6,366 ಕೋಟಿ ನರೇಗಾ ವೇತನ ಬಾಕಿ ಉಳಿಸಿಕೊಂಡಿರುವ ಮೋದಿ ಸರ್ಕಾರ: ಖರ್ಗೆ ಆರೋಪ

ನವದೆಹಲಿ:  ಬಜೆಟ್‌ನಲ್ಲಿ ಮೂರನೇ ಒಂದು ಭಾಗದಷ್ಟು ಕಡಿತದ ನಂತರವೂ ನರೇಗಾ (ಮಹಾತ್ಮಗಾಂಧಿ ಗ್ರಾಮೀನ ಉದ್ಯೋಗ ಖಾತರಿ) ಯೋಜನೆ ಅಡಿಯಲ್ಲಿ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 6366 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು  ಟ್ವೀಟ್‌ ಮಾಡಿರುವ ಖರ್ಗೆ , 2005 ಆಗಷ್ಟ್‌ 23ರಂದು ಕಾಂಗ್ರೆಸ್‌  ಸರ್ಕಾರ ನರೇಗಾ ಯೋಜನೆಯನ್ನು ಪ್ರಾರಂಭಿಸಿತು ಇದರಿಂದ ದೇಶದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ ಎಂದು ನರೇಗಾ ಯೋಜನೆಯನ್ನು ಅವರು ಖರ್ಗೆ ಶ್ಲಾಘಿಸಿದರು.

ಕೇಂದ್ರ ಸರ್ಕಾರ ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನರೇಗಾ ಯೋಜನೆಯಡಿ ನೀಡಬೇಕಾದ 6,366 ಕೋಟಿಯಷ್ಟು ಹಣವನ್ನುಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಮೋದಿ ಸರ್ಕಾರ ಚುನಾವಣಾ ಆಯೋಗದ ಮೇಲಿನ ಹಿಡಿತ ಖಚಿತಪಡಿಸಿಕೊಳ್ಳಲು ಯತ್ನ: ಕಾಂಗ್ರೆಸ್‌

ಈ ಯೋಜನ ಅಡಿಯಲ್ಲಿ ದೇಶದ 14 ಕೋಟಿ ಕಾರ್ಮಿಕರು ಸಕ್ರಿಯರಾಗಿದ್ದಾರೆ, ಇವರಲ್ಲಿ 8 ಕೋಟಿಯಷ್ಟು ಮಹಿಳೆಯರು ಇದ್ದಾರೆ. ಈ ಯೋಜನೆ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಖರ್ಗೆ ಹೇಳಿದ್ದಾರೆ ಕೋವಿಡ್‌ ಸಂದರ್ಭದಲ್ಲಿ ನರೇಗಾ ಯೋಜನೆ ಕೊಟ್ಯಾಂತರ ಜನರಿಗೆ ಜೀವನ ಭದ್ರತೆ ಒದಗಿಸಿತು.ಮನೆಯಲ್ಲಿ ಕುಳಿತ ಕಾರ್ಮಿಕರಿಗೆ ಭದ್ರತೆ ನೀಡಿತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *