ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರಿನಲ್ಲಿ ವಾಸಿಸುತ್ತಿರುವ 70 ವರ್ಷಗಳ ಆಸುಪಾಸಿನಲ್ಲಿರುವ ಇಬ್ಬರು ದಲಿತ ವೃದ್ಧ ರೈತರಾದ ಕಣ್ಣಿಯಾನ್ ಮತ್ತು ಅವರ ಸಹೋದರ ಕೃಷ್ಣನ್ 2023 ಜುಲೈನಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಸಮನ್ಸ್ ಪಡೆದಿದ್ದಾರೆ. ಇಡಿ ಅವರ ವಿರುದ್ಧ ಮನಿ ಲಾಂಡರಿಂಗ್ ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯ ಆರೋಪ ಮಾಡಿದೆ. ಯಾವುದೆ ಅಪರಾದದೊಂದಿಗೆ ಗುರುತಿಸಿಕೊಳ್ಳದ ಈ ಇಬ್ಬರು ದಲಿತ ವಯೋವೃದ್ಧ ಸಹೋದರರ ಒಂದೇ ಒಂದು ವಿವಾದವೆಂದರೆ, ಸ್ಥಳೀಯ ಬಿಜೆಪಿ ನಾಯಕನೊಬ್ಬ ತಮ್ಮ ಭೂಮಿಯನ್ನು ಅಕ್ರಮವಾಗಿ ಕಬಳಿಸಲು ಪ್ರಯತ್ನಿಸುತ್ತಿದ್ದಾನೆ ಎಂಬ ಪ್ರಕರಣ ದಾಖಲಿಸಿರುವುದು ಮಾತ್ರ.
ತಮ್ಮ ಗ್ರಾಮದಲ್ಲಿ 6.5 ಎಕರೆ ಕೃಷಿ ಭೂಮಿ ಹೊಂದಿರುವ ದಲಿತ ಸಹೋದರರನ್ನು ಇಡಿ ಯಾಕೆ ಸಮನ್ಸ್ ನೀಡಿದೆ ಎಂಬುವುದು ಇಬ್ಬರಿಗೂ ಇನ್ನೂ ಸ್ಪಷ್ಟವಾಗಿಲ್ಲ. ಅದಾಗ್ಯೂ ಇಡಿ ಸಮನ್ಸ್ನ ಲಕೋಟೆಯಲ್ಲಿ ರೈತರ ಜಾತಿಯನ್ನು ‘ಹಿಂದೂ ಪಾಲರ್ಗಳು’ ಎಂದು ನಮೂದಿಸಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೆ ಅಲ್ಲದೆ, ಯಾವುದೆ ಆದಾಯವಿಲ್ಲದ ಅವರು 1,000 ಮಾಸಿಕ ಪಿಂಚಣಿಯಲ್ಲಿ ಜೀವನ ಸಾಗಿಸುವವರಾಗಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ. ಬಿಜೆಪಿ
ಇದನ್ನೂ ಓದಿ: ಹಳೆಯ ಬಸ್ಗಳನ್ನು ಗುಜರಿಗೆ ಹಾಕಿ – ಕೆಎಸ್ಆರ್ಟಿಸಿಗೆ ಕರ್ನಾಟಕ ಹೈಕೋರ್ಟ್ ಆದೇಶ
ಕಣ್ಣಿಯಾನ್ ಮತ್ತು ಕೃಷ್ಣನ್ ಅವರು ಸೇಲಂ ಜಿಲ್ಲೆಯ ಅತ್ತೂರು ಬಳಿಯ ರಾಮನಾಯ್ಕನ್ಪಾಳ್ಯಂನಲ್ಲಿ 6.5 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಆದರೆ ಅವರ ಈ ಭೂಮಿಯನ್ನು ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ಅಕ್ರಮವಾಗಿ ಕಬಳಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಆರೋಪಿಸಿ ಕಾನೂನು ಮೊಕದ್ದಮೆ ಹೂಡಿದ್ದಾರೆ. ಕೃಷ್ಣನ್ ಅವರ ದೂರಿನ ಆಧಾರದ ಮೇಲೆ, ಗುಣಶೇಖರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು ಮತ್ತು 2020 ರಲ್ಲಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತ್ತು. ಈ ಪ್ರಕರಣವು ಸಿವಿಲ್ ಪ್ರಕರಣವು ಅತ್ತೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಬಿಜೆಪಿ
ಈ ಹಿನ್ನೆಲೆಯಲ್ಲಿ ಇಡಿ ರೈತರಿಗೆ ಸಮನ್ಸ್ ನೀಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ರೈತರನ್ನು ಬೆದರಿಸುವ ಮೂಲಕ ಬಿಜೆಪಿ ನಾಯಕನಿಗೆ ಇಡಿ ಸಹಾಯ ಮಾಡಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗಳು ಕೂಡಾ ಎದ್ದಿವೆ. 2023 ಜೂನ್ 26ರಂದು ಇಡಿ ಸಹಾಯಕ ನಿರ್ದೇಶಕರಾದ ರಿತೇಶ್ ಕುಮಾರ್ ಅವರು ರೈತರಿಗೆ ನೀಡಿದ ಸಮನ್ಸ್ನಲ್ಲಿ ತನಿಖಾಧಿಕಾರಿ (ಐಒ) ರಿತೇಶ್ ಕುಮಾರ್ ಅವರು ಮನಿ ಲಾಂಡರಿಂಗ್ ತಡೆಗಟ್ಟುವಿಕೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ತನಿಖೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಕಣ್ಣಿಯನ್ ಮತ್ತು ಕೃಷ್ಣನ್ ಅವರನ್ನು ಕೇಳಿದ್ದಾರೆ.
ವಿಚಾರಣೆಗೆ ಹಾಜರಾಗುವ ಮೊದಲು ಇಬ್ಬರು ರೈತರು ತಮ್ಮ ಪಾನ್ ಕಾರ್ಡ್ ನಕಲು, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ನ ಪ್ರತಿ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು, ತೆರಿಗೆ ರಿಟರ್ನ್ಸ್ ನಕಲು ಪ್ರತಿಗಳು ಮತ್ತು ಅವರ ಕುಟುಂಬದ ಸದಸ್ಯರು ಮಾಡಿದ ಹೂಡಿಕೆಯ ವಿವರಗಳಂತಹ ದಾಖಲೆಗಳು ಸೇರಿದಂತೆ ಹಲವಾರು ವಿವರಗಳನ್ನು ತರುವಂತೆ ಇಡಿ ತಿಳಿಸಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ತಿಳಿಸಿದೆ.
ಇದನ್ನೂ ಓದಿ: ಉಳ್ಳಾಲ | ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದವರ ಮೇಲೆ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿದ ಕಾಂಗ್ರೆಸ್ ಸರ್ಕಾರ!
ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಕನ್ನಿಯನ್ ಮತ್ತು ಕೃಷ್ಣನ್ ಪರ ವಕೀಲರಾದ ದಲಿತ ಪರ್ವಿನಾ ಅವರು, “ಸಮನ್ಸ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಲಾಗಿಲ್ಲ. ಅಷ್ಟಕ್ಕೂ ಈ ಸಹೋದರರಿಗೆ ಪ್ರಕರಣ ಏನೆಂದು ತಿಳಿದಿರಲಿಲ್ಲ. ಸಮನ್ಸ್ನಲ್ಲಿ ಸರಿಯಾದ ದಾಖಲೆಗಳೊಂದಿಗೆ ಇಡಿ ಮುಂದೆ ಹಾಜರಾಗುವಂತೆ ಕೇಳುವುದನ್ನು ಹೊರತುಪಡಿಸಿ ಏನನ್ನೂ ಉಲ್ಲೇಖಿಸಲಾಗಿಲ್ಲ. ಈ ಇಬ್ಬರು ರೈತರು ವ್ಯವಹರಿಸುತ್ತಿರುವ ಏಕೈಕ ಪ್ರಕರಣವೆಂದರೆ ಸ್ಥಳೀಯ ಬಿಜೆಪಿ ಪದಾಧಿಕಾರಿಯೊಬ್ಬರು ಭೂಕಬಳಿಕೆಗೆ ಯತ್ನಿಸಿದ ವಿವಾದ ಮಾತ್ರವಾಗಿದೆ” ಎಂದು ಹೇಳಿದ್ದಾರೆ.
“ನಾವು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು 2023ರ ಜುಲೈನಲ್ಲಿ ED ಅಧಿಕಾರಿಗಳನ್ನು ಭೇಟಿ ಮಾಡಲು ಹೋದೆವು. ಅವರು ನಮ್ಮನ್ನು ಮತ್ತೆ ಹಾಜರಾಗುವಂತೆ ಕೇಳಿಕೊಂಡರು. ನಾವು ಹೇಗೋ ಬದುಕುತ್ತಿದ್ದೇವೆ, ಅಂತಹ ನಮ್ಮ ಮೇಲೆ ಅಕ್ರಮ ಸಂಪತ್ತಿನ ಆರೋಪ ಮಾಡುವುದು ಎಷ್ಟು ಸರಿ” ಎಂದು ದಲಿತ ರೈತ ಕೃಷ್ಣನ್ ಕೇಳಿದ್ದಾರೆ.
ಇಬ್ಬರು ರೈತಗಿಗೂ ತಮಿಳುನಾಡು ಸರ್ಕಾರ ನೀಡುವ 1,000 ರೂಪಾಯಿಗಳ ವೃದ್ಧಾಪ್ಯ ಪಿಂಚಣಿ ಬಿಟ್ಟರೆ ಬೇರೆ ಯಾವುದೆ ಆದಾಯದ ಮೂಲವಿಲ್ಲ ಎಂದು ಅವರ ವಕೀಲರಾದ ದಲಿತ ಪರ್ವಿನ ಹೇಳಿದ್ದಾರೆ. “ಜಮೀನಿನ ಸಮಸ್ಯೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ರೈತರು ತಮ್ಮ ಕೃಷಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಏಕೈಕ ಆದಾಯದ ಮೂಲವೆಂದರೆ ವೃದ್ಧಾಪ್ಯ ಪಿಂಚಣಿ, ಜೊತೆಗೆ ತಮಿಳುನಾಡು ಸರ್ಕಾರ ನೀಡುವ ಉಚಿತ ಪಡಿತರವನ್ನು ಪಡೆಯುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಕರಾವಳಿ ನಾಡು ಇದೀಗ ಕಾರ್ಪೊರೇಟ್ ಬಿಳಿಯಾನೆಗಳ ಬಟ್ಟಲಾಗಿದೆ – ರಾಜಾರಾಂ ತಲ್ಲೂರು Janashakthi Media