6796 ಸರ್ಕಾರಿ ಶಾಲಾಗಳ ವಿಲೀನಕ್ಕೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶಿಫಾರಸು

ಬೆಂಗಳೂರು: ಶಾಲಾ ಮಕ್ಕಳ  ಹಾಜರಾತಿ ಕಡಿಮೆ ಇರುವ ಸಮೀಪ ಅಂದರೆ, 100 ಮೀಟರ್‌ ಅಂತರದಲ್ಲಿರುವ 3457 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು 1667 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಲೀನಗೊಳಿಸಬಹುದು ಹಾಗೂ 3339 ಶಾಲೆ-ಕಾಲೇಜುಗಳನ್ನು ವಿಲೀನಗೊಳಿಸಿ ಅದನ್ನು ಸಮೂಹ ಪ್ರೌಢಶಾಲೆಗಳಾಗಿ ಪರಿವರ್ತಿಸಬಹುದೆಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಆಡಳಿತ ಸುಧಾರಣೆಗೆ ಸಲಹೆ ನೀಡಲು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯೋಗವು ನಾಲ್ಕು ಮತ್ತು ಐದನೇ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೆನ್ನೆ(ಫೆಬ್ರವರಿ 03) ಸಲ್ಲಿಸಿತು. ಈ ವರದಿಯಲ್ಲಿ ಶಾಲೆಗಳ ವಿಲೀನ ಹಾಗೂ ಮೇಲ್ದರ್ಜೆಗೆ ಏರಿಸಲು ಸಲಹೆ ನೀಡಲಾಗಿದೆ.

ಇದನ್ನು ಓದಿ: 6 ಖಾಸಗಿ ಶಾಲೆಗೆ ಪರವಾನಗಿ : 26 ಸರಕಾರಿ ಶಾಲೆಗೆ ಬೀಗ

ಪ್ರೌಢ ಕಿಶೋರಿಯರ ಯೋಜನೆಯನ್ನು ವಿಸ್ತರಿಸಬೇಕೆಂದಿರುವ ಆಯೋಗವು ಶಾಲೆಯಿಂದ ಹೊರಗುಳಿದಿರುವ 15 ರಿಂದ 18 ವರ್ಷದ ಬಾಲಕಿಯರಿಗೆ ಅನುಕೂಲವಾಗಲಿದೆ. ಶಾಲೆಗಳಿಗೆ ನೀಡುವ ವಾರ್ಷಿಕ ಅನುದಾನವನ್ನು ದ್ವಿಗುಣಗೊಳಿಸಬೇಕು. ಸಣ್ಣ ಶಾಲೆಗಳಿಗೆ ಕನಿಷ್ಠ ₹ 20 ಸಾವಿರದಿಂದ ₹ 2 ಲಕ್ಷದವರೆಗೆ ನೀಡಬೇಕು ಎಂದು ಹೇಳಲಾಗಿದೆ.

879 ಕಿರಿಯ/ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ(ಕೆಪಿಎಸ್‌) ವಿಲೀನಗೊಳಿಸಬಹುದು. ಈ ಸೌಲಭ್ಯವನ್ನು ಖಾಸಗಿ ಆಡಳಿತ ಮಂಡಳಿಗಳ ಶಾಲೆಗಳಿಗೂ ಅನ್ವಯಿಸಬಹುದು ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿದೆ. ಸರಕಾರಿ ಶಾಲಾ ಕಟ್ಟಡದಿಂದ 300 ಮೀಟರ್‌ ಅಂತರದಲ್ಲಿರುವ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6307 ಅಂಗನವಾಡಿ ಕೇಂದ್ರಗಳನ್ನು ಸಮೀಪದ ಶಾಲಾ ಕಟ್ಟಡಕ್ಕೆ ಸ್ಥಳಾಂರಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ರಾಯಚೂರು ವಿವಿಗೆ ಅನುದಾನಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಮನವಿ

ವಾರದಲ್ಲಿ 5 ಮೊಟ್ಟೆ ನೀಡಲು ಸಲಹೆ

ಅಪೌಷ್ಟಿಕತೆ ನಿವಾರಣೆ ಸಂಬಂಧಪಟ್ಟಂತೆ ಕೆಲವು ಮಹತ್ವದ ಶಿಫಾರಸ್ಸು ಮಾಡಿರುವ ಆಯೋಗವು, ಆರು ತಿಂಗಳಿನಿಂದ 3 ವರ್ಷ ವಯಸ್ಸಿನ ತೀವ್ರ ಅಪೌಷ್ಟಿಕತೆ ಹಾಗೂ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸದ್ಯ ವಾರಕ್ಕೆ 2 ಮೊಟ್ಟೆ ನೀಡಲಾಗುತ್ತಿದ್ದು, ಅದನ್ನು ಐದು ಮೊಟ್ಟೆಗೆ ಹೆಚ್ಚಿಸಬಹುದು. ಹಾಗೆಯೇ ಸಾಮಾನ್ಯ ಮಕ್ಕಳಿಗೂ ವಾರಕ್ಕೆ 2 ಮೊಟ್ಟೆ ನೀಡಬಹುದು ಎಂದು ಸಲಹೆ ನೀಡಿದೆ.

ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿ ಕೋಟಾ

ಗ್ರಾಮೀಣ ಕೋಟಾದಲ್ಲಿ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಶೇ 3.45ರಷ್ಟಿದೆ. ಸಿಬಿಎಸ್‌ಇ , ಐಸಿಎಸ್‌ಇ ವಿದ್ಯಾರ್ಥಿಗಳು ಈ ಕೋಟಾ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಕೋಟಾವನ್ನು ‘ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿ ಕೋಟಾ’ವಾಗಿ ಪರಿವರ್ತಿಸಬೇಕು. ಅಥವ ಶೇ 7.5ರಷ್ಟು ಸೀಟುಗಳನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಾಗಿಯೇ ಮೀಸಲಿಡಬೇಕು. ಗ್ರಾಮೀಣ ವ್ಯಾಸಂಗ, ಕನ್ನಡ ಮಾಧ್ಯಮ, ಹೈದರಬಾದ್‌ ಕರ್ನಾಟಕ ಪ್ರಮಾಣ ಪತ್ರಗಳ ಸಿಂಧುತ್ವವನ್ನು ಜೀವಿತಾವಧಿಗೆ ವಿಸ್ತರಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಇದನ್ನು ಓದಿ: ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಬೃಹತ್ ಪ್ರತಿಭಟನೆ

ಕ್ರೀಡಾ ಚಟುವಟಿಕೆಗಳಿಗೆ, ಅಸಂಘಟಿತ ಕಾರ್ಮಿಕರಿಗೆ, ದುರ್ಬಲ ವರ್ಗಗಳ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳಿಂದ ಸೆಸ್‌ ಸಂಗ್ರಹಿಸಬಹುದು. ವಿವಿಧ ಶುಲ್ಕಗಳನ್ನು ಪರಿಷ್ಕರಿಸಬಹುದು. ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮಸೂದೆಯನ್ನು ತ್ವರಿತವಾಗಿ ಅಂತಿಮಗೊಳಿಸಬೇಕು. ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಹೊರಗಿನ ಮಾರಾಟಕ್ಕೆ ಶುಲ್ಕ ವಿಧಿಸಬಾರದು, ಪರವಾನಗಿ ಕಡ್ಡಾಯ ಮಾಡಬೇಕು. ನಿರಂತರ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರತಿ ಕಚೇರಿಯಲ್ಲೂ ‘ಕಾರ್ಯ ಸುಧಾರಣಾ ತಂಡ’ ರಚಿಸಬೇಕು ಎಂದು ವಿವರಿಸಲಾಗಿದೆ.

ಸರ್ಕಾರಿ ವೈದ್ಯರ ಖಾಸಗಿ ವೃತ್ತಿ ನಿಷೇಧ

ಕೇಂದ್ರ ಸರಕಾರದ ವೈದ್ಯಕೀಯ ಸಂಸ್ಥೆಗಳು ಹಾಗೂ ಸಿಜಿಎಚ್‌ಎಸ್‌ನಲ್ಲಿರುವಂತೆ ಎಲ್ಲ ಇಲಾಖೆಗಳ ಸರಕಾರಿ ವೈದ್ಯರ ಖಾಸಗಿ ವೃತ್ತಿ ನಿಷೇಧಿಸಬೇಕೆಂದಿರುವ ಆಯೋಗವು, ಸರಕಾರಿ ವೈದ್ಯರಿಗೆ ಪ್ರತಿ ವರ್ಷದ ಗ್ರಾಮೀಣ ಸೇವೆಗೆ ಶೇ.10 ಅಂಕಗಳಂತೆ ಗರಿಷ್ಠ ಶೇ.30ರಷ್ಟು ಅಂಕಗಳವರೆಗೆ ನೀಟ್‌ ಪಿಜಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಪರಿಗಣಿಸಬಹುದು.

ಸರಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿ ಪ್ರಾರಂಭ. 1000ಕ್ಕೂ ಹೆಚ್ಚು ಪಶು ಔಷಧಾಲಯ (ವಿಡಿ) ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ(ಪಿವಿಸಿ) ಶೌಚಾಲಯ, ಜಾನುವಾರುಗಳಿಗೆ ನೀರಿನ ತೊಟ್ಟಿ, ಇತ್ಯಾದಿ ಒದಗಿಸಬಹುದು. ತುರ್ತು ಸಂದರ್ಭದ ಔಷಧ ಖರೀದಿಗಾಗಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಗೆ ವಾರ್ಷಿಕ 15000 ರೂ., ಪಶು ಔಷಧಾಲಯಗಳಿಗೆ 25,000 ರೂ. ಹಾಗೂ ಹೋಬಳಿ ಕೇಂದ್ರ ಕಚೇರಿಯಲ್ಲಿರುವ ಪಶು ಔಷಧಾಲಯಗಳಿಗೆ 50,000 ಅನುದಾನ ನೀಡಬಹುದೆಂದು ತಿಳಿಸಲಾಗಿದೆ.

ಇದನ್ನು ಓದಿ: ಸರಕಾರಿ ಶಾಲೆ ವಿಲೀನ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಆಡಳಿತ ಸುಧಾರಣೆ ದೃಷ್ಟಿಯಿಂದ ಆಯೋಗವು ನಾಲ್ಕನೇ ವರದಿಯಲ್ಲಿ 940 ಹಾಗೂ ಐದನೇ ವರದಿಯಲ್ಲಿ 669 ಶಿಫಾರಸ್ಸು ಸೇರಿದಂತೆ ಒಟ್ಟು 1609 ಶಿಫಾರಸ್ಸು ವರದಿಯನ್ನು ಸಲ್ಲಿಸಿದೆ.  ಸಚಿವ ಗೋವಿಂದ ಕಾರಜೋಳ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ಆಯೋಗದ ಸಲಹೆಗಾರರಾದ ಎನ್‌ ಎಸ್‌ ಪ್ರಸನ್ನ ಕುಮಾರ್‌ ಪಾಲ್ಗೊಂಡಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

One thought on “6796 ಸರ್ಕಾರಿ ಶಾಲಾಗಳ ವಿಲೀನಕ್ಕೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶಿಫಾರಸು

Leave a Reply

Your email address will not be published. Required fields are marked *