80-90-ಪೂರಾ 100! ಶತಕ ಬಾರಿಸಿದ್ದಕ್ಕೆ ಸರ್ದಾರ್ ಸ್ಟೇಡಿಯಂ ಇನ್ನು ಮೋದಿ ಸ್ಟೇಡಿಯಂ!

ಪೆಟ್ರೋಲ್ ಬೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಕಡೆಗಳಲ್ಲಿ ಈಗಾಗಲೇ ಲೀಟರಿಗೆ 100ರೂ. ದಾಟಿರುವ ಸಂದರ್ಭದಲ್ಲಿ  ಈ ಮೇಲಿನ ರೀತಿಯ ವ್ಯಂಗ್ಯಭರಿತ ಚಿತ್ರಗಳು ಪ್ರಚಾರಗೊಳ್ಳುತ್ತಿವೆ. ಅದಕ್ಕೆ ಮೊದಲು…

***

“ಈಗ ಯಾರೂ ಏರುತ್ತಿರುವ ಬೆಲೆಗಳ ಬಗ್ಗೆ ದೂರುತ್ತಿಲ್ಲ”

(ಸತೀಶ ಆಚಾರ್ಯ)

***

ಆದರೆ, ಈಗ ಈ ತಂತ್ರವೂ ಫಲಿಸದಂತಹ ಪರಿಸ್ಥಿತಿ ಉಂಟಾಗಿರುವಂತೆ ಕಾಣುತ್ತದೆ. ರಾಜಸ್ಥಾನದ ಶ್ರೀಗಂಗಾನಗರ ಪಟ್ಟಣದಲ್ಲಿನ ಒಬ್ಬ ಪೆಟ್ರೋಲ್‍ ಬಂಕ್‍ ಮಾಲಿಕ ತನ್ನ ಬಂಕ್‍ನಲ್ಲಿ ಕಾಮಿಡಿಯನ್ ಶ್ಯಾಮ್‍ ರಂಗೀಲಾ ನಾಗಾಲೋಟ ಹೂಡುತ್ತಿರುವ ಪೆಟ್ರೋಲ್‍ ದರ ಏರಿಕೆಗಾಗಿ ಪ್ರಧಾನ ಮಂತ್ರಿಗಳನ್ನು ತಮಾಷೆ ಮಾಡುವ ವೀಡಿಯೋ ಶೂಟ್‍ ಮಾಡಿ  ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್‍ ಮಾಡಿರುವುದರ ವಿರುದ್ಧ ಪೋಲೀಸರಿಗೆ ದೂರು ಸಲ್ಲಿಸಿದ್ದಾನಂತೆ.

“ಇವ ಕೊಳ್ಳುವ ಮೊದಲೇ ಬೆಲೆ ಕೇಳಿದ!”

( ಸತೀಶ ಆಚಾರ್ಯ)

 “ಇಂದು ಪೆಟ್ರೋಲ್‍ ಬೆಲೆ 100ರೂ.ತಲುಪಿರುವುದು ಶ್ರೀಗಂಗಾನಗರಕ್ಕೆ ಹೆಮ್ಮೆ ತಂದಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ  ಯಾವ ಸರಕಾರವೂ ಪೆಟ್ರೋಲಿಗೆ ಅದರ ನಿಜವಾದ ಮೌಲ್ಯವನ್ನು ಕೊಟ್ಟಿಲ್ಲ. ನಾವೀಗ ಅದನ್ನು ಕೊಟ್ಟು ದೇಶಕ್ಕೆ ಉಪಕಾರ ಮಾಡಿದ್ದೇವೆ” ಎನ್ನುವ ಅರ್ಥದ ಈ ವೀಡಿಯೋಗೆ ಫೆಬ್ರುವರಿ 21ರ ವೇಳೆಗೇ ಯು ಟ್ಯೂಬ್‍ ನಲ್ಲಿ 10 ಲಕ್ಷಕ್ಕೂ ಹೆಚ್ಚು ವ್ಯೂಗಳು ಮತ್ತು ಟ್ವಿಟರಿನಲ್ಲಿ 42,000 ಲೈಕ್‍ ಗಳು ಬಂದಿವೆಯಂತೆ.

