75 ಸದಸ್ಯ ಬಲದ ವಿಧಾನ ಪರಿಷತ್​​ನ 25 ಸದಸ್ಯರ ಅಧಿಕಾರಾವಧಿ ಹೊಸ ವರ್ಷದ ಆರಂಭದಲ್ಲಿ ಅಂತ್ಯ

ಬೆಂಗಳೂರು: 75 ಸದಸ್ಯರ ಬಲ ಹೊಂದಿರುವ ವಿಧಾನ ಪರಿಷತ್​​​ನಲ್ಲಿ ಸದ್ಯ ಯಾವುದೇ ಸ್ಥಾನ ತೆರವಾಗಿಲ್ಲ. ಆದರೆ, ಅತೀ ಶೀರ್ಘದಲ್ಲಿ ಅಂದರೆ 2022ರ ಹೊಸ ವರ್ಷ ಆರಂಭವಾಗುತ್ತಿದ್ದಂತೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ವಿಧಾನ ಪರಿಷತ್ ಸದಸ್ಯರ 6 ವರ್ಷದ ಅಧಿಕಾರಾವಧಿ ಕೊನೆಗೊಳ್ಳಲಿದೆ.

ಸದ್ಯ ವಿಧಾನ ಪರಿಷತ್​​ನಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷವಾಗಿಯೂ ತನ್ನ ಬಲ ಹೊಂದಿದೆ. 75ರ ಪೈಕಿ ಬಿಜೆಪಿ ಒಬ್ಬ ಪಕ್ಷೇತರ (ವಿವೇಕರಾವ್ ಪಾಟೀಲ್) ಬೆಂಬಲದೊಂದಿಗೆ ಒಟ್ಟು 33 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್​​ನ 29 ಹಾಗು ಜೆಡಿಎಸ್​​​ನ 13 ಮಂದಿ ಸದಸ್ಯರಿದ್ದಾರೆ.

ಇವರಲ್ಲಿ ಶಿಕ್ಷಕ, ಪದವೀಧರ ಕ್ಷೇತ್ರದ ಸದಸ್ಯರೂ ಸೇರಿದಂತೆ ಒಟ್ಟು 25 ಸ್ಥಾನಗಳು ತೆರವಾಗುತ್ತಿವೆ. ಇದನ್ನು ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈಗಿನಿಂದಲೇ ಸಾಕಷ್ಟು ರಾಜಕೀಯ ರಣತಂತ್ರದಲ್ಲಿ ಮುಳಿಗಿದೆ.

75 ಸದಸ್ಯರ ಬಲವಿರುವ ವಿಧಾನ ಪರಿಷತ್​​​ನಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸದಸ್ಯ ಬಲ ಬಿಜೆಪಿ ಪಕ್ಷಕ್ಕೆ ಇಲ್ಲ. ಯಾವುದೇ ವಿಧೇಯಕವನ್ನು ಸ್ವತಂತ್ರವಾಗಿ ಅಂಗೀಕಾರ ಪಡೆಯಲು ಬಿಜೆಪಿಗೆ 38 ಸದಸ್ಯರ ಬಲ ಹೊಂದಲೇಬೇಕಾದ ಅನಿವಾರ್ಯತೆ ಇದೆ.

ಸದ್ಯ 33 ಸದಸ್ಯರ ಬಲ ಹೊಂದಿದ್ದು, ಜತೆಗೆ ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರ ನಡೆಸುತ್ತಿದೆ. ಸಭಾಪತಿ ಸ್ಥಾನವನ್ನು ಸಹ ಜೆಡಿಎಸ್​​​ಗೆ ಬಿಟ್ಟುಕೊಟ್ಟಿದೆ.

ಇದರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್​​ಗೆ ಸೇರಿದಂತೆ ವಿವಿಧ ವಿಭಾಗಗಳಿಂದ ಸದಸ್ಯರ ಆಯ್ಕೆ ನಡೆಯಲಿದೆ.

ಅಧಿಕಾರಾವಧಿ ಪೂರ್ಣಗೊಳಿಸುವ ಸದಸ್ಯರ ವಿವರ

ಒಟ್ಟು ತೆರವಾಗಲಿರುವ ಸದಸ್ಯರಲ್ಲಿ ಬಿಜೆಪಿಯ-6 ಮತ್ತು ಓರ್ವ ಬೆಂಬಲಿತ ಪಕ್ಷೇತರ ಸದಸ್ಯ ಸೇರಿ 7 ಸ್ಥಾನ. ಕಾಂಗ್ರೆಸ್​​- 13 ಹಾಗು ಜೆಡಿಎಸ್​​​-5 ಸದಸ್ಯರ ಸ್ಥಾನ ತೆರವಾಗಲಿದೆ. ಇವರ ವಿವರಗಳು ಹೀಗಿವೆ;

ಬಿಜೆಪಿ

  • ಕೋಟಾ ಶ್ರೀನಿವಾಸ ಪೂಜಾರಿ (ಸಭಾ ನಾಯಕ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ
  • ಬಿ.ಜಿ. ಪಾಟೀಲ್-ಕಲಬುರಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಎಂ.ಕೆ. ಪ್ರಾಣೇಶ್ (ಉಪ ಸಭಾಪತಿ) ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಸುನೀಲ್ ಸುಬ್ರಹ್ಮಣಿ ಮಂಡೇಪಂಡ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಮಹಂತೇಶ್ ಕವಟಗಿಮಠ (ಮುಖ್ಯ ಸಚೇತಕ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ವಿವೇಕರಾವ್ ಪಾಟೀಲ್ (ಪಕ್ಷೇತರ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.

ಕಾಂಗ್ರೆಸ್

  • ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಪ್ರತಾಪ್ ಚಂದ್ರ ಶೆಟ್ಟಿ (ಮಾಜಿ ಸಭಾಪತಿ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಶ್ರೀನಿವಾಸ್ ಮಾನೆ (ಹಾಲಿ ಶಾಸಕ-ಹಾನಗಲ್)- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಆರ್. ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ
  • ಎಂ.ಎ. ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಎಂ. ನಾರಾಯಣಸ್ವಾಮಿ (ಪ್ರತಿಪಕ್ಷ ಸಚೇತಕ)-ಬೆಂಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಎಸ್.ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ

ಜೆಡಿಎಸ್

  • ಎನ್.ಅಪ್ಪಾಜಿ ಗೌಡ (ಪ್ರತಿಪಕ್ಷ ಸಚೇತಕ) ಮಂಡ್ಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
  • ಸಂದೇಶ್ ನಾಗರಾಜ್-ಮೈಸೂರು ಸಂಸ್ಥೆಗಳ ಪ್ರತಿನಿಧಿ,
  • ಬಸವರಾಜ ಹೊರಟ್ಟಿ (ಸಭಾಪತಿ)- ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರತಿನಿಧಿ.
  • ಸಿ.ಆರ್. ಮನೋಹರ್- ಕೋಲಾರ ಸಂಸ್ಥೆಗಳ ಪ್ರತಿನಿಧಿ.
  • ಕಾಂತರಾಜು (ಬಿಎಂಎಲ್)- ತುಮಕೂರು ಸಂಸ್ಥೆಗಳ ಪ್ರತಿನಿಧಿ.

ಇವುಗಳಲ್ಲೇ ನಾಲ್ಕು ಶಿಕ್ಷಕ, ಪದವೀಧರ ಕ್ಷೇತ್ರಗಳಾದ ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ , ದಕ್ಷಿಣ ಪದವೀಧರ ಕ್ಷೇತ್ರವೂ ಸೇರಿದೆ.

Donate Janashakthi Media

Leave a Reply

Your email address will not be published. Required fields are marked *