ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾರ್ಚ್ 1, 2020ರ ವರೆಗೆ 8.72 ಲಕ್ಷ ಹುದ್ದೆಗಳು ಖಾಲಿ ಇದ್ದವು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಬಾಕಿ ಉಳಿದಿರುವ ನೇಮಕಾತಿ ಬಗ್ಗೆ ವಿವರ ನೀಡುವಂತೆ ಕೋರಿದ ಪ್ರಶ್ನೆಗೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅಧಿವೇಶನದಲ್ಲಿ ಉತ್ತರಿಸಿದ್ದಾರೆ.
ಮಾರ್ಚ್ 1, 2020 ರಂತೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8.72 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಲಿಖಿತ ಉತ್ತರ ನೀಡಿದರು. ಮಾಹಿತಿ ಪ್ರಕಾರ ಮಾರ್ಚ್ 1, 2019 ಕ್ಕೆ 9,10,153 ಮತ್ತು ಮಾರ್ಚ್ 1, 2018 ಕ್ಕೆ 6,83,823 ಖಾಲಿ ಹುದ್ದೆಗಳು ಇದ್ದವು.
ಮಾರ್ಚ್ 1, 2020 ರಂತೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8,72,243 ಹುದ್ದೆಗಳು ಖಾಲಿ ಇವೆ. ಮೂರು ಪ್ರಮುಖ ನೇಮಕಾತಿ ಏಜೆನ್ಸಿಗಳಾದ ಸ್ಟಾಫ್ ಸೆಲೆಕ್ಷನ್ ಕಮಿಷನ್, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಮತ್ತು ರೈಲ್ವೇ ನೇಮಕಾತಿ ಮಂಡಳಿಗಳಲ್ಲಿ 2018-19 ಮತ್ತು 2020-21 ರ ಅವಧಿಯಲ್ಲಿ 2,65,468 ನೇಮಕಾತಿಗಳು ನಡೆದಿವೆ.
ಭಾರತದ ನಿರುದ್ಯೋಗ ದರವು ಜನವರಿಯಲ್ಲಿ 6.57 ಪ್ರತಿಶತಕ್ಕೆ ಕುಸಿದಿದೆ. ಇದು ಮಾರ್ಚ್ 2021ರ ಬಳಿಕ ಮೊದಲ ಬಾರಿಗೆ ಈ ಮಟ್ಟಕ್ಕೆ ನಿರುದ್ಯೋಗ ದರವು ಕುಸಿತ ಕಂಡಿದೆ. ದೇಶದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಕೋವಿಡ್ ತಡೆ ನಿರ್ಬಂಧಗಳು ಸಡಿಲಿಕೆ ಮಾಡಿದೆ. ಈ ಬೆನ್ನಲ್ಲೇ ದೇಶದಲ್ಲಿ ನಿರುದ್ಯೋಗ ದರವು ಜನವರಿಯಲ್ಲಿ ಇಳಿಕೆ ಆಗಿದೆ. ಕ್ರಮೇಣವಾಗಿ ಮತ್ತಷ್ಟು ಚೇತರಿಕೆ ಕಾಣಲಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ.
ಸೆಂಟ್ರಲ್ ಫಾರ್ ಮೊನಿಟರಿಂಗ್ ಇಂಡಿಯಾ ಇಕಾನಮಿ (ಸಿಎಂಐಇ) ಡಿಸೆಂಬರ್‌ನ ಡೇಟಾವು ದೇಶದಲ್ಲಿ ನಿರುದ್ಯೋಗ ಪ್ರಮಾಣದ ಹೆಚ್ಚಳವನ್ನು ತೋರಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ನೋಡಿದಾಗ ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂದರೆ, ಡಿಸೆಂಬರ್‌ನಲ್ಲಿ ದೇಶದಲ್ಲಿ ನಿರುದ್ಯೋಗ ದರವು 7.9ಕ್ಕೆ ಏರಿಕೆ ಕಂಡಿದೆ. ಇನ್ನು ನಗರದ ಉದ್ಯೋಗ ದರವು ನವೆಂಬರ್ 2021ರಲ್ಲಿ ಶೇಕಡ 8.21 ಇತ್ತು. ಆದರೆ ಡಿಸೆಂಬರ್ 2021ರಲ್ಲಿ ನಗರ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 9.3ಕ್ಕೆ ಏರಿಕೆ ಕಂಡಿದೆ.
ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ದರವು ಕೂಡಾ ಏರಿಕೆ ಕಂಡಿದೆ. ನವೆಂಬರ್ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 8.21 ಇತ್ತು. ಆದರೆ ಡಿಸೆಂಬರ್ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 7.28ಕ್ಕೆ ಏರಿಕೆ ಕಂಡಿದೆ. ಇನ್ನು ದೇಶದಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್ 2021ರಲ್ಲಿ ಶೇಕಡ 7 ಆಗಿತ್ತು. ಆದರೆ ಡಿಸೆಂಬರ್ ವೇಳೆಗೆ ಶೇ.7.9ಕ್ಕೆ ಏರಿಕೆ ಆಗಿದೆ ಎಂದು ಸಿಎಂಐಇ ವೆಬ್‌ಸೈಟ್ ಉಲ್ಲೇಖ ಮಾಡಿದೆ.