***

ಅತ್ತ ದಿಲ್ಲಿಯಲ್ಲಿ 2014 ರಲ್ಲಿ ಹಣಕಾಸು ಮಂತ್ರಿಯಾಗುವ ಅಚ್ಛೇ ದಿನ್‍ ತಪ್ಪಿ ಹೋದ ಆಳುವ ಪಕ್ಷದ ಪ್ರಸಿದ್ಧ ಸಂಸದ್‍ ಸದಸ್ಯರು  ಪೆಟ್ರೋಲ್‍ ದರ ರಾವಣನ ಶ್ರೀಲಂಕಾದಲ್ಲಿ 51ರೂ., ಸೀತೆಯ ನೇಪಾಳದಲ್ಲಿ 53ರೂ. ,ಆದರೆ ರಾಮನ ಭಾರತದಲ್ಲಿ 93ರೂ. ಎಂದು ಟ್ವೀಟ್‍ ಮಾಡುತ್ತಿರುವಂತೆಯೇ ಶ್ರೀಗಂಗಾನಗರದ ಹೆಮ್ಮ ಇಡೀ ದೇಶದ ಹೆಮ್ಮೆಯಾಗುವತ್ತ  ಧಾವಿಸುತ್ತಿದ್ದೇವೆ.

***

 ಎಷ್ಟೊಂದು ವೇಗದಲ್ಲಿ ಎಂದರೆ, ಪೆಟ್ರೋಲಿಯಂ ಮಂತ್ರಿಗಳು, ನಂತರ ಹಣಕಾಸು ಮಂತ್ರಿಗಳು, ಕೊನೆಗೆ ಪ್ರಧಾನ ಮಂತ್ರಿಗಳೂ ಕೂಡ ಈ ಬಗ್ಗೆ ದೀರ್ಘ ಮೌನವನ್ನು ಮುರಿಯ ಬೇಕಾಗಿ ಬಂದಿದೆ.

***

ತೈಲ ಉತ್ಪಾದಿಸುವ ದೇಶಗಳು ಹೆಚ್ಚು ಲಾಭ ಪಡೆಯುವುದಕ್ಕಾಗಿ ಉತ್ಪಾದನೆಯನ್ನು ಕಡಿತ ಮಾಡಿರುವುದರಿಂದ ಇಂತಹ ಸ್ಥಿತಿ ಬಂದಿದೆ ಎಂದು ಪೆಟ್ರೋಲಿಯಂ ಮಂತ್ರಿಗಳು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಆದರೆ 2014ರಲ್ಲಿ ಇವರ ಸರಕಾರ ಬಂದಾಗ  ಮೇ 2014ರಲ್ಲಿ  ಕಚ್ಚಾತೈಲ ಆಧರಿಸಿದ ಪೆಟ್ರೋಲಿನ ಮೂಲ ಬೆಲೆ ಲೀಟರಿಗೆ ರೂ.47.12 ಇತ್ತು, ಫೆಬ್ರುವರಿ 2021ರಲ್ಲಿ ರೂ.29.34 ಇದೆ. ಈ ನಡುವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಾಗ  ಅವರ ಸರಕಾರ ಅದರ ಪ್ರಯೋಜನ ಬಳಕೆದಾರರಿಗೆ ಸಿಗದಂತೆ ಮಾಡಲು ಎರಡೆರಡು ಬಾರಿ ಸುಂಕಗಳನ್ನು ಏರಿಸಿರುವ ಬಗ್ಗೆ ಕೂಡ ಏನನ್ನೂ ಹೇಳಲಿಲ್ಲ.

ಕಳೆದ ಆರು ವರ್ಷಗಳಲ್ಲಿ ಕೇಂದ್ರೀಯ ಸುಂಕಗಳನ್ನು 217ಶೇ.ದಷ್ಟು  ಏರಿಸಿದ, ಈ ಹಿಂದೆ ದೇವರೇ ಗತಿ ಎಂದಿದ್ದ  ಹಣಕಾಸು ಮಂತ್ರಿಗಳಿಗಂತೂ ಈಗಿನ ಪರಿಸ್ಥಿತಿಯಿಂದ ‘ಧರ್ಮಸಂಕಟ’ ಉಂಟಾಗಿದೆಯಂತೆ.

“ನಮ್ಮ ಧರ್ಮಸಂಸದ್ ಈ ಧರ್ಮಸಂಕಟವನ್ನು ಚರ್ಚಿಸುತ್ತದೆ ಎಂದು ಆಶಿಸೋಣ”

( ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ಪೆಟ್ರೋಲಿಯಂ ಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳು ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು, ಅದರಲ್ಲೂ ಕೊರೊನ ಉಂಟುಮಾಡಿದ ಭಾರೀ ನಷ್ಟಗಳ ನಂತರ  ಈ ಸುಂಕ ಹೇರುವುದು ಅನಿವಾರ್ಯವಾಗಿದೆ ಎಂದು ಮತ್ತೊಂದು, ಈಗ ಯಾರೂ ನಂಬಲಾರದ ಸಮಜಾಯಿಷಿಯನ್ನು ಕೊಟ್ಟರು.

