ನಿರಂಜನ -99 : ನಿರಂಜನರ ನೆನೆಯೋಣ, ಓದೋಣ

                                                                                                                                                                                                       -ಜಿ.ಎನ್. ನಾಗರಾಜ

ಇಂದು ಚಿರಸ್ಮರಣೀಯ ಚಿರಸ್ಮರಣೆ,ಮೃತ್ಯುಂಜಯ ಕಾದಂಬರಿಗಳ ಲೇಖಕ, ಭಾರತದ ಯಾವ ಭಾಷೆಯಲ್ಲೂ ಇಲ್ಲದ 25 ಸಂಪುಟಗಳ ವಿಶ್ವಕಥಾಕೋಶ, ಜ್ಞಾನ ಗಂಗೋತ್ರಿಗಳ ನಿರಂಜನರ 99 ನೆಯ ಹುಟ್ಟುಹಬ್ಬ.

ದಲಿತ- ಬಂಡಾಯ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಪ್ರಗತಿಶೀಲ ಸಾಹಿತ್ಯ ಚಳುವಳಿಯ ಹರಿಕಾರರು.‌
ಚದುರಂಗ, ಬಸವರಾಜ ಕಟ್ಟೀಮನಿ, ತರಾಸು,ಕಣವಿಯವರ ಜೊತೆಗೆ ಅಡಿಗ,ಅನಂತಮೂರ್ತಿಯವರ ಮೇಲೂ ಕೆಲ ಕಾಲ ದಟ್ಟ ಪ್ರಭಾವ ಬೀರಿದವರು ಅವರು.
ಜಾಗತೀಕರಣ, ಖಾಸಗೀಕರಣ ಆವರಿಸಿಕೊಂಡಂತೆಲ್ಲ ಸಾಮಾಜಿಕ ಶೋಷಣೆ,ದಬ್ಬಾಳಿಕೆ,ದಮನಗಳ ಬಗ್ಗೆ ಪ್ರಜ್ಞೆಯನ್ನು ಮೂಡಿಸಲು , ಸಾಮಾಜಿಕ ವಾಸ್ತವದ, ಸಾಮಾಜಿಕ ಸಂಘರ್ಷದ ಚಿತ್ರಣವನ್ನು ಸಾಹಿತ್ಯದ ಪ್ರಧಾನ ವಸ್ತುವಾಗಿ ಮಾಡಿದ ಸಾಹಿತಿಗಳನ್ನು ಮರೆಗೆ ಸರಿಸಲಾಗುತ್ತಿದೆ.
ಅಂತಹವರಲ್ಲಿ ಪ್ರಗತೀಶೀಲ ಸಾಹಿತ್ಯ ಚಳುವಳಿ ಎಂಬ ಕನ್ನಡದ ಮೊದಲ ಸಾಹಿತ್ಯ ಚಳುವಳಿ, ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಮೇಲೆ ಅಪಾರ ಪ್ರಭಾವ ಬೀರಿದ ಚಳುವಳಿಯ ಜನಕರು.

ಇದನ್ನೂ ಓದಿ:ನಿರಂಜನರ 99.. ಚಿರಸ್ಮರಣೀಯ ಚಿರಸ್ಮರಣೆ ಕಾದಂಬರಿಯ ಸಾಹಿತಿ

ವಿಶ್ವಾದ್ಯಂತ ಬೆಳೆಯುತ್ತಿದ್ದ ಕ್ರೂರ ರಾಜಕೀಯಕ್ಕೆ ಸವಾಲಾಗಿ ಬೆಳೆದ ಪ್ರಜಾಪ್ರಭುತ್ವವಾದಿ ಸಾಹಿತ್ಯ ಚಳುವಳಿಯ ಭಾಗವಾಗಿ ಈ ಸಾಹಿತ್ಯವನ್ನು ಬೆಳೆಸಿದರು. ಅನಕೃ‌ರಂತಹ ಮೇಲ್ವರ್ಣಗಳ ಮೌಲ್ಯಗಳ ಸಾಹಿತಿ ಅದನ್ನು ಕೆಡಿಸಿ ಹಾಳು ಮಾಡಲು ಪ್ರಯತ್ನಿಸಿದಾಗ ಅದನ್ನು ದೃಢವಾಗಿ ಸೆಣೆಸಿದವರು.
ಅವರ ಹುಟ್ಟು, ಬಾಲ್ಯ ಬಹಳ ದಾರುಣ ಬೇಧಕ್ಕೆ ತುತ್ತಾಗಿದ್ದರೂ ಸಾಹಿತ್ಯದ ಓದು,ಬರಹಗಳಿಂದ ಹಾಗೂ ಪತ್ರಕರ್ತ ವೃತ್ತಿಯಿಂದಾಗಿ ಮೇಲೆದ್ದುಬಂದವರು.
ಕನ್ನಡದಲ್ಲಿ ಅಂಕಣ ಬರಹವನ್ನು ಪ್ರಸಿದ್ಧಿಗೊಳಿಸಿ ಸಾಹಿತ್ಯವನ್ನಾಗಿ ರೂಪಿಸಿದವರು.
ಅವರ ಹಲವು ಜನಪ್ರಿಯ ಶೈಲಿಯ ಕಾದಂಬರಿಗಳೂ ಕೂಡಾ ಅಂದಿನ ರಾಜಕೀಯ, ಸಾಮಾಜಿಕ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.
ಬನಶಂಕರಿ ಬ್ರಾಹ್ಮಣ ವಿಧವೆಯರ ಬಾಳನ್ನು ಕಟ್ಟಿಕೊಡುವ, ಕಣ್ಣೀರಿನಲ್ಲಿ ನಮ್ಮನ್ನೆಲ್ಲ ಮೀಯಿಸಿಬಿಡುವ ಆತ್ಮ ಕಥಾತ್ಮಕ ಕಾದಂಬರಿ.

 

Donate Janashakthi Media

Leave a Reply

Your email address will not be published. Required fields are marked *