ರಾಜ್ಯ ಶಿಕ್ಷಣ ನೀತಿ | ಆಯೋಗಕ್ಕೆ ಸಮೀಕ್ಷಾ ವರದಿ ಸಲ್ಲಿಸಿದ ಎಐಎಸ್‌ಇಸಿ

ಬೆಂಗಳೂರು: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ)ಯ ಕರ್ನಾಟಕ ವಿಭಾಗವು “ಜನಪರ ಶಿಕ್ಷಣ ನೀತಿ” ಕರಡು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ(NEP)ಯ ಸಮೀಕ್ಷಾ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅವರಿಗೆ ಬುಧವಾರ ಸಲ್ಲಿಸಿದೆ. ಸಮಿತಿಯು ರಾಜ್ಯದ 24 ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಸುಮಾರು 3,000 ಪ್ರತಿಸ್ಪಂದಕರ ಜೊತೆಗೆ ಈ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯ ಪ್ರತಿಸ್ಪಂದಕರಲ್ಲಿ ರಾಜ್ಯದ ನಗರ ಮತ್ತು ಗ್ರಾಮಗಳ ಸರ್ಕಾರಿ, ಖಾಸಗಿ ಮತ್ತು ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿದ್ದಾರೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ ಒಟ್ಟು ಜನರಲ್ಲಿ 94.5% ರಷ್ಟು ಜನರು ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಹಿಂಪಡೆಯಲು ಬಯಸುತ್ತಾರೆ ಎಂದು ವರದಿಯು ಹೇಳಿದೆ. ರಾಜ್ಯ ಶಿಕ್ಷಣ ನೀತಿ

ಬಡ, ಗ್ರಾಮೀಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನವನ್ನು ಸ್ವೀಕರಿಸುವವರು ಹೆಚ್ಚು ಹೆಚ್ಚು ಪ್ರವೇಶ ಪಡೆಯಲು ‘ಕೇಂದ್ರೀಕೃತ ಪ್ರವೇಶ ಪ್ರಕ್ರಿಯೆ’ ಹಾಗೂ ‘ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ’ (UUCMS) ರದ್ದುಗೊಳಿಸಬೇಕು ಎಂದು ಸಮೀಕ್ಷೆಗೆ ಒಳಪಟ್ಟವರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿದೆ. ರಾಜ್ಯ ಶಿಕ್ಷಣ ನೀತಿ

ಇದನ್ನೂ ಓದಿ: ಉತ್ತರ ಪ್ರದೇಶ | ಅಪರಿಚಿತ ವ್ಯಕ್ತಿಗಳಿಂದ ತಾಯಿ, ಮಗಳ ಮೇಲೆ ಆಸಿಡ್ ದಾಳಿ!

ಅಲ್ಲದೆ, ಡ್ರಾಪ್ಔಟ್ ಮತ್ತು ನಿರುದ್ಯೋಗ ಬಿಕ್ಕಟ್ಟನ್ನು ಉದಾಹರಿಸಿರುವ ವರದಿಯು, ಎನ್ಇಪಿ ಅಡಿಯಲ್ಲಿ ಯಾವಾಗ ಬೇಕಾದರೂ ಪ್ರವೇಶಾತಿ ಮತ್ತು ಯಾವ ಸಮಯದಲ್ಲಿ ಬೇಕಾಗದರೂ ನಿರ್ಗಮನ ಆಯ್ಕೆಗಳನ್ನು ಹಿಂತೆಗೆದುಕೊಳ್ಳುವಂತೆ ಸಮೀಕ್ಷೆಗೆ ಒಳಪಟ್ಟವರು ಒತ್ತಾಯಿಸಿದ್ದಾರೆ ಎಂದು ಅದು ಹೇಳಿದೆ.

ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ ಎಐಎಸ್‌ಇಸಿ ರೂಪಿಸಿದ ನೀತಿಯು ಪ್ರಜಾಸತ್ತಾತ್ಮಕ, ವೈಜ್ಞಾನಿಕ ಮತ್ತು ಜಾತ್ಯತೀತ ಶಿಕ್ಷಣಕ್ಕೆ ಕರೆ ನೀಡುತ್ತದೆ. ಶಿಕ್ಷಣಕ್ಕಾಗಿ ಕೇಂದ್ರದ 10% ಮತ್ತು ರಾಜ್ಯ ಬಜೆಟ್‌ನ 30% ದಷ್ಟು ಮೀಸಲಿಡಬೇಕು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪರೀಕ್ಷೆ, ಮೌಲ್ಯಮಾಪನ, ಟ್ಯಾಬ್ಯುಲೇಷನ್ ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳ ಹೊರಗುತ್ತಿಗೆಯನ್ನು ನಿಲ್ಲಿಸಬೇಕು ಎಂದು ಅದು ಹೇಳಿದೆ.

“ಪಠ್ಯಪುಸ್ತಕಗಳು ಎಂದಿಗೂ ಪಕ್ಷದ ಪುಸ್ತಕವಾಗಬಾರದು. ವೈಜ್ಞಾನಿಕವಾಗಿ ಸಾಬೀತಾಗಿರುವ ಸಂಗತಿಗಳು, ಅಂತರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಸಿದ್ಧಾಂತಗಳು, ಸಮಾಜದ ಪ್ರಗತಿಗೆ ಸಹಾಯ ಮಾಡುವ ವಿಚಾರಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಮಾತ್ರ ಇರುಬೇಕು” ಎಂದು ನೀತಿ ಹೇಳಿದೆ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ | ಶಂಕರಾಚಾರ್ಯರ ನಿರ್ಧಾರ

2021 ರ ವೇಳೆ ಬಿಜೆಪಿಯ ಆಡಳಿತದ ಸಮಯದಲ್ಲಿ ರಾಜ್ಯದಲ್ಲಿ NEP-2020 ಅನ್ನು ದೇಶದಲ್ಲೆ ಮೊದಲ ಬಾರಿಗೆ ಜಾರಿ ಮಾಡಲಾಗಿತ್ತು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರ ಈ ನೀತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿತ್ತು ಮತ್ತು “ಹೆಚ್ಚು ಸಮಾನ, ಎಲ್ಲರಿಗೂ ಪಡೆಯಬಹುದಾದ ಮತ್ತು ಸಂವಿಧಾನ ಆಧಾರಿತ” ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ಬಗ್ಗೆ ಹೇಳಿತ್ತು.

2023ರ ಆಗಸ್ಟ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಲು ಸರ್ಕಾರವು ಅನುಮತಿ ನೀಡಿತ್ತು. 2023ರ ಅಕ್ಟೋಬರ್ 11ರಂದು, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಥೋರಟ್ ನೇತೃತ್ವದಲ್ಲಿ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿಗಳು, ಬರಹಗಾರರು, ಪ್ರಾಧ್ಯಾಪಕರು ಮತ್ತು ನಿವೃತ್ತ ಪ್ರಾಧ್ಯಾಪಕರು ಸೇರಿ 15 ಸದಸ್ಯರ ಸಮಿತಿಯನ್ನು ರಚಿಸಿತು.

2024ರ ಫೆಬ್ರವರಿ 28ರೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಸರ್ಕಾರವು ಆಯೋಗಕ್ಕೆ ನಿರ್ದೇಶಿಸಿದೆ. ಸಮಿತಿಯು ವಿವಿಧ ರಾಜ್ಯಗಳ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕರು ಮತ್ತು ಶಿಕ್ಷಣತಜ್ಞರು ಸೇರಿದಂತೆ ವಿವಿಧ ಮಧ್ಯಸ್ಥಗಾರರಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದೆ.

ವಿಡಿಯೊ ನೋಡಿ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್‌ ಎಂಬ ತೂಗುಗತ್ತಿ – ಕೆ. ಮಹಾಂತೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *