ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಸರ್ಕಾರಿ ಉದ್ಯೋಗ ಪಡೆಯುವ, ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಳ್ಳುವ ಆಕಾಂಕ್ಷಿಗಳ ಮಹದಾಸೆಗೆ ನಿರಾಶೆ ತಂದಿದ್ದೂ, ಸ್ಪರ್ಧಾತ್ಮಕ ಪರೀಕ್ಷೆಗೆ ವರ್ಷಗಳ ಕಾಲ ಹಗಲಿರುಳು ತಯಾರಿ ನಡೆಸಿದ್ದ ಅಭ್ಯರ್ಥಿಗಳಿಗೆ ಸರ್ಕಾರ ಹಾಗೂ ಕೆಪಿಎಸ್ಸಿ ಜಂಟಿಯಾಗಿ ಎಳ್ಳು ನೀರು ಬಿಟ್ಟಿವೆ. ವಿವಾದ
ಕೆಪಿಎಸ್ಸಿಯ ಸ್ವಯಂಕೃತ ಲೋಪಗಳಿಂದಾಗಿ 70 ಸಾವಿರಕ್ಕೂ ಅಧಿಕ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಆಕಾಂಕ್ಷಿಗಳ ಭವಿಷ್ಯವನ್ನು ಮಣ್ಣು ಪಾಲು ಮಾಡಿದೆ. ಆಡಳಿತ ಯಂತ್ರಕ್ಕೆ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡುವ ಹೊಣೆ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ ನಿರ್ಲಕ್ಷ್ಯ ಮುಂದುವರಿದಿದೆ. ವಿವಾದ
2024ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಆಯೋಗ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಒಂದಲ್ಲ, ಎರಡು ಬಾರಿ ಭಾಷಾಂತರದ ದೋಷ ಕಂಡು ಬಂದರೂ ಆಯೋಗ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ತಾನು ಮಾಡಿದ ತಪ್ಪಿಗೆ ಅಭ್ಯರ್ಥಿಗಳನ್ನು ಬಲಿಪಶು ಮಾಡಿದ್ದು, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳೇ ಹೆಚ್ಚು ಬಾಧಿತರಾಗಿದ್ದಾರೆ. ವಿವಾದ
ಇದನ್ನೂ ಓದಿ: ಬೆಳಗಾವಿ| ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಾದ ಉಪವಿಭಾಗಾಧಿಕಾರಿ, ಡಿವೈಎಸ್ಪಿ, ತಹಸೀಲ್ದಾರ್ ಸೇರಿದಂತೆ ಹಲವು ಹುದ್ದೆಗಳಿಗೆ ಲಕ್ಷಾಂತರ ಯುವಕರು ಅರ್ಜಿ ಸಲ್ಲಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹಗಲಿರುಳು ಅಧ್ಯಯನ ನಡೆಸಿದ್ದರು. ಆದರೆ, ಕೆಪಿಎಸ್ಸಿ ಪ್ರತಿ ಪರೀಕ್ಷೆಯಲ್ಲೂ ಮಾಡುವ ಅವಾಂತರಗಳಿಂದ ಹುದ್ದೆ ಆಕಾಂಕ್ಷಿಗಳು ನಿತ್ಯ ನ್ಯಾಯಾಲಯ, ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಾದ
ಕೆಲ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿ ವರ್ಷಗಳೇ ಕಳೆದರೂ ಇಂದಿಗೂ ನೇಮಕಾತಿ ಪತ್ರ ನೀಡದಿರುವುದು ಕೆಪಿಎಸ್ಸಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಈಗ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದವರಲ್ಲಿ ಸುಮಾರು 70 ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ವಿವಾದವಿವಾದ
ಕೆಪಿಎಸ್ಸಿಯು 2023-24 ನೇ ಸಾಲಿನಲ್ಲಿ 384 ಗೆಜೆಟೆಡ್ ಪ್ರೊಬೆಷನರಿ ʼಗ್ರೂಪ್ ಎʼ ಹಾಗೂ ʼಗ್ರೂಪ್ ಬಿʼ ಹುದ್ದೆಗಳಿಗೆ 2024 ಫೆ.27 ರಂದು ಅಧಿಸೂಚನೆ ಹೊರಡಿಸಿತ್ತು. ಅದಕ್ಕಾಗಿ ಆ.27 ರಂದು ಕೆಪಿಎಸ್ಸಿಯು ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಎರಡು ಪ್ರಶ್ನೆ ಪತ್ರಿಕೆಗಳ ಭಾಷಾಂತರದಲ್ಲಿ 70 ಕ್ಕೂ ಹೆಚ್ಚು ಪ್ರಶ್ನೆಗಳು ತಪ್ಪಾಗಿದ್ದವು. ವಿವಾದ
ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅರ್ಥ ಮಾಡಿಕೊಳ್ಳುವುದೇ ಸವಾಲಾಗಿತ್ತು. ದೋಷಪೂರಿತ ಪ್ರಶ್ನೆಪತ್ರಿಕೆ ತಯಾರಿಸಿದ ಕೆಪಿಎಸ್ಸಿ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರ ಪರಿಣಾಮ ಸಿಎಂ ಸಿದ್ದರಾಮಯ್ಯ ಅವರು ಮರು ಪರೀಕ್ಷೆಗೆ ಆದೇಶಿಸಿದ್ದರು. ವಿವಾದ
ಮರುಪರೀಕ್ಷೆಯಲ್ಲೂ ಮತ್ತದೇ ಲೋಪ
ಸಿಎಂ ಸಿದ್ದರಾಮಯ್ಯ ಮರುಪರೀಕ್ಷೆಗೆ ಸೂಚಿಸಿದ ನಂತರವೂ ಕೆಪಿಎಸ್ಸಿ ಡಿ.29ರಂದು ನಡೆಸಿದ ಮರುಪರೀಕ್ಷೆಯಲ್ಲಿ ತನ್ನ ಎಡವಟ್ಟು ಮುಂದುವರಿಸಿತ್ತು. ಎರಡು ಪ್ರಶ್ನೆ ಪತ್ರಿಕೆಗಳಲ್ಲಿ ಒಟ್ಟು 79 ಪ್ರಶ್ನೆಗಳ ಭಾಷಾಂತರದಲ್ಲಿ ದೋಷಗಳಿದ್ದವು. ಆಗಲೂ ವಿದ್ಯಾರ್ಥಿ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಿದ್ದವು. ವಿವಾದ
ಆಗ ಲೋಕಸೇವಾ ಆಯೋಗವು ಆಂತರಿಕ ಸಮಿತಿ ರಚಿಸಿ, 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿತ್ತು. ಆದರೆ, ಇದನ್ನು ಒಪ್ಪದ ಕೆಲ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕೆಪಿಎಸ್ಸಿ ಕರ್ಮಕಾಂಡದ ವಿರುದ್ಧ ಹೈಕೋರ್ಟ್ ಕೂಡ ಚಾಟಿ ಬೀಸಿತ್ತು. ಈ ಸಂಬಂಧ ಪ್ರತಿಪಕ್ಷಗಳು ಸದನದಲ್ಲಿ ಪ್ರಸ್ತಾಪಿಸಿ, ಕೆಪಿಎಸ್ಸಿಗೆ ಸುಧಾರಣೆ ತರುವಂತೆ ಒತ್ತಾಯಿಸಿದ್ದವು. ವಿವಾದ
ಹುಸಿಯಾದ ಸಿಎಂ ಅಭಯ
ಕೆಎಎಸ್ ಪೂರ್ವಭಾವಿ ಮರುಪರೀಕ್ಷೆ ಅವಾಂತರ ಖಂಡಿಸಿ ಹೋರಾಟ ತೀವ್ರವಾದ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದಲ್ಲಿ ವಿಪಕ್ಷಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಕೆಎಎಸ್ ಪೂರ್ವಭಾವಿ ಪರೀಕ್ಷೆಯ ವಿಷಯ ನ್ಯಾಯಾಲಯದಲ್ಲಿದೆ. ತೀರ್ಪು ಬಂದ ನಂತರ ಸರ್ವಪಕ್ಷದ ಸಭೆ ಕರೆದು ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ವಿಭಾಗದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಆದರೆ ಸಿಎಂ ಅಭಯ ಹುಸಿಯಾಗಿದೆ.
ನ್ಯಾಯಾಲಯದ ಮೊರೆ
ಕೆಪಿಎಸ್ಸಿ ಮರು ಪರೀಕ್ಷೆಯಲ್ಲಿ 79ಕ್ಕೂ ಹೆಚ್ಚು ತಪ್ಪುಗಳಾಗಿದ್ದವು. ಭಾಷಾಂತರದಲ್ಲಿ ಶೇ. 45-50 ರಷ್ಟು ದೋಷಗಳಿವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹೇಳಿತ್ತು. ಕೆಪಿಎಸ್ಸಿ ಆಂತರಿಕ ಸಮಿತಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಿ ಫಲಿತಾಂಶ ಪ್ರಕಟಿಸಿತ್ತು. ಇದರ ವಿರುದ್ಧ ಮತ್ತೆ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಹೈಕೋರ್ಟ್ ಮೊರೆ ಹೋಗಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಮೊದಲ ಹಂತದಲ್ಲಿ ಏ.28 ರಂದು 32 ಅಭ್ಯರ್ಥಿಗಳು, ಏ.29 ರಂದು 144 ಅಭ್ಯರ್ಥಿಗಳು ಹಾಗೂ ಮೇ 2 ರಂದು 119 ಅಭ್ಯರ್ಥಿಗಳು ಸೇರಿ ಒಟ್ಟು 295 ಅಭ್ಯರ್ಥಿಗಳಿಗೆ ಮುಖ್ಯಪರೀಕ್ಷೆ ಬರೆಯಲು ಅವಕಾಶ ನೀಡಿತ್ತು.
ಇದನ್ನೂ ನೋಡಿ: english gramer Janashakthi Media