಹೋಗುವ ಸಂದೇಶವಾದರೂ ಏನು?ಇಂತಹ ಜನಪ್ರತಿನಿಧಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?ಯಾವ ನ್ಯಾಯ ಸಾಧ್ಯ? .ಇವರ ಮೇಲಾಗುವ ಒತ್ತಡ ಇನ್ಯಾವ ಪರಿಯದ್ದಾಗಿರಬಹುದು?ಪರಿಣಾಮ ಏನಿರಬಹುದು? ಕಾಲವೇ ಉತ್ತರಿಸಲಿದೆ.

 

Donate Janashakthi Media

Leave a Reply

Your email address will not be published. Required fields are marked *