ನವದೆಹಲಿ: ಆಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 7,25,000 ಮಂದಿ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಗೇಟ್ ಪಾಸ್ ನೀಡಿದ್ದು, ಭಾರತೀಯರಲ್ಲಿ ಆತಂಕ ಶುರುವಾಗಿದೆ. ಈಗ 7.25 ಲಕ್ಷ ಮಂದಿ ಭಾರತೀಯರು ಸ್ವದೇಶಕ್ಕೆ ಗಡೀಪಾರುಗೆ ಆಮೆರಿಕಾ ಕ್ರಮ ಕೈಗೊಂಡಿದೆ.
ಈ ಕಠಿಣ ನಿರ್ಧಾರವು ಡೋನ್ಲಾಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಕೈಗೊಂಡಿದ್ದು, ಅಮೆರಿಕಾದಲ್ಲಿ ನೆಲೆಸಿರುವ ವಿಶ್ವದ ಹಲವು ದೇಶಗಳ ಅಕ್ರಮ ವಲಸಿಗರಿಗೆ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವವರ ಪೈಕಿ ಭಾರತೀಯರೇ ಮೂರನೇ ಅತಿ ದೊಡ್ಡ ಗುಂಪು ಎನ್ನಲಾಗಿದೆ.
ಇದನ್ನ ಓದಿ: ನಾಳೆ ಮಡಿಕೇರಿ ನಗರದಲ್ಲಿ ಮದ್ಯ ಮಾರಾಟ ನಿಷೇಧ.
ಹೀಗಾಗಿ ಲಕ್ಷಾಂತರ ಭಾರತೀಯರು ಅತಂತ್ರರಾಗುವ ಆತಂಕದಲ್ಲಿದ್ದು, ಈ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ಬದ್ಧ ಭಾರತೀಯ ನಾಗರಿಕರನ್ನು ಭಾರತಕ್ಕೆ ಬಿಟ್ಟುಕೊಳ್ಳಲು ಭಾರತ ಸಿದ್ಧವಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಕೇವಲ ಅಮೆರಿಕ ಮಾತ್ರವಲ್ಲ, ಯಾವುದೇ ದೇಶದಲ್ಲಾಗಲೀ ಭಾರತ ನಾಗರಿಕರಿದ್ದರೇ, ಕಾನೂನು ಬದ್ಧವಾಗಿ ಸ್ವದೇಶಕ್ಕೆ ಮರಳಲು ಭಾರತ ಅವಕಾಶ ಮಾಡಿಕೊಡಲಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಇದನ್ನೂ ನೋಡಿ: ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