ಪ್ರಧಾನ ಮಂತ್ರಿಗಳು ಇವರೆಲ್ಲರಿಗಿಂತ ಮುಂದೆ ಹೋಗಿ ಒಂದು ನವೀನ  ಕಾರಣವನ್ನೇ ಕೊಟ್ಟು, ಮತ್ತೊಮ್ಮೆ   ಪಟ್ರೋಲ್‍ ಶತಕದ ಆಟವನ್ನೇ ಬದಲಿಸಿದ್ದಾರೆ (game changer)ಎಂಬ ಭಕ್ತಪ್ರಶಂಸೆಗೆ ಪಾತ್ರರಾಗಿದ್ದಾರೆ.

“ಈ ಚಾರಿತ್ರಿಕ ಶತಕವನ್ನು ನನ್ನ ಹಿಂದಿನವರಿಗೆ ಸಮರ್ಪಿಸುತ್ತೇನೆ”

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

***

(ಪಿ.ಮಹಮ್ಮದ್, ವಾರ್ತಾಭಾರತಿ)

ತಮಗಿಂತ ಮೊದಲು  ತಮ್ಮ ಪೀಠವನ್ನು ಅಲಂಕರಿಸಿದ್ದವರೇ ಇದಕ್ಕೆ ಹೊಣೆಗಾರರು ಎನ್ನುತ್ತ ಪ್ರಧಾನಿಗಳು ಹಿಂದಿನ ಸರಕಾರಗಳು  ಇಂಧನ ಆಮದುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದರ ಮೇಲೆ ಗಮನವನ್ನು ಹರಿಸಿದ್ದರೆ ಮಧ್ಯಮವರ್ಗಗಳವರು ಇಂದು ಈ ಹೊರೆಯನ್ನು ಹೊರಬೇಕಾಗಿ ಬರುತ್ತಿರಲಿಲ್ಲ ಎಂದಿದ್ದಾರೆ. ಆಮೂಲಕ ತಮ್ಮ ಈ  ಹಿಂದಿನ ಪ್ರತಿಪಕ್ಷಾಶ್ರಮ ಕಾಲದ ಹೇಳಿಕೆಗಳನ್ನು ನೆನಪಿಸಿ ಲೇವಡಿ ಮಾಡುತ್ತಿರುವ ಈಗಿನ ಪ್ರತಿಪಕ್ಷಗಳ ಮುಖಂಡರ ಬುಡಕ್ಕೇ ಏಟು ಕೊಟ್ಟಿದ್ದಾರೆ ಎಂಬ ಹೊಗಳಿಕೆಯನ್ನು ಹಾಗೂ ಮಧ್ಯಮವರ್ಗಗಳ ಸಹಾನುಭೂತಿಯನ್ನೂ  ಗಿಟ್ಟಿಸಿಕೊಂಡಿದ್ದೇನೆ ಎಂದುಕೊಂಡಿದ್ದಾರೆ.

***

ಆದರೆ ಹೀಗೆ ದೂಷಿಸುವಾಗ ಹಿಂದಿನ ಐದುವರ್ಷಗಳ ಕಾಲ ಪ್ರಧಾನಿಯಾಗಿದ್ದವರು ಕೂಡ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಹಲವರಲ್ಲಿ ಎದ್ದಿದೆ.

“ನೋಡಿಯಪ್ಪಾ, ಅವರೀಗ ನಿಮ್ಮನ್ನೂ ದೂಷಿಸಲಾರಂಭಿಸಿದ್ದಾರೆ”

(ಅಲೋಕ್‍ ನಿರಂತರ್)

ಕಳೆದ ಆರು ವರ್ಷಗಳಲ್ಲಾದರೂ ಈ ನಿಟ್ಟಿನಲ್ಲಿ ನೀವೇನು ಮಾಡಿದ್ದಿರಿ,  ಎಂಬ  ಪ್ರಶ್ನೆ ಸಹಜ ತಾನೇ?

***

ಈ ದೂಷಣಾ ಪರ್ವವನ್ನು ಇಲ್ಲಿಗೇ ಮುಗಿಸಲು ಸಾಧ್ಯವೇ ? ಈ ನವೀನ ತರ್ಕವನ್ನು ಗೋಮೂತ್ರವನ್ನು ಪೆಟ್ರೋಲ್‍ ಆಗಿ ಪರಿವರ್ತಿಸಲಾರದ ಪೂರ್ವಜರ ವರೆಗೆ ಮಾತ್ರವಲ್ಲ, ಅದಕ್ಕೂ ಬಹಳ ಹಿಂದಿನ ವರೆಗೂ ತಳ್ಳಲು ಸಾಧ್ಯವಿದೆಯಲ್ಲಾ!

(ದಿನೇಶ್ ಕುಕ್ಕುಜಡ್ಕ)

***

ಇದುವರೆಗಿನ ವಿಧಾನಗಳು ಕೆಲಸ ಮಾಡದ್ದರಿಂದ,

ಸರಕಾರ ನಮ್ಮ ವೈವಿಧ್ಯಪೂರ್ಣ ದೇಶವನ್ನು ಒಗ್ಗೂಡಿಸಲು

ಹೊಸದೊಂದು ದಾರಿಯನ್ನು ಕಂಡುಕೊಂಡಿದೆ”

(ಸಜಿತ್‍ ಕುಮಾರ್, ಡೆಕ್ಕನ್‍ ಕ್ರಾನಿಕಲ್)

ಹೀಗೆ ಪೆಟ್ರೋಲ್ -ಡಿಸೆಲ್ ಬೆಲೆಯೇರಿಕೆಗಳು ನಮ್ಮ ವೈವಿಧ್ಯಪೂರ್ಣ ದೇಶವನ್ನು ಒಗ್ಗೂಡಿಸುವ ಹೊಸ ಮಾರ್ಗವೊಂದನ್ನು ತೋರಿಸಿದೆ ಎಂದು ಯಾವ ಮಂತ್ರಿಯೂ ಇದುವರೆಗೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿಲ್ಲವಲ್ಲ ಎಂದು ಹಲವರಿಗೆ ಸದ್ಯಕ್ಕೆ ಸಮಾಧಾನವಾಗಿದೆ.

***

ದೈವಿಕ ಔಷಧಾಲಯ

“ಓಡುವ ಸಾಮರ್ಥ್ಯವನ್ನು ಹೆಚ್ಚಿಸುವ ಪಟ್ರೋನಿಲ್ ಗುಳಿಗೆಗಳು

ನೀವು ಪಟ್ರೋಲ್ ಮೇಲೆ ಶೂನ್ಯ ಅವಲಂಬನೆ ಸಾಧಿಸಲು ನೆರವಾಗುತ್ತವೆ”

(ಸಂದೀಪ್‍ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಪಟ್ರೋಲಿಯಂ ಮತ್ತು ಹಣಕಾಸು ಮಂತ್ರಿಗಳಂತೆ ಸಮಜಾಯಿಷಿ ಕೊಡುವ ಅಗತ್ಯವೇನೂ ಇಲ್ಲದ, ಆದರೆ ಅಪಾರ ಆರ್ಥಿಕ ನಷ್ಟಗಳನ್ನು ತಂದೊಡ್ಡಿರುವ ಕೊರೊನಾವನ್ನು ಓಡಿಸಲು ಪತಂಜಲಿಯ ಕೊರೊನಿಲ್ ಲಾಂಚ್‍ ಕಾರ್ಯಕ್ರಮದಲ್ಲಿ ಹಾಜರಿದ್ದ ಆರೋಗ್ಯ ಮತ್ತು ಹೆದ್ದಾರಿ ಮಂತ್ರಿಗಳು ಈ ಪೆಟ್ರೋನಿಲ್ ನ್ನು ಸಲಹೆ ಮಾಡಿಲ್ಲವಲ್ಲಾ ಎಂಬುದು ಕೂಡ ಇತರ ಹಲವರಿಗೆ ಸಮಾಧಾನ ತಂದಿದೆ

***

ಈ ನಡುವೆ,  ಪೆಟ್ರೋಲ್‍ ಶತಕದ ಕೀರ್ತಿ ತಮಗಲ್ಲ,  ತಮ್ಮ ಹಿಂದಿನ ಪ್ರಧಾನಿಗಳಿಗೆ ಸಲ್ಲಬೇಕು ಎಂದು ಹಾಲಿ ಪ್ರಧಾನಿಗಳು ಸಾರಿರುವುದನ್ನೂ   ಲೆಕ್ಕಿಸದೆ ಅಹಮದಾಬಾದಿನ ಮೊಟೆರಾ ದಲ್ಲಿನ ಸರದಾರ್‍  ಪಟೇಲ್‍ ಕ್ರಿಕೆಟ್‍ ಸ್ಟೇಡಿಯಮ್‍ ಗೆ  ಪೆಟ್ರೋಲ್‍ ಬೆಲೆಗಳಲ್ಲಿ ಶತಕವನ್ನು ಬಾರಿಸಿದ ಸ್ಮರಣಾರ್ಥ ನರೇಂದ್ರ ಮೋದಿ ಸ್ಟೇಡಿಯಮ್‍ ಎಂದು ಮರುನಾಮಕರಣ ಮಾಡಲಾಗಿದೆಯಂತೆ!

(ಅಲೋಕ್‍ ನಿರಂತರ್)

 

Donate Janashakthi Media

Leave a Reply

Your email address will not be published. Required fields are marked